ಸೈನಿಕ ಶಾಲೆಯ ನಾನಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಮಾರೋಪ

ವಿಜಯಪುರ: ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ವಿಜಯಪುರ ಸೈನಿಕ ಶಾಲೆ ಒಳಾಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಐ ಪಿ ಎಸ್ ಸಿ (U-12, U14, U17 ಹಾಗೂ U-19 ವರ್ಷದೊಳಗಿನ) ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಮಾರಂಭ ನಡೆಯಿತು.

ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ ಮಾತನಾಡಿ, ನಮ್ಮ ಶಾಲೆ ವತಿಯಿಂದ ಅಖಿಲ ಭಾರತ ಐಪಿಎಸ್ ಸಿ (U-12, U14, U17 ಹಾಗೂ U-19 ವರ್ಷದೊಳಗಿನ) ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳನ್ನು ಆಯೋಜಿಸಿದ್ದು ಸೈನಿಕ ಶಾಲೆಗೆ ಅಪಾರ ಹೆಮ್ಮೆ ತಂದಿದೆ.  ಇದು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ, ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ.  ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಶೈಕ್ಷಣಿಕವಾಗಿ ಮತ್ತು ಅಥ್ಲೆಟಿಕ್ ಆಗಿ ಉತ್ತಮ ಸಾಧನೆ ಮಾಡಲು ವೇದಿಕೆಯನ್ನು ಒದಗಿಸಿದ್ದು ಮುಂದೆ ಟೇಬಲ್ ಟೆನ್ನಿಸ್ ಜಗತ್ತಿನಲ್ಲಿ ಉದಯೋನ್ಮುಖ ತಾರೆಯರಾಗಿ ಹೊರಹೊಮ್ಮಿರಿ ಎಂದು ಶುಭ ಹಾರೈಸಿದರು.

ನಾನಾ ವಿಭಾಗಗಳಲ್ಲಿ ವಿಜೇತ ಹೊಂದಿದ ತಂಡದವರಿಗೆ ಪದಕಗಳು, ಪ್ರಮಾಣ ಪತ್ರಗಳು ಹಾಗೂ ಟ್ರೋಫಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ವಿಜಯಪುರ ಸೈನಿಕ ಶಾಲೆಯಲ್ಲಿ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯೆ ಪ್ರತಿಭಾ ಬಿಷ್ಟ ಮಾತನಾಡಿದರು

 

12 ವರ್ಷ, 14 ವರ್ಷ, 17 ವರ್ಷ ಹಾಗೂ 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಇಂದೋರಿನ ಎಂಬ್ರಾಲ್ಡ ಹೈಟ್ ಇಂಟರ್ ರ್ನ್ಯಾಷನಲ್ ಸ್ಕೂಲ್, ಗಳಿಸಿ ಬಂಗಾರದ ಪದಕವನ್ನು ಬಾಚಿಕೊಂಡಿತು.  12 ವರ್ಷ, ಹಾಗೂ 14 ಬಾಲಕಿಯರ ಸಿಂಗಲ್ಸ್ ನಲ್ಲಿ ವಿಜಯಪುರ ಸೈನಿಕ ಶಾಲೆಯ ತಂಡವು ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿಯ ಪದಕ ಪಡೆಯಿತು.  17 ವರ್ಷ, ಹಾಗೂ 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಮಧ್ಯ ಪ್ರದೇಶದ ಗ್ವಾಲಿಯರ್ ನ ಸಿಂಧ್ಯಾ ಕನ್ಯಾ ವಿದ್ಯಾಲಯ, ತಂಡವು ಉತ್ತಮ ಆಟವನ್ನು ಪ್ರದರ್ಶಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿತು. ತೃತಿಯ ಸ್ಥಾನವನ್ನು 12 ವರ್ಷ, 14 ವರ್ಷ ಹಾಗೂ 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಸ್ಕೂಲ್ ಕಂಚಿನ ಪದಕವನ್ನು ಪಡೆಯಿತು.

ಸ್ಟುಡೆಂಟ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಗೆ ಸೈನಿಕ ಶಾಲೆ ಬಿಜಾಪುರದ ಕ್ರೀಡಾಪಟುಗಳಾದ 12 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಲಾವಣ್ಯ, ಪ್ರಿಯಾಂಕ, ಸಾನ್ವಿ ಹೂಗಾರ್ ಮತ್ತು ಗಾಯತ್ರಿ, 14 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಸುಪ್ರಿಯಾ ಹಾಗೂ ಅಭಿಜ್ಞಾ, 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಕ್ರೀಡಾಪಟು ಪ್ರಿಯದರ್ಶಿನಿ ಸ್ಥಾನ ಪಡೆದುಕೊಂಡರು.

 

ಎಂಬ್ರಾಲ್ಡ ಹೈಟ್ ಇಂಟರ್ನ್ಯಾಷನಲ್ ಸ್ಕೂಲ್, ಇಂದೋರ – ಮಧ್ಯಪ್ರದೇಶದ ಕ್ರೀಡಾಪಟುಗಳಾದ 12 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಆರ್ವಿ ಜೈನ್,  ವನ್ಯಾ ಎಮ್, ಹಾಗೂ ಸಾನ್ವಿ, 14 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಶಾಂಭವಿ, ಹಿಯಾ ಪಾಟೀಲ್ ಹಾಗೂ ಹಿಶಿತಾ, 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಕ್ರೀಡಾಪಟುಗಳಾದ ಬುಶ್ರಾ ಹೆಚ್, ರೀಟಾ ಆಯ್, ಕಿಶಿತಾ, ವರಧಾ, ಹಾಗೂ ಭವ್ಯ, 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಭಾಗ್ಯಶ್ರೀ, ಆಕಾಂಕ್ಷಿ, ಯಶಸ್ವಿ, ಮಾಯರಾ.ಜೆ  ಹಾಗೂ ಪರಿ ಕ್ರೀಡಾಪಟುಗಳು ಸ್ಥಾನ ಪಡೆದುಕೊಂಡರು. ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಸ್ಕೂಲ್ – ಬೆಳಗಾವಿಯ ಕ್ರೀಡಾಪಟುಗಳಾದ 12 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಪುಷ್ಠಿ, 14 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಶಿಲ್ಪಾ ಹಾಗೂ ತುಳಸಿ, 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಅಮೂಲ್ಯ ಸ್ಥಾನ ಪಡೆದುಕೊಂಡರು. ಫೀನಿಕ್ಸ್ ಪಬ್ಲಿಕ್ ರೆಸಿಡೆನ್ಸಿಯಲ್ ಸ್ಕೂಲ್ ಬೆಳಗಾವಿಯ 14 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಕ್ರೀಡಾಪಟು ಜಾನ್ವಿ ಸ್ಥಾನ ಪಡೆದುಕೊಂಡರು. ಸಿಂಧ್ಯಾ ಕನ್ಯಾ ವಿದ್ಯಾಲಯ ಗ್ವಾಲಿಯರ್ – ಮಧ್ಯ ಪ್ರದೇಶದ 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಕ್ರೀಡಾಪಟು ತನಿಷಾ ಬಿ ಹಾಗೂ 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್ ನಲ್ಲಿ ಕ್ರೀಡಾಪಟುಗಳಾದ ಜಾನ್ವಿ, ಕಂಗನಾ ಮತ್ತು ಅವನಿ ಸ್ಥಾನ ಪಡೆದುಕೊಂಡರು. ಹೀಗೆ ಅನೇಕ ವಿಭಾಗಗಳಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿರುವ ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಅತ್ಯಂತ ಉತ್ಸುಕತೆಯಿಂದ ಟೇಬಲ್ ಟೆನ್ನಿಸ್ ಆಟವನ್ನು ಆಡಿ ಪ್ರತಿಷ್ಠಿತ ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳನ್ನು ಅವರ ಅಸಾಧಾರಣ ಕೌಶಲಗಳು, ಅಚಲವಾದ ಸಮರ್ಪಣೆ ಮತ್ತು ಪಟ್ಟು ಬಿಡದ ಕಠಿಣ ಪರಿಶ್ರಮವು ಅವರ ಈ ಗಮನಾರ್ಹ ಸಾಧನಗೆ ಪ್ರೇರೇಪಿಸಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಉಪ-ಪ್ರಾಚಾರ್ಯ ಕಮಾಂಡರ್ ಸುರುಚಿ ಗೌರ್, ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆಕಾಶ ವತ್ಸ, ನಾನಾ  ಶಾಲೆಗಳಾದ ಮಧ್ಯಪ್ರದೇಶದ ಇಂದೋರಿನ ಎಂಬ್ರಾಲ್ಡ ಹೈಟ್ ಇಂಟರ್ನ್ಯಾಷನಲ್ ಸ್ಕೂಲ್, ಗ್ವಾಲಿಯರ್ ನ ಸಿಂಧ್ಯಾ ಕನ್ಯಾ ವಿದ್ಯಾಲಯ, ಬೆಳಗಾವಿಯ ಪೊನಿಕ್ಸ ಸ್ಕೂಲ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಸ್ಕೂಲ್ ಹಾಗೂ ವಿಜಯಪುರದ ಸೈನಿಕ ಶಾಲೆಗಳ ಎಲ್ಲಾ ಕ್ರೀಡಾಪಟುಗಳು, ತಂಡಗಳ ವ್ಯವಸ್ಥಾಪಕರು ಮತ್ತು ತರಬೇತಿದಾರರು, ಪಂದ್ಯಾವಳಿ ಸಂಘಟನಾ ಮುಖ್ಯಸ್ಥರು, ಸರ್ವ ಸದಸ್ಯರು, ನಿರ್ಣಾಯಕರು, ತಾಂತ್ರಿಕ ಸಿಬ್ಬಂದಿಗಳು, ಎನ್‌ಸಿಸಿ ಸಿಬ್ಬಂದಿ, ಕೆಡೆಟ್ ಗಳು,  ಶಾಲೆಯ ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌