ಕೃಷ್ಣಾನಗರ ನಂದಿ ಶಾಲೆಯ ವಿದ್ಯಾರ್ಥಿಗಳ ಸಾಧನೆ- ಜಿಲ್ಲಾ ಮಟ್ಟದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಶ್ರಯದಲ್ಲಿ ನಡೆಯುತ್ತಿರುವ ಬಿ. ಟಿ. ಪಾಟೀಲ ಮೆಮೋರಿಯಲ್ ನಂದಿ ಅಂತರರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿನಿಯರು ಇತ್ತೀಚೆಗೆ ಸಿಂದಗಿಯ ಲೊಯೋಲ ಸಿಬಿಎಸ್ಇ ಶಾಲೆಯಲ್ಲಿ ನಡೆದ ಅಂತರಶಾಲಾ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಈ ಕ್ರೀಡಾಕೂಟದಲ್ಲಿ ಒಟ್ಟು 13 ಸಿಬಿಎಸ್ಇ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಈ ಕಬಡ್ಡಿ ತಂಡದಲ್ಲಿರುವ ಮಧು ಕಂಕಾಳಿ, ಪೂರ್ವಿ ನಾಯಿಕ, ಕೃತಿಕಾ ಕೊರ್ತಿ, ಮಾಯಾ ಶೇಗುಣಶಿ, ಲಕ್ಷ್ಮಿ ಬರಗಿ, ತ್ರೀಕ್ಷಾ ಪಚ್ಚನ್ನವರ, ಕಾವೇರಿ ಗದ್ದನಕೇರಿ, ಪ್ರತೀಕ್ಷಾ ಯರಗಟ್ಟಿ, ಗಿರಿಜಾ ಚಿಕ್ಕೂರ, ಅಶ್ವಿನಿ ಮಾಳಿ, ಪ್ರಿಯಾಂಕಾ ಜಾನೋಜಿ, ಸೃಷ್ಠಿ ಬುದ್ನಿ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.

ಈ ಕಬಡ್ಡಿ ತಂಡ ಮತ್ತು ತರಬೇತುದಾರ ದೈಹಿಕ ಶಿಕ್ಷಕ ಶಿವಾನಂದ ಎಲ್. ಕಣೂಬೂರ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರ ಈ ಸಾಧನೆಗೆ ಕಾರ್ಖಾನೆಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು ಸಿಬ್ಬಂದಿ ಹಾಗೂ ನಂದಿ ಅಂತರರಾಷ್ಟ್ರೀಯ ವಸತಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌