ವಿಜಯಪುರ: ನವೆಂಬರ್ 1 ಕನ್ನಡಿಗರಾಗುವ ಬದಲು ನಂ.1 ಕನ್ನಡಿಗರಾಗಬೇಕು ಎಂದು ಗಾನಯೋಗಿ ಸಂಘದ ಪ್ರಕಾಶ ಆರ್. ಕೆ. ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ 50ರ ಸಂಭ್ರಮದ ಅಂಗವಾಗಿ ಗಾನಯೋಗಿ ಸಂಘ ವತಿಯಿಂದ ಅಂಗವಾಗಿ ವಿಜಯಪುರ ನಗರದ ಸಿಂದಗಿ ಬೈಪಾಸ್ ಫ್ಲೈಓವರ್ ಗೋಡೆಗೆ ಕರ್ನಾಟಕ ಪ್ರಥಮ ಪ್ರೌಢ ಸಾಮ್ರಾಟ ಇಮ್ಮಡಿ ಪುಲಿಕೇಶಿಯ ಚಿತ್ರವನ್ನು ಬಿಡಿಸುವ ಮೂಲಕ ರಾಜ್ಯೋತ್ಸವ ಗಮನ ಸೆಳೆದಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಾನಯೋಗಿ ಸಂಘದ ಪ್ರಕಾಶ ಆರ್. ಕೆ. ಕನ್ನಡಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟು ತ್ಯಾಗ ಗೈದ ಇಮ್ಮಡಿ ಪುಲಿಕೇಶಿಯ ಸಾಧನೆ ಎಂದೆಂದಿಗೂ ಅಜರಾಮರ. ಇಂದಿನ ಯುವ ಪೀಳಿಗೆಗೆ ಇವರ ಮಾಹಿತಿಯ ಕೊರತೆ ಇದೆ. ಇಮ್ಮಡಿ ಪುಲಿಕೇಶಿ ಎಂದರೆ ಯಾರೂ ಎಂಬುದು ಅರಿಯದ ಪರಿಸ್ಥಿತಿಗೆ ನಾವೆಲ್ಲರೂ ತಲುಪಿದ್ದೇವೆ. ಇತಿಹಾಸ ಮತ್ತು ನಾಡಿಗಾಗಿ ಹಗಲಿರುಳು ಶ್ರಮಿಸಿದ ಕನ್ನಡ ಸೇವಕರನ್ನು ನಾವು ಸದಾ ಸ್ಮರಿಸುವ ಕಾರ್ಯ ಮಾಡಬೇಕು. ಇತ್ತೀಚಿಗೆ ನಾವೆಲ್ಲರೂ ಕನ್ನಡಕ್ಕಾಗಿ ದುಡಿಯಬೇಕು ನಾವೆಲ್ಲರೂ ನವೆಂಬರ್1 ಮಾತ್ರ ಕನ್ನಡಿಗರಾಗುತ್ತೇವೆ. ಅದರಿಂದ ಹೊರಗೆ ಬಂದು ನಾವೆಲ್ಲರೂ ನಂ. 1 ಕನ್ನಡಿಗರಾಗಲು ಶ್ರಮಿಸಬೇಕು ಎಂದು ಹೇಳಿದರು.
ಈಗಾಗಲೇ ನಗರದ ನಾನಾ ಕಡೆಗಳಲ್ಲಿ ಸ್ವಚ್ಛತೆ ಕೈಗೊಂಡು ಗಲೀಜಾಗಿದ್ದ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು ಅಂದವಾಗಿ ಮಾಡುವ ಮೂಲಕ ಗಮನ ಸೆಳೆಯುತ್ತಿರುವ ಗಾನಯೋಗಿ ಸಂಘ ಈಗ ರಾಜ್ಯೋತ್ಸವದ ಅಂಗವಾಗಿ ಮತ್ತೋಂದು ಮಾದರಿ ಕಾರ್ಯ ಮಾಡಿದೆ.
ಈ ಸಂದರ್ಭದಲ್ಲಿ ಗಾನಯೋಗಿ ಸಂಘದ ಯುವಕರಾದ ಬಾಹುಬಲಿ ಶಿವಣ್ಣವರ, ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಸಚೀನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಸಚೀನ ಚವ್ಹಾಣ, ಬಾಬು, ರೇವಣಸಿದ್ದಯ್ಯ, ಶ್ರೀನಾಥ, ಶ್ರೀನಿವಾಸ, ತನುಜ ಮುಂತಾದವರು ಉಪಸ್ಥಿತರಿದ್ದರು.