ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟ ಮಾಡಬೇಕು- ಕಾಂಗ್ರೆಸ್ಸಿನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ- ಸಚಿವ ಸತೀಶ ಜಾರಕಿಹೊಳಿ

ವಿಜಯಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನು ಹೋರಾಟ ಮಾಡಬೇಕು.  ಕಾಂಗ್ರೆಸ್ಸಿಗರು ಒಗ್ಗಟ್ಟಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆಯ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಎದುರಾಗಿದೆ.  ಈಗಾಗಲೇ ನಮ್ಮ ರಾಜ್ಯ ಬಹಳ ಸಂಕಷ್ಟದಲ್ಲಿದೆ.  ಕಾವೇರಿ ಭಾಗದ ರೈತರೂ ಕಷ್ಟದಲ್ಲಿದ್ದಾರೆ.  ಹೀಗಾಗಿ ಕಾವೇರಿ ನೀರು ಬಿಡುಗಡೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.  ನಮ್ಮ ಸರಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು. ಒಂದು […]

ಡಾ. ಬಿದರಿ ಚೈಲ್ಡ್ ಅಕಾಡೆಮಿ ಆಶ್ರಯದಲ್ಲಿ 8 ರಿಂದ 16 ವರ್ಷದ ಮಕ್ಕಳಿಗಾಗಿ ಲಿಟಲ್ ಸಿಂಗಿಂಗ್ ಸ್ಟಾರ್ಸ್ ಗಾಯನ, ಚಿತ್ರಕಲೆ, ಆಶುಭಾಷಣ, ಆರೋಗ್ಯವಂತ ಮಗು ಸ್ಪರ್ಧೆ

ವಿಜಯಪುರ: ನಗರದ ಚಿಕ್ಕಮಕ್ಕಳ ಖ್ಯಾತ ತಜ್ಞ ಡಾ. ಎಲ್. ಎಚ್. ಬಿದರಿ ಅವರ ಮಹತ್ವಾಂಕ್ಷೆಯ ಡಾ. ಬಿದರಿ ಚೈಲ್ಡ್ ಅಕಾಡೆಮಿ ನವೆಂಬರ್ 19 ರಂದು ಲೋಕಾರ್ಪಣೆಯಾಗಲಿದ್ದು, ಇದರ ಅಂಗವಾಗಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಯ ಗುರಿಯೊಂದಿಗೆ ಈ ಸಂಸ್ಥೆ ತನ್ನ ಸೇವೆ ಪ್ರಾರಂಭಿಸಲಿದೆ.  ಇದರ ಮೊದಲ ಹಂತದ ಯೋಜನೆಯಲ್ಲಿ ಜಿಲ್ಲೆಯ ಮಕ್ಕಳಲ್ಲಿರುವ ಗಾಯನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 8 ರಿಂದ 16 ವರ್ಷದೊಳಗಿನ […]

ನವೆಂಬರ್ 1 ಕನ್ನಡಿಗರಾಗುವ ಬದಲು ನಂ.1 ಕನ್ನಡಿಗರಾಗಿ: ಪ್ರಕಾಶ ಆರ್. ಕೆ.

ವಿಜಯಪುರ: ನವೆಂಬರ್ 1 ಕನ್ನಡಿಗರಾಗುವ ಬದಲು ನಂ.1 ಕನ್ನಡಿಗರಾಗಬೇಕು ಎಂದು ಗಾನಯೋಗಿ ಸಂಘದ ಪ್ರಕಾಶ ಆರ್. ಕೆ. ಹೇಳಿದ್ದಾರೆ.   ಕರ್ನಾಟಕ ರಾಜ್ಯೋತ್ಸವದ 50ರ ಸಂಭ್ರಮದ ಅಂಗವಾಗಿ ಗಾನಯೋಗಿ ಸಂಘ ವತಿಯಿಂದ ಅಂಗವಾಗಿ ವಿಜಯಪುರ ನಗರದ ಸಿಂದಗಿ ಬೈಪಾಸ್ ಫ್ಲೈಓವರ್ ಗೋಡೆಗೆ ಕರ್ನಾಟಕ ಪ್ರಥಮ ಪ್ರೌಢ ಸಾಮ್ರಾಟ ಇಮ್ಮಡಿ ಪುಲಿಕೇಶಿಯ ಚಿತ್ರವನ್ನು ಬಿಡಿಸುವ ಮೂಲಕ ರಾಜ್ಯೋತ್ಸವ ಗಮನ ಸೆಳೆದಿದೆ.  ಈ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಾನಯೋಗಿ ಸಂಘದ ಪ್ರಕಾಶ ಆರ್. ಕೆ. ಕನ್ನಡಕ್ಕಾಗಿ […]

ಡಾ. ಬಿ. ಆರ್. ಅಂಬೇಡ್ಕರ್ ಇಡೀ ಮಾನವ ಕುಲಕ್ಕೆ ಆದರ್ಶ- ಸಚಿವ ಸತೀಶ ಜಾರಕಿಹೊಳಿ

ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ ಇಡೀ ಮಾನವ ಕುಲಕ್ಕೆ ಸೀಮಿತವಾದ ಸಂವಿಧಾನ ಸಾಮಾಜಿಕ, ರಾಜಕೀಯ ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ಅವರೊಂದಿಗೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿ […]