ವಿಜಯಪುರ: ಹೃದಯಾಘಾತ ಮತ್ತು ಪ್ರಥಮ ಚಿಕಿತ್ಸೆ ಕುರಿತ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ನಡೆಯಿತು.
ಪಾರ್ಮಸಿ ಕಾಲೇಜು ಮತ್ತು ರಾಘವೇಂದ್ರ ಕಾರ್ಡಿಯೊ ಕೇರ್ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಾಗಾರವನ್ನು ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೃದಯ ರೋಗ ಖ್ಯಾತ ವೈದ್ಯರಾದ ಡಾ. ಕಿರಣ್ ಚುಳಕಿ ಮತ್ತು ಡಾ. ದೀಪಕ ಕಡೇಲಿ ಅವರು ಹೃದಯಾಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ಮನದಟ್ಟು ಮಾಡಿದರು. ಅಲ್ಲದೇ, ಹೃದಯದಲ್ಲಿರುವ ನಾನಾ ಅಂಗಾAಗಳು, ರಕ್ತಸಂಚಾರ ನಾಳಗಳು, ಅವುಗಳ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಹೃದಯಾಘಾತ ಸಂಭವಿಸಿದಾಗ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ನೀಡಬೇಕಾದ ಔಷಧಿಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ. ಎಸ್. ಝಡ್ ಇನಾಮದಾರ, ಡಾ. ಸುಶೀಲ್ ಪಿ. ಎಲ್, ಡಾ. ಕೃಷ್ಣ ದೇಶಪಾಂಡೆ, ಡಾ. ಮಲ್ಲಿನಾಥ ಪಿ, ಡಾ. ಸುನಂದಾ ಎನ್. ಮತ್ತು ಶ್ರೀಮತಿ ಧನವಂತಿ ರುಣವಾಲ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಶೆಟ್ಟಿ, ಮೌಲ್ಯವರ್ಧಿತ ಕೋರ್ಸ್ನ ಪ್ರಭಾರಿ ಡಾ. ಶ್ರೀಪಾದ ಪೋತದಾರ, ಬಿಎಲ್‌ಡಿಇ ಫಾರ್ಮಸಿ ಕಾಲೇಜಿನ ಸಂಪೂರ್ಣ ಸಿಬ್ಬಂದಿಯೊAದಿಗೆ ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಔಷದ ವಿಜ್ಞಾನ ವಿಭಾಗದ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.