ವಿಜಯಪುರ: ಬಂಜಾರಾ ಸಮುದಾಯದ ಜನ ಶ್ರಮಜೀವಿಗಳು. ಯಾವುದೇ ಜಲಾಷಯ, ಸೇತುವೆ ಸೇರಿದಂತೆ ಕಟ್ಟಡಗಳ ನಿರ್ಮಾಣದಲ್ಲಿ ಬೆವರ ಹನಿ ಇದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌರ‍್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ಮಂಗಳವಾರ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ. 1ರಲ್ಲಿ ದರ‍್ಗಾದೇವಿ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರಾ ಮಹಿಳೆಯರೂ ಕೂಡ ಶ್ರಮಜೀವಿಯಾಗಿ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಭಕ್ತಿ ಮತ್ತು ಶ್ರದ್ಧೆಗೆ ಈ ಸಮುದಾಯ ಹೆಸರುವಾಸಿಯಾಗಿದ್ದು, ದೇವರನ್ನು ನಂಬಿಕೊಂಡು ಕೆಲಸ ಮಾಡುತ್ತಾರೆ. ಈ ಸಮುದಾಯದ ಈ ಹಿಂದೆಯೂ ನಾನಿದ್ದೆ. ಈಗಲೂ ಇದ್ದೇನೆ. ಮುಂದೆಯೂ ಸದಾಕಾಲ ಇರುತ್ತೇನೆ ಎಂದು ಸಚಿವರು ಹೇಳಿದರು.
ಬಂಜಾರಾ ಸಮುದಾಯಕ್ಕೆ ಸೇರಿದ ಯಾವ ಜನಪ್ರತಿನಿಧಿಗಳೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಲಂಬಾಣಿ ತಾಂಡಾಗಳಲ್ಲಿ ಮಾಡಿದ್ದೇನೆ. ನಮ್ಮ ಪ್ರತಿಯೊಂದು ತಾಂಡಾದಲ್ಲಿ ಕನಿಷ್ಠ ರೂ. 50 ಲಕ್ಷ ದಿಂದ ಮರ‍್ನಾಲ್ಕು ಕೋಟಿ ರೂಪಾಯಿ ಅನುದಾನದಲ್ಲಿ ನಾನಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಜಯಪುರದಲ್ಲಿ ರೂ. 10 ಕೋ. ವೆಚ್ಚದಲ್ಲಿ ಹಾಮುಲಾಲ ದೇವಸ್ಥಾನಕ್ಕೆ ನಿವೇಶನ ನೀಡಿ ಕಟ್ಟಡ ನರ‍್ಮಾಣಕ್ಕೆ ರೂ. 3.50 ಅನುದಾನ ನೀಡಿದ್ದೇನೆ. ಆರ‍್ಶ ನಗರದಲ್ಲಿ ರಾಮರಾವರ ಹೆಸರಿನಲ್ಲಿ ಸಮುದಾಯ ಭವನ ನರ‍್ಮಿಸಿದ್ದೇನೆ ಎಂದು ಅವರು ಹೇಳಿದರು.
ಮಹಿಷಾಸುರನ ಅನುಯಾಯಿಗಳ ಬೆನ್ನುಹತ್ತಬೇಡಿ
ದುಷ್ಟ ಶಕ್ತಿಯನ್ನು ನಾಶ ಮಾಡಿ ಒಳ್ಳೆಯದನ್ನು ಉಳಿಸಿ ಬೆಳೆಸಲು ದಸರಾ ಆಚರಿಸಲಾಗುತ್ತದೆ. ತಾವೂ ಕೂಡ ಜಾಗೃತರಾಗಬೇಕು. ನಿಮ್ಮ ಪರವಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ. ಮಹಿಷಾಸುರನ ಅನುಯಾಯಿಗಳನ್ನು ಬೆನ್ನು ಹತ್ತಬೇಡಿ. ಮಾನವೀಯತೆ ಇರುವವರನ್ನು ಬೆಂಬಲಿಸಿ. ದುಡಿದವರಿಗೆ ಪಗಾರ ಕೊಡಿ. ಒಳ್ಳೆಯದನ್ನು ಬೆಳೆಸಿ ಪ್ರೋತ್ಸಾಹಿಸಿದರೆ ದರ‍್ಗಾದೇವಿ ಮೆಚ್ಚುತ್ತಾಳೆ. ದರ‍್ಗಾದೇವಿಯ ಆಶರ‍್ವಾದ ನನ್ನ ಮೇಲಿದೆ ಎಂದು ಅವರು ಹೇಳಿದರು.
ಜಗನು ಮಹಾರಾಜರು ಸುಕ್ಷೇತ್ರವನ್ನಾಗಿ ಮಾಡಿದ್ದಾರೆ
ಜಗನು ಮಹಾರಾಜರೂ ಅಷ್ಟೇ ಶ್ರಮಜೀವಿಗಳಾಗಿದ್ದಾರೆ. ಮಳೆ, ಬಿಸಿಲು ಲೆಕ್ಕಿಸದೇ ಹಲವಾರು ಬಾರಿ ಏಕಾಂಗಿಯಾಗಿ ದೇಶಸುತ್ತಿ ಸೋಮದೇವರಹಟ್ಟಿ ಎಲ್.ಟಿ-1ರಲ್ಲಿ ದರ‍್ಗಾದೇವಿ ದೇವಸ್ಥಾನ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಸುಕ್ಷೇತ್ರವನ್ನಾಗಿ ಹೆಸರುವಾಸಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಿ ಕೊಡುವುದಾಗಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದರು.
ಇದೇ ವೇಳೆ ಸಚಿವರು ದರ‍್ಗಾದೇವಿ ದೇವಸ್ಥಾನದಲ್ಲಿ ರ‍್ಶನ ಪಡೆದರು. ಸಚಿವರನ್ನು ದೇವಸ್ಥಾನದ ಮಹಾರಾಜರು ಸತ್ಕರಿಸಿ ಆಶೀರ್ವದಿಸಿದರು.
ಈ ಸಂರ‍್ಭದಲ್ಲಿ ದೇವಸ್ಥಾನದ ಜಗನು ಮಹಾರಾಜರು, ಮುಖಂಡರಾದ ಡಿ. ಎಲ್. ಚವ್ಹಾಣ, ಸೋಮನಾಥ ಬಾಗಲಕೋಟ, ಅನಿಕೇತ, ಭೀಮು ರಾಠೋಡ ಮುಂತಾದವರು ಉಪಸ್ಥಿತರಿದ್ದರು.