ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫೀ ಬಂಡಾರಿ ಅವರಿಗೆ ಸನ್ಮಾನ

ವಿಜಯಪರ: ಪ್ರಸಕ್ತ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಡೇಲಿ ಸಾಲಾರ ಉರ್ದುು ದಿನಪತ್ರಿಕೆಯ ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರನ್ನು ಅವರ ಅಭಿಮಾನಿಗಳು ಹಾಗೂ ನಾನಾ ಮುಖಂಡರು ಸನ್ಮಾನಿಸಿ ಗೌರವಿಸಿದರು. 

ನಗರದ ಗಗನ ಮಹಲ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯು ವಿಹಾರ ಬಳಗದ ನಾನಾ ಸಮಾಜದ ಮುಖಂಡರು ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಪೀ ಭಂಡಾರಿ, ತಮ್ಮ ಈ ಪ್ರಶಸ್ತಿಯನ್ನು ಭಾಷೆ ಮತ್ತು ಕೋಮು ಸೌಹಾರ್ಧತೆಗೆ ಸಮರ್ಪಿಸುವುದಾಗಿ ತಿಳಿಸಿದರು.

ಹಿಂದೂ- ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಸೇರಿ ಸನ್ಮಾನಿಸಿದ್ದು ನನಗೆ ಪ್ರಶಸ್ತಿ ನೀಡಿರುವುದಕ್ಕಿಂತಲೂ ಅತ್ಯಂತ ಸಂತೋಷ ತಂದಿದೆ.  ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಭಾವ್ಯಕ್ಯತೆಗೆ ಸಂದ ಗೌರವ ಎಂದು ಭಾವಿಸಿರುವುದಾಗಿ ಅವರು ಹೇಳಿದರು.

ವಿಜಯಪುರ ನಗರದ ಗಗನ ಮಹಲದಲ್ಲಿ ರಫೀ ಭಂಡಾರಿ ಅವರ ಸನ್ಮಾನ ಕಾರ್ಯಕ್ರಮ ನಡೆಯಿತು

ನೇತ್ರ ಖ್ಯಾತ ತಜ್ಞ ಡಾ. ಪ್ರಭುಗೌಡ ಪಾಟೀಲ ಮಾತನಾಡಿ, ರಫೀ ಭಂಡಾರಿ ಅವರ ಆದರ್ಶ ಜೀವನದ ಮೌಲ್ಯಗಳು ನಮಗೆಲ್ಲರಿಗೂ ಮಾದರಿ ಮತ್ತು ಅನುಕರಣೀಯವಾಗಿವೆ.  ಅವರಿಗೆ ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ, ಸನ್ಮಾನಗಳು ದೊರಕಲಿ.  ರಫೀ ಭಂಡಾರಿ ಅವರು ಕೇವಲ ಒಂದು ಮತ ಪಂಗಡಕ್ಕೆ ಸೀಮಿತಗೊಳ್ಳದೇ ಇಡೀ ಸಮಾಜವೇ ಪ್ರೀತಿಸುವ ಮಹಾನ ವ್ಯಕ್ತಿ ಎಂದು ಅವರು ಶ್ಲಾಘಿಸಿದರು.

ಉದ್ದಮಿ ಮದನ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ನಾಗರಿಕರಾದ ನಜೀಬ ಬಕ್ಷಿ, ಶಿಕ್ಷಕರಾದ ಇ. ರಾ. ಸಾರವಾಡ, ಆರ್. ಎ. ಇನಾಮದಾರ, ನ್ಯಾಯವಾದಿ ಬೀಳಗಿ, ನಥಮುಲ ರುಣವಾಲ, ನಂದಲಾಲ, ಸೋಮು ಭೂಪಾಲೆ, ಸಂಜಯ ಜಾಧವ, ಬಸನಗೌಡ ಪಾಟೀಲ, ಕರೆಕಲ್, ರಂಜಾನ ಮುಲ್ಲಾ, ಸಂಗಮೇಶ ಬದಾಮಿ ಮುಂತಾದವರು ರಫೀ ಭಂಡಾರಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಲೀಂ ಲೋಣಿ, ರಫೀಕ ಜರತಾರಕರ, ಗೌಂಡಿ, ಫೀರಜಾದೆ, ಮುಶ್ರಿಫ,  ಮಹಾನಗರ ಪಾಲಿಕೆ ಮಾಜಿ ಸದಸ್ಯ ದರಬಾರ ಮುಂತಾದವರು ಉಪಸ್ಥಿತರಿದ್ದರು.

ಸಂಗಮೇಶ ಬದಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಆರ್. ಎ. ಇನಾಮದಾರ ಪರಿಚಯಿಸಿದರು.  ನ್ಯಾಯವಾದಿ ಎಂ. ಎನ್. ಬೀಳಗಿ ವಂದಿಸಿದರು.

Leave a Reply

ಹೊಸ ಪೋಸ್ಟ್‌