ಬಸವೇಶ್ವರರ ಜನ್ಮಭೂಮಿ ಅಭಿವೃದ್ಧಿ ಪಡಿಸಿ ಕುರುಹು ಉಳಿಸುವ ಕೆಲಸವಾಗಬೇಕು- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿ ಅಭಿೃವೃದ್ಧಿ ಪ್ರಾಧಿಕಾರ ರಚಿಸಬೇಕು.  ಅವರ ಕುರುಹು ಉಳಿಸುವ ಕೆಲಸ ನಡೆಯಬೇಕು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಎ. ಪಿ. ಎಂ. ಸಿ. ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಸವೇಶ್ವರರ ಹೆಸರು ಈಗಾಗಲೇ ಪ್ರಚಲಿತವಾಗಿದೆ.  ಬಸವೇಶ್ವರರ ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಎಂಬುದು ಜಗತ್ತಿಗೆ ಜಗಜ್ಜಾಹೀರು ಆಗಿದೆ.  ಆದರೆ, ಯಾವುದೇ ಸರಕಾರ ಬರಲಿ.  ಈ ಸರಕಾರವೇ ಇರಲಿ, ಬೇರೆ ಸರಕಾರವೇ ಬರಲಿ, ಬಸವಣ್ಣನವರ ಜನ್ಮಭೂಮಿ ಬಗ್ಗೆ ಅವರಿಗೆ ಸ್ವಾಭಿಮಾನ ಇಲ್ಲ.  ಅದನ್ನು ಅಭಿವೃದ್ಧಿ ಪಡಿಸಲು ನಾವು ಶಾಸಕರು, ಸಚಿವರು ಅನುದಾನ ತರುವುದರಿಂದ ಅದರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಿಳಿಸಿದರು.

ಬಸವಣ್ಣ ದೇಶದ ಸುಧಾರಕರು.  ಅಷ್ಟೇ ಅಲ್ಲ, ಜಗತ್ತಿನಲ್ಲಿಯೂ ಪ್ರಖ್ಯಾತಿ ಪಡೆದಂಥವರು.  ಆದರೆ, ಹೆಸರು ಬದಲಾವಣೆ ಮಾಡುವುದರಿಂದ ಅವರ ಹಿರಿಮೆ, ಅವರ ಗರಿಮೆಯನ್ನು ನಾವು ಜಗತ್ತಿಗೆ ಪರಿಚಯಿಸುತ್ತೇವೆ ಎಂಬುದು ಕಷ್ಟ.  ನನ್ನ ವಿನಂತಿ ಏನೆಂದರೆ, ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಲು ಇನ್ನೂ ಕೂಡಲ ಸಂಗಮ ಅಭಿವೃದ್ಧಿಯಾಗಿಲ್ಲ.  ಬಸವ ಜನ್ಮಭೂಮಿಯೂ ಅಭಿವೃದ್ಧಿಯಾಗಿಲ್ಲ.  ಅದರ ಕಡೆಗೆ ಹೆಚ್ಚು ಒತ್ತು ಕೊಟ್ಟರೆ ಮುಖ್ಯಮಂತ್ರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಬಸವ ಜನ್ಮಭೂಮಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ ಅಗತ್ಯ

ಬಸವ ಜನ್ಮಭೂಮಿಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಸವಣ್ಣನ ಅಭಿಮಾನಿ ಎಂದು ಹೇಳಿ ಬಸವಣ್ಣನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ ಅದು ನನ್ನ ಸಾಧನೆಯಲ್ಲ.  ನನಗೆ ಅಭಿಮಾನ ಇರುವ ಕಾರಣ ನಾನು ಅದನ್ನು ಮಾಡಬಹುದೇ ವಿನಃ ಅಧಿಕಾರದಲ್ಲಿರುವ ಯಾರೇ ಮುಖ್ಯಮಂತ್ರಿಯಾಗಲಿ ಇವತ್ತು ಬಸವಣ್ಣನ ಜನ್ಮಭೂಮಿ ಬಗ್ಗೆಯೂ ಗಮನ ಹರಿಸಬೇಕು.  ಬಸವಣ್ಣನವರ ಕರ್ಮಭೂಮಿಯ ಬಗ್ಗೆ ನಿಮಗೆ ಅಭಿಮಾನ ಇರುವ ಕಾರಣ ಅಲ್ಲಿ ಏನೋ ಒಂದು ಮಾಡಿರಬಹುದು.  ನಾನು ಇಲ್ಲ ಎಂದು ಹೇಳುವುದಿಲ್ಲ.  ಆದರೆ, ಅದೂ ಕೂಡ ಇನ್ನೂ ಕಾರ್ಯಗತವಾಗಿಲ್ಲ.  ಆದರೆ, ಜಗತ್ತಿಗೆ ಏನಾದರೂ ತೋರಿಸಲು ಅವರ ಜನ್ಮಭೂಮಿಯಲ್ಲಿ ಒಂದು ಒಳ್ಳೆಯ ಕೆಲಸವಾಗಬೇಕು.  ಯಾವುದೇ ಸರಕಾರ ಇರಲಿ ಈ ಕೆಲಸ ಮಾಡಬೇಕಿತ್ತು ಎಂದು ಅವರು ಹೇಳಿದರು.

ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅನುದಾನ ನೀಡಲು ಒತ್ತಾಯ

ಬಸವಣ್ಣನ ಜನ್ಮಭೂಮಿಗೆ ಪ್ರತೇಕ ಅಭಿವೃದ್ಧಿ ಪ್ರಾಧಿಕಾರ ಮಾಡುವುದಾಗಿ ಪ್ರಚಾರಕ್ಕೆ ಬಂದಾಗ ಎಸ್. ಸಿದ್ಧರಾಮಯ್ಯ ಘೋಷಣೆ ಮಾಡಿ ಹೋಗಿದ್ದಾರೆ.  ನಾವೂ ಒತ್ತಾಯ ಮಾಡುತ್ತೇವೆ.  ಅದನ್ನು ಮಾಡಿದರೆ ಒಳ್ಳೆಯದು.  ಕೇವಲ ಘೋಷಣೆ ಮಾಡಿದರೆ ಆಗುವುದಿಲ್ಲ.  ಮುಖ್ಯಮಂತ್ರಿಗಳು ಏನಾದರೂ ಅನುದಾನ ಕೊಟ್ಟರೆ ನಾನೂ ಕೂಡ ಕೃತಜ್ಞತೆ ಹೇಳುತ್ತೇನೆ ಎಂದು ಅವರು ತಿಳಿಸಿದರು.

ಜಿಲ್ಲೆಯ, ರಾಜ್ಯದ ಹೆಸರು ಮರುನಾಮಕರಣ ವಿಚಾರ

ಜಿಲ್ಲೆಗೆ ಮತ್ತು ರಾಜ್ಯಕ್ಕೆ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೇಳಿ ಬರುತ್ತಿರುವ ಒತ್ತಾಯ ರಾಜಕೀಯದಿಂದ ಕೂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಪುರ ಎಂಬುದು ಜಗತ್ತಿಗೆ ಪ್ರಸಿದ್ಧವಾಗಿರುವ ವಿಚಾರ.  ಗೋಳಗುಮ್ಮಟ, ಐತಿಹಾಸಿಕ ಸ್ಮಾರಕ ಇರುವುದರಿಂದ ಅದು ಪ್ರಸಿದ್ಧವಾಗಿದೆ.  ಬಸವ ಜನ್ಮಭೂಮಿ ಎಂದಾಗ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಎಂದು ಜನ ಹೇಳುತ್ತಾರೆ.  ಬಸವೇಶ್ವರ ಹೆಸರನ್ನು ಜಿಲ್ಲೆಗೆ ಇಟ್ಟರೆ ನಾವು ಹೇಳಲೂ ಕೂಡ ಕಷ್ಟವಾಗುತ್ತದೆ ಎಂದು ಶಿವಾನಂದ ಎಸ್. ಪಾಟೀಲ ಮಾರ್ಮಿಕವಾಗಿ ಹೇಳಿದರು.

ರಾಜ್ಯಕ್ಕೆ ಬಸವೇಶ್ವರ ಹೆಸರು ಇಡುವ ಕುರಿತು

ರಾಜ್ಯಕ್ಕೆ ಬಸವೇಶ್ವರರ ಹೆಸರು ಇಡಬೇಕಾ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅ;ರು, ಅದು ಸ್ತುತ್ಯವಾದಂಥ ವಿಚಾರ ಅಲ್ಲ.  ರಾಜಕೀಯ ಗಿಮಿಕ್ ಗಾಗಿ ಮಾಡಬಾರದು.  ರಾಷ್ಟ್ರೀಯ ಪುರುಷರು ಯಾರೇ ಇರಲಿ, ಅವರನ್ನು ರಾಷ್ಟ್ರೀಯ ದೃಷ್ಠಿಕೋನದಿಂದಲೇ ನೋಡಬೇಕು ವಿನಃ ರಾಜಕೀಯ ದೃಷ್ಠಿಕೋನದಿಂದ ನೋಡಬಾರದು.  ಅದು ನನಗೆ ರಾಜಕೀಯ ಅಭಾಸ ಎನಿಸುತ್ತದೆ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಹೆಸರು ಬದಲಾವಣೆ ಪ್ರಸ್ತಾಪಿಸಿ ಹೊಸದಾಗಿ ಲಾಭ ಪಡೆಯುವ ಪ್ರಯತ್ನವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಥರ ಮಾಡಿದ್ದರೆ ಅದು ತಪ್ಪು.  ನಮ್ಮವರೇ ಮಾಡಲಿ, ಅಥವಾ ಬೇರೆ ಯಾರೇ ಮಾಡಲಿ.  ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಉತ್ತರಿಸಿದರು.

ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಬೇಡಿಕೆಗೆ ಮನ್ನಣೆ ಸಿಕ್ಕರೆ ಉಳಿದ ಜಿಲ್ಲೆಯವರು ಕೇಳುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಕಷ್ಟ.  ನಾಳೆ ಬೀದರ್ ನವರೂ ಕೇಳಬಹುದು.  ಬಸವಣ್ಣನವರ ಕರ್ಮಭೂಮಿ ಎಂದು ಅವರೂ ಕೇಳಬಹುದು.  ಆಗ ಕಷ್ಟವಾಗುತ್ತದೆ.  ಇತಿಹಾಸವನ್ನು ನಾವು ತಿರುಚಲು ಪ್ರಯತ್ನ ಮಾಡಬಾರದು.  ಇನ್ನೂ ಇತಿಹಾಸ ಸರಿಯಾಗಿ ನಿರ್ಮಿಸುವ ದಿಸೆಯಲ್ಲಿ ನಾವು ಕೆಲಸ ಮಾಡಬೇಕು.  ಬಸವಣ್ಮನವರ ಕುರುಹು ಉಳಿಸುವ ಇರುವ ಕೆಲಸವನ್ನು ನಾವು ಮಾಡಿದರೆ ವಿಜಯಪುರ ಜಿಲ್ಲೆಗೆ ಹೆಸರು ಬರುತ್ತದೆ ಎಂದು ಅವರು ಹೇಳಿದರು.

ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರ ಮಕ್ಕಳಿಗೂ ಸೌಲಭ್ಯ ನೀಡುವ ವಿಚಾರ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗುವ ಸರಕಾರಿ ಸೌಲಭ್ಯವನ್ನು ನೇಕಾರರ ನೇಕಾರರ ಮಕ್ಕಳಿಗೂ ನೀಡಬೇಕು ಎಂಬ ಬೇಡಿಕೆಯಿದೆ.  ಕಟ್ಟಡ ಕಾರ್ಮಿಕರ ಮಕ್ಕಳಿಗೂ ಸೌಲಭ್ಯ ಕೊಡಬೇಕು ಎಂಬುದಕ್ಕೆ ನನ್ನ ಸಹಮತವಿದೆ.  ಅದು ರಾಷ್ಟ್ರೀಯ ನೀತಿ ಇದೆ.  ರಾಜ್ಯದ ಯಾವುದೇ ನೀತಿ ಇಲ್ಲ.  ಕಟ್ಟಕ ಕಾರ್ಮಿಕರ ನೀತಿಯನ್ನು ಕೇಂದ್ರ ಸರಕಾರ ರೂಪಿಸುತ್ತದೆ.  ಅದರಲ್ಲಿ ನೇಕಾರರನ್ನೂ ಸೇರಿಸಿ ಎಂಬುದು ನಮ್ಮ ಒತ್ತಾಯವಿದೆ.  ಮೊನ್ನೆ ಕಾರ್ಮಿಕ ಸಚಿವರು ವಿಜಯಪುರಕ್ಕೆ ಬಂದಾಗ ನಾನೂ ಒತ್ತಾಯ ಮಾಡಿದ್ದೇನೆ.  ಅವರೂ ಪರಿಶೀಲನೆ ಮಾಡಿ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.  ಆ ಕೆಲಸವಾದರೆ ದೇಶದ ಎಲ್ಲ ನೇಕಾರರಿಗೂ ಅನುಕೂಲವಾಗುತ್ತದೆ ಎಂದು ಶಿವಾನಂದ ಎಸ್. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌