ದೆಹಲಿಯಲ್ಲಿ ಹವಾಮಾಲಿನ್ಯ ಪ್ರಮಾಣ AQI 400+, ಬಸವನಾಡಿನಲ್ಲಿ ಕೇವಲ 30- ಹೇಗೆ ಅಳೆಯುತ್ತಾರೆ ಗೊತ್ತಾ?

ವಿಜಯಪುರ: ರಾಜಧಾನಿ ದೆಹಲಿ ಈಗ ವಿಶ್ವದ ಅತೀ ಹೆಚ್ಚು ಹವಾಮಾಲಿನ್ಯದ ನಗರಗಳಲ್ಲಿ ಒಂದಾಗಿದ್ದು, ಜನ ಉಸಿರಾಡಲು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.  ಅಲ್ಲಿನ ಹವಾಮಾನ ನಿಗದಿತ ಪ್ರಮಾಣಕ್ಕಿಂತ ಏಳೆಂಟು ಪ್ರಮಾಣ ಹೆಚ್ಚಾಗಿದ್ದು, ಶಾಲೆ, ಕಾಲೇಜುಗಳಿಗೆ ರಜೆಯನ್ನೂ ನೀಡಲಾಗಿದೆ. 

ಆದರೆ, ಇದೇ ನಮ್ಮ ಬಸವ ನಾಡು ಈಗಲೂ ಕೂಡ ಶುದ್ಧ ಗಾಳಿಯಿಂದ ಜನಮನ ತಣಿಸುತ್ತಿದೆ.  ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು AQI ಅಂದರೆ ಹವಾಮಾನ ಗುಣಮಟ್ಟದ ಸೂಚ್ಯಂಕ 433ಕ್ಕೂ ಹೆಚ್ಚಾಗಿದ್ದರೆ, ಇತ್ತ ವಿಜಯಪುರ ನಗರದಲ್ಲಿ AQI ಕೇವಲ 30ರಷ್ಟಿರುವುದು ಇಲ್ಲಿನ ಪ್ರಶಾಂತ ಮತ್ತು ಶುದ್ಧ ಗಾಳಿಗೆ ಸಾಕ್ಷಿಯಾಗಿದೆ.

ವಿಜಯಪುರ ನಗರದ AQI ಪ್ರಮಾಣ

ಜೀವಸಂಕುಲದ ಬದುಕಿಗ ಉಸಿರಾಟ ಬಲುಮುಖ್ಯ.  ನಾವು ಉಸಿರಾಡುವ ಗಾಳಿ ಶುದ್ಧವಾಗಿದ್ದರೆ ಆರೋಗ್ಯ ವೃದ್ಧಿಸುತ್ತದೆ.  ಅದೇ ಗಾಳಿ ಕಲುಷಿತವಾಗಿದ್ದರೆ ಆರೋಗ್ಯವಂತರಿಗೂ ನಾನಾ ಸಮಸ್ಯೆಗಳನ್ನು ತಂದೊಡ್ಡುತ್ತದೆ.  ಅಶುದ್ಧ ಗಾಳಿಯ ಪ್ರಮಾಣ ಮುಂದುವರೆದರೆ ಭವಿಷ್ಯದಲ್ಲಿ ನಾನಾ ರೋಗಗಳಿಗೂ ಕಾರಣವಾಗುತ್ತದೆ.  ಅಲ್ಲದೇ, ಈಗಾಗಲೇ ನಾನಾ ಕಾಯಿಲೆಗಳಿಂದ ಬಳಲುತ್ತಿರುವವ ಗಾಯದ ಮೇಲೆ ಬರೆ ಎಳೆಯುವಂತೆ ತೀವ್ರ ಸಮಸ್ಯೆಗಳನ್ನು ತಂದೊಡ್ಡುತ್ತದೆ.

AQI ಮಾನದಂಡಗಳು

ಒಟ್ಟು ಆರು ಹಂತಗಳಲ್ಲಿ ಹವಾಮಾಲಿನ್ಯದ ಪ್ರಮಾಣವನ್ನು(AQI) ನಿಗದಿತ ಸೂಚ್ಯಂಕ ಮಾನದಂಡದಡಿ ಅಳೆಯಲಾಗುತ್ತದೆ.  ಹವಾಮಾಲಿನ್ಯ ಸೂಚ್ಯಂಕ, ಮಾಪನಗಳು, ಅದರಿಂದಾಗುವ ಸಮಸ್ಯೆಗಳ ಮಾಹಿತಿ ಇಲ್ಲಿದೆ. 

 

AQI ಪ್ರಮಾಣ              ಗುಣಮಟ್ಟ                   ಸಮಸ್ಯೆ

0-50                                ಉತ್ತಮ                            ಅತೀ ಕಡಿಮ ಸಮಸ್ಯೆ

50-100                           ಸಮಾಧಾನಕರ                ಸೂಕ್ಷ್ಮ ಜನರಿಗೆ ಉಸಿರಾಟದ ಸಣ್ಣ ಸಮಸ್ಯೆ

101-200                         ಸಾಧಾರಣ                         ಶ್ವಾಸಕೋಷ, ಅಸ್ತಮಾ, ಹೃದ್ರೋಗಿಗಳಿಗೆ ಉಸಿರಾಟದ ಸಮಸ್ಯೆ

201-300                     ಕಳಪೆ                              ಹೆಚ್ಚಿನ ಜನರಿಗೆ ಸಮಸ್ಯೆ

301- 400                    ಅತೀ ಕಳಪೆ                   ದೀರ್ಘಕಾಲದವರೆಗೆ ಉಸಿರಾಟದ ಸಮಸ್ಯೆ

401- 500                    ಗಂಭೀರ                         ಆರೋಗ್ಯವಂತರಿಗೂ ಸಮಸ್ಯೆ, ನಾನಾ ಕಾಯಿಲೆಗಳಿಂದ ಬಳುವವರಿಗೆ                                                                                 ಮತ್ತಷ್ಟು ಸಮಸ್ಯೆ

Leave a Reply

ಹೊಸ ಪೋಸ್ಟ್‌