ಪರಿಸರ, ಸ್ಮಾರಕಗಳ ಸಂರಕ್ಷಣೆಗಾಗಿ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಪೂರ್ವಸಿದ್ಧತೆ ಕುರಿತು ಕೋರ್ ಕಮಿಟಿ ಸಭೆ

ವಿಜಯಪುರ: ಪರಿಸರ ಸಂರಕ್ಷಣೆ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಉದ್ದೇಶದಿಂದ ಡಿಸೆಂಬರ್ 24 ರಂದು ನಗರದಲ್ಲಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ಕೋರ್ ಕಮಿಟಿ ಸಭೆ ಶನಿವಾರ ನಡೆಯಿತು.

ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೋಂಡ ಕೋರ್ ಕಮಿಟಿಯ ನಾನಾ ಉಪಸಮಿತಿಗಳ ಪ್ರಮುಖರು, ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ವಿಜಯಪುರದಲ್ಲಿ ಡಿ. 24 ರಂದು ನಡೆಯಲಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಪೂರ್ವಭಾವಿ ಸಭೆ ನಡೆಯಿತು

ರೂಟ್ ಕಮಿಟಿ ಉಸ್ತುವಾರಿ ಸೋಮಶೇಖರ ಸ್ವಾಮಿ ಮತ್ತು ಸಂತೋಷ ಅವರಸಂಗ ಮಾತನಾಡಿ, ಈ ಸ್ಪರ್ಧೆಯಲ್ಲಿ ಪಾಲ್ಗೋಳ್ಳಲಿರುವ ಓಟಗಾರರಿಗೆ ಚೇತೋಹಾರಿ ಪಾನೀಯ(ಎನರ್ಜೆಲ್) ನೀಡಲು ಎಫ್.ಡಿ.ಸಿ ಕಂಪನಿ ಮುಂದೆ ಬಂದಿದೆ.  ಏಳು ಹೈಡ್ರೆಶನ್ ಪಾಯಿಂಟ್ಸ್ ಗಳಲ್ಲಿ ಈ ಕಂಪನಿಯ ಸದಸ್ಯರು ಓಟಗಾರರಿಗೆ ಚೇತೋಹಾರಿ ಪಾನೀಯ ವ್ಯವಸ್ಥೆ ಮಾಡಲಿದ್ದಾರೆ.  ಒಟ್ಟು ಏಳು ವಿಭಾಗಗಳಲ್ಲಿ ಈ ಓಟ ನಡೆಯಲಿದ್ದು, 21 ಕಿ. ಮೀ., 10 ಕಿ. ಮೀ., 5 ಕಿ. ಮೀ, 3.50 ಕಿ.ಮೀ., ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಮಕ್ಕಳ ವಿಭಾಗದಲ್ಲಿ ಈ ಓಟ ನಡೆಯಲಿದೆ.  ಇದಕ್ಕಾಗಿ ರೂಟ್ ಕಮಿಟಿಯವರು ಈಗಾಗಲೇ ಓಟಗಾರರು ಸಾಗಬೇಕಿರುವ ಮಾರ್ಗಗಳಲ್ಲಿ ಖುದ್ದಾಗಿ ಸಂಚರಿಸಿ ಸಿದ್ಧತೆಗಳನ್ನು ಮತ್ತು ಮಾರ್ಗಗಳನ್ನು ಗುರುತಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, ಈ ಓಟದಲ್ಲಿ ಪಾಲ್ಗೋಳ್ಳಲಿರುವ ಕ್ರೀಡಾಪಟುಗಳ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಉತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆನಲೈನ್ ಮೂಲಕ ನಡೆಯುತ್ತಿರುವ ಈ ನೋಂದಣಿಯ ಕುರಿತು ಈಗಾಗಲೇ ನಾನಾ ಕಾಲೇಜುಗಳು, ವೃತ್ತಿಪರ ಓಟಗಾರರು ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳನ್ನು ಸ್ವಯಂ ಪ್ರೇರಿತರಾಗಿ ಪಾಲ್ಗೋಳ್ಳಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

 

ಡಾ. ಮಹಾಂತೇಶ ಬಿರಾದಾರ ಮಾತನಾಡಿ, ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ನ್ನು ಅಚ್ಚುಕಟ್ಟಾಗಿ ಮತ್ತು ಇತತರಿಗೆ ಮಾದರಿಯಾಗುವಂತೆ ಸಂಘಟಿಸುವ ಕುರಿತು ಸಲಹೆ, ಸೂಚನೆ ನೀಡಿದರು.

ಮಾಧ್ಯಮಗಳು ಸಹಕಾರ ಪಡೆದು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಈ ಕಾರ್ಯಕ್ರಮದ ಬಗ್ಗೆ ಹೆಚ್ಚೆಚ್ಚು ಪ್ರಚಾರ ನೀಡಬೇಕು.  ಇದರಿಂದ ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಿಂದಲೂ ಆಸಕ್ತ ಓಟಗಾರರು ಪಾಲ್ಗೋಳ್ಳಲು ಸಹಾಯವಾಗಲಿದೆ.  ಅಲ್ಲದೇ, ಓಟಗಾರರು ಓಡುವ ಮಾರ್ಗಗಳ ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ.  ಸ್ವಯಂ ಸೇವಕರೂ ಕೂಡ ಕಾರ್ಯಕ್ರಮ ನಿಗದಿಯ ಎರಡು ದಿನ ಮುಂಚಿತವಾಗಿಯೇ ಅವರಿಗೆ ವಹಿಸಲಾಗುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರಿಂದ ಈ ಓಟದ ಯಶಸ್ಸಿಗೆ ಪೂರಕವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾನಾ ಸಮಿತಿಯ ಉಸ್ತುವಾರಿಗಳಾದ ಆಕಾಶ ಚೌಕಿಮಠ, ಪ್ರದೀಪ ಕುಂಬಾರ, ನಾವೇದ ನಾಗಠಾಣ, ವೀಣಾ ದೇಶಪಾಂಡೆ, ಶಿವನಗೌಡ ಪಾಟೀಲ, ಸಂದೀಪ, ದಿಲೀಪ್ ಗೌಡ ಪಾಟೀಲ, ಅನಿಲ ಧಾರವಾಡಕರ, ಶ್ರೀಕಾಂತ್ ಮಂತ್ರಿ, ಮಹೇಶ ವಿ. ಶಟಗಾರ, ಜಗದೀಶ ಪಾಟೀಲ, ಸೋಮಶೇಖರ ಹಿರೆಕುರುಬರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌