ಸರಕಾರಿ ಗಂಡು, ಹೆಣ್ಣು ಮಕ್ಕಳ ಮರಾಠಿ ಶಾಲೆಯಲ್ಲಿ ವಿಶ್ವ ಆಹಾರ ದಿನಾಚರಣ

ವಿಜಯಪುರ: ನಗರದ ಸರಕಾರಿ ಮರಾಠಿ ಗಂಡು ಮಕ್ಕಳ ಶಾಲೆ ಸಂಖ್ಯೆ 1 ಮತ್ತು ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 11ಯಲ್ಲಿ ಬಿ. ಎಲ್. ಡಿ. ಈ ಸಂಸ್ಥೆಯ ಎ. ವಿ. ಎಸ್ ಆಯರ್ವೇದ ಮಹಾವಿದ್ಯಾಲಯ ವತಿಯಿಂದ ವಿಶ್ವ ಆಹಾರ ದಿನಾಚರಣೆಯ ಆಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಸಂಹಿತಾ ಸಿದ್ದಾಂತ ವಿಭಾಗದ ಮುಖ್ಯಸ್ಥೆ ಪ್ರೊ. ರೇಣುಕಾ ತೆನಹಳ್ಳಿ, ಪ್ರತಿನಿತ್ಯ ಪೌಷ್ಠಿಕ ಆಹಾರ ಸೇವನೆ ವಿಧಾನ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.

ಕೌಮಾರಭೃತ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಬೆನಕಟ್ಟಿ ಅವರು ಮಕ್ಕಳ ಬೆಳವಣಿಗೆ ಬಗ್ಗೆ ಪೂರಕವಾದ  ಪೌಷ್ಠಿಕಾಂಶಯುಕ್ತ ಆಹಾರ ಮಹತ್ವದ ಕುರಿತು ಮಾತನಾಡಿದರು. ಸಂಹಿತಾ ಸಿದ್ದಾಂತ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಯೋಜನಾಧಿಕಾರಿ ಡಾ. ರಾವಸಾಹೇಬ ದೇಶಮುಖ ಅವರು ವಿಶ್ವಆಹಾರ ದಿನದ ಅಂಗವಾಗಿ ಪೌಷ್ಠಿಕ ಆಹಾರ ಮತ್ತು ಸ್ವಚ್ಚ ಪರಿಸರ ಹಾಗೂ ಮಕ್ಕಳ ಬೆಳವಣಿಗೆಯ ವಿಷಯದ ಕುರಿತು ನೀರೇ ಜೀವನ ನೀರೇ ಆಹಾರ ಯಾವುದನ್ನು ಬಿಡಬೇಡಿ ಎಂಬ ಧೇಯವಾಕ್ಯದೊಂದಿಗೆ ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

Leave a Reply

ಹೊಸ ಪೋಸ್ಟ್‌