ವಿಜಯಪುರ: ಶ್ರೀ ಸಿದ್ಧಾರೂಢರ ತತ್ವಾದರ್ಶಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿವೆ ಎಂದು ಬೀದರಿನ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹೇಳಿದ್ದಾರೆ.
ನಗರದ ಸೋಲಾಪುರ ರಸ್ತೆ ಬಳಿಯ ಸಂಸ್ಕೃತಿ ಕಾಲನಿ ಹತ್ತಿರವಿರುವ ಶ್ರೀ ಸಿದ್ಧಾರೂಢರ ಮಠದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆಯ 17ನೇ ವಾರ್ಷಿಕೋತ್ಸವ ಹಾಗೂ ಮಾತೋಶ್ರೀ ಪಾರ್ವತಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ಧಾರೂಢರು ತಮ್ಮ ಅವಧಿಯಲ್ಲಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 12ನೇ ಶತಮಾನದ ಶಿವಶರಣರಂತೆ ಶ್ರೀ ಸಿದ್ಧಾರೂಢರೂ ಕೂಡ ಭಕ್ತಿಯ ಸಾರವನ್ನು ಉಣಬಡಿಸಿದ್ದಾರೆ. ಅವರ ಧಾರ್ಮಿಕ ಕಾರ್ಯಗಳು ಎಲ್ಲ ಜನರಿಗೂ ಸ್ಪೂರ್ತಿಯಾಗಿದ್ದವು. ನಾವೆಲ್ಲರೂ ಪ್ರತಿದಿನ ಶ್ರೀ ಸಿದ್ಧಾರೂಢರು ಮತ್ತು ಶರಣರನ್ನು ನೆನೆಯುವ ಮೂಲಕ ಅವರನ್ನು ಒಲಿಸಿಕೊಂಡು ಆಶೀರ್ವಾದ ಪಡೆಯಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಭಕ್ತರು ನಾನಾ ದವಸ- ದಾನ್ಯಗಳಿಂದ ತುಲಭಾರ ಸೇವೆ ಮಾಡಿದರು.
ಈ ಸಂದರ್ಭದಲ್ಲಿ ಇಂಚಲದ ಶ್ರೀ ಸದ್ಗುರು ಡಾ. ಶಿವಾನಂದ ಭಾರತಿ ಸ್ವಾಮಿಗಳು, ವಚಳಂಭದ ಶ್ರೀ ಪ್ರಣವಾನಂದ ಸ್ವಾಮೀಜಿ, ಬೀದರಿನ ಶ್ರೀ ಗಣೇಶಾನಂದ ಸ್ವಾಮೀಜಿ, ಯಳಸಂಗಿಯ ಶ್ರೀ ಪರಮಾನಂದ ಸ್ವಾಮೀಜಿ, ಮುಳಸಾವಳಗಿ ಶ್ರೀ ದಯಾನಂದ ಸ್ವಾಮೀಜಿ, ಯರಗಲ್ ದ ಶ್ರೀ ಅದ್ವೈತಾನಂದ ಸ್ವಾಮೀಜಿ, ಕಲಬುರಗಿಯ ಮಾತೋಶ್ರೀ ಶ್ರೀ ಲಕ್ಷ್ಮಿ ದೇವಿ, ಆಳೂರಿನ ಶ್ರೀ ಶಂಕರಾನಂದ ಸ್ವಾಮೀಜಿ, ಯಳವಂತಗಿಯ ಮಾತೋಶ್ರೀ ಆನಂದಮಯಿ, ಸೋಲಾಪುರದ ಮಾತೋಶ್ರೀ ಸುಶಾಂತ ದೇವಿ, ಭೀಮರಾಯನಗುಡಿಯ ಶ್ರೀ ಜ್ಞಾನೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಅಲ್ಲದೇ, ವಿಜಯಪುರ, ಯಳಸಂಗಿ, ಆಳೂರ, ಕಲಬುರಗಿ, ಬೀದರ, ರನ್ನ ಬೆಳಗಲಿ ಬುರಣಾಪುರ .ಮಿರಾಜ ಹಾಗೂ ಹುಬ್ಬಳ್ಳಿ ಹೀಗೆ ನಾನಾ ಮಠಾಧೀಶರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದರಾಮಯ್ಯ ಹಿರೇಮಠ, ಸಂಭಾಜಿ ಮಿಸಾಳೆ, ಸುರೇಶ ಶೇಡಶ್ಯಾಳ, ರಾಮಕೃಷ್ಣ ಮಸೀದಿಪುರ, ಸಿದ್ದರಾಯ ಎಲ್ಲಡಗಿ, ಸುರೇಶ ಬಳ್ಳೊಳ್ಳಿ, ಸದಾಶಿವ ತಲಬಡ್ಡಿ, ಸುರೇಶ ನಾಗರಾಳ, ಡಾ. ಆನಂದ ಅಂಬಲಿ, ಪ್ರಭಾಕರ ಕೊಂಡಿ, ಶಾಂತಬಾಯಿ ಬಸವರಾಜ ಪಾಟೀಲ, ರಾಜಶ್ರೀ ಬಿರಾದಾರ, ಡಾ. ಮಹಾದೇವಿ ದೇವೇಂದ್ರ ಉಮದಿ, ಸುಪ್ರೀತಾ ಗುಗ್ಗಡ ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಪಾಲ್ಗೋಂಡಿದ್ದರು.
ಚಿಂಚೋಳಿಯ ಸೋಮನಾಥ ಶೀಲವಂತ ಮತ್ತು ಚಿಕ್ಕಲಗಿ ಸಿದ್ದಾರೋಢ ಭಜನಾ ಮಂಡಳಿ ಸಂಗೀತ ಸೇವೆಯನ್ನು ಸಲ್ಲಿಸಿದರು. ವಿರುಪಾಕ್ಷ ದೇವರು ನಿರೂಪಿಸಿದರು.