ವಿಜಯಪುರ: ರೋಗಗಸ್ಥ ಜಾನುವಾರುಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಲಸಿಕೆ ನೀಡುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಹೇಳಿದರು. ಅವರು ಜಿಲ್ಲಾ ಪಶು ವೈಧ್ಯಕೀಯ ಪಾಲಿಕ್ಲಿನಿಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ದಿನ ಪಶು ವೈಧ್ಯಕೀಯ ಪಾಲಿಕ್ಲಿನಿಕ್ ಭೇಟಿ ನೀಡುವ ಸಾರ್ವಜನಿಕರು, ರೈತರ ಭೇಟಿ ಕುರಿತು ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮತ್ತು ರೈತರಿಗೆ ನೀಡುವ ಚಿಕಿತ್ಸೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಇಲ್ಲಿನ ನಾನಾ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.ಇಲ್ಲಿ ಜಾನುವಾರುಗಳಿಗೆ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮತ್ತು ರೈತರಿಗೆ ತಲುಪುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು.ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ. ಶಿವಕುಮಾರ ಹೊಳೆಪ್ಪಗೋಳ ಪಶು ಪಾಲನಾ ಇಲಾಖೆಯ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಎಸ್.ಎಮ್.ಬಿರಾದಾರ, ಹಿರಿಯ ಪಶು ವೈಧ್ಯಾಧಿಕಾರಿಗಳು ಡಾ. ಸತೀಶ ಪಾಟೀಲ, ಶ್ರೀಮತಿ ಸಂಗೀತಾ ಕಲಬುರ್ಗಿ, ಶ್ರೀಮತಿ ಭಾಗ್ಯಶ್ರೀ ಯರನಾಳ, ಶ್ರೀಮತಿ ಭೀಮಾಬಾಯಿ ಸಾಲೋಡಗಿ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.