ಸ್ಪೂರ್ತಿ ಫೌಂಡೇಶನ್ ಕಾರ್ಯ ಶ್ಲಾಘನೀಯ- ಅಮೃತಾನಂದ ಮಹಾಸ್ವಾಮಿ

ವಿಜಯಪುರ: ಸ್ಪೂರ್ತಿ ಫೌಂಡೇಶನ್ ನಾನಾ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ಅಮೃತಾನಂದ ಮಹಾಸ್ವಾಮೀಜಿ ಹೇಳಿದ್ದಾರೆ.

ಫೌಂಡೇಶನ್ ವತಿಯಿಂದ ಸ್ಪೂರ್ತಿ ಫೌಂಡೇಶನ್ ವತಿಯಿಂದ ನಗರದ ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಫೌಂಡೇಶನ್ ಬಹಳಷ್ಟು ಸಾಮಾಜಿಕ ಕೆಲಸ ಮಾಡುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ.  ಬಡ ಮಕ್ಕಳಿಗಾಗಿ ಓದುವುದಕ್ಕಾಗಿ ಗ್ರಂಥಾಲಯ ವ್ಯವಸ್ಥೆ ಮಾಡಿರುವುದು, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಒದಗಿಸಿದಂತಾಗಿದೆ.  ಈಗ ಸ್ವಚ್ಛತೆ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಿಸರ ನೈರ್ಮಲ್ಯದ ಸೇವೆ ಮಾಡುತ್ತಿದೆ.  ಈ ಸಂಘಟನೆಯ ಸ್ನೇಹಿತರ ಬಳಗ ಸಾಮಾಜಿಕ ಕಾರ್ಯಗಳನ್ನು ಹೇಗೆ ಮಾಡಬೇಕು? ನಮಗೆ ಎಲ್ಲವನ್ನೂ ನೀಡುವ ಸಮಾಜಕ್ಕೆ ನಮ್ಮ ಕೈಲಾದಷ್ಟು ಮರಳಿ ನೀಡಲೇಬೇಕು ಎಂದು ಸದುದ್ದೇಶ ಹೊಂದಿದೆ.  ಇದು ಶ್ಲಾಘನೀಯ ಎಂದು ಸ್ವಾಮೀಜಿ ಹೇಳಿದರು.

ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಸ್ಪೂರ್ತಿ ಫೌಂಡೇಶನ್ ಕಾರ್ಯಕರ್ತರು ಸ್ವಚ್ಥತೆ ಕಾರ್ಯಕ್ರಮದಲ್ಲಿ ಪಾಲ್ಗೋಂಡರು

ಸ್ಪೂರ್ತಿ ಪೌಂಢೇಶನ್ ಅಧ್ಯಕ್ಷ ಮತ್ತು ನ್ಯಾಯವಾದಿ ಅರುಣ ಹುಂಡೇಕರ ಮಾತನಾಡಿ, ಪೌಂಢೇಶನ್ ವತಿಯಿಂದ ಸ್ವಚ್ಛತಾ ಕಾರ್ಯ ಆಯೋಜಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ.  ಇದರಲ್ಲಿ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.  ನಗರದ ಹಲವಾರು ಕಡೆ ಸ್ವಚ್ಛತೆ ಮಾಡಲಾಗುವುದು.  ಶಾಸಕರ ಅವಿರತ ಶ್ರಮದಿಂದಾಗಿ ನಮ್ಮ ವಿಜಯಪುರದಲ್ಲಿ ಎಲ್ಲಾ ಕಡೆ ಸಿಸಿ ರಸ್ತೆಗಳಾಗಿವೆ.  ಇದರಿಂದ ನಮ್ಮ ಜಿಲ್ಲೆ ಸ್ವಚ್ಛತೆಯಲ್ಲಿ 6ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಐ.ಆರ್‌.ಎಸ್ ಅಧಿಕಾರಿ ಶ್ರೀನಿವಾಸ ಬಿದರಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಉಮೇಶ ವಂದಾಲ, ಮುಖಂಡರಾದ ಸುಭಾಸ ಬಗಲಿ, ಬಸವರಾಜ ಪಾಟೀಲ, ವಿನಯ ಕೀರಸಾಗರ, ಬಾಬು ಗಂಜಲಕೇಡ, ಡಾ. ಶೈಲಜಾ ಪಾಟೀಲ, ಪದ್ಮಜಾ ಬಿದರಿ, ಮುತ್ತು ಹಕ್ಕಾಪಕ್ಕಿ, ಅರವಿಂದ ಹುಂಡೇಕಾರ ಹಾಗೂ ಸ್ಪೂರ್ತಿ ಪೌಂಡೇಶನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌