ವಿಜಯಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿ ಹಿರಿಯ ಸಮಾಜ ಸೇವಕ ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರ ನಿವಾಸಕ್ಕೆ ತೆರಳಿದ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ಸನ್ಮಾನಿಸಿ ಗೌರವಿಸಿದರು.
ಜಲಗನರದ ಸ್ನೇಹಿತರೊಂದಿಗೆ ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರ ಮನೆಗೆ ತೆರಳಿದ ಅವರು, ಗೌರವ ಸಮರ್ಪಿಸಿ ಆಶೀರ್ವಾದರು.
ಬಳಿಕ ಮಾತನಾಡಿದ ಪ್ರೇಮಾನಂದ ಬಿರಾದಾರ, ವಿಜಯಪುರ ನಗರದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಪರದಾಡುತ್ತಿದ್ದ ಹಮಾಲರಿಗೆ ಪ್ರತ್ಯೇಕವಾಗಿ ಒಂದು ಬಡಾವಣೆ ಮಾಡಲು ಕುಮಾನಿ ಅವರು ಕಾರಣರಾಗಿದ್ದಾರೆ. ಮೂರ್ನಾಲ್ಕು ದಶಕಗಳ ಹಿಂದೆ ಅವರು ಮಾಡಿದ ಸಮಾಜಪ ಸೇವೆಯಿಂದಾಗಿ ಇಂದು ಹಮಾಲರ ಕಾಲನಿಯಲ್ಲಿ ಸುಮಾರು 1100ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ. ಇಂಥ ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನ ಸದಾ ನಮ್ಮೆಲ್ಲರ ಮೇಲೆ ಇರಬೇಕು ಎಂದು ಹೇಳಿದರು.
ಮತ್ತೋಬ್ಬ ಸಮಾಜ ಸೇವಕ ಅಶೋಕ ಜುಗತಿ ಮಾತನಾಡಿ, ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರು ಮೊದಲಿನಿಂದಲೂ ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಜೀವನ ಬದಿಗೊತ್ತಿ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ನಾನಾಗೌಡ ಬಿರಾದಾರ, ಮಲ್ಲಿಕಾರ್ಜುನ ವಾರಣಾಸಿ, ಸಂತೋಷ ತೆಲಸಂಗ, ರಮೇಶ ಮಿರ್ಜಿ, ಪ್ರಕಾಶ ಕಟ್ಟಿಮನಿ, ಸಿದ್ದು ಕುಸೂರ, ರೇವಪ್ಪ ಪಾಟೀಲ, ಗೋಪಿ ಸೂರ್ಯವಂಶಿ, ಗಿರೀಶ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.