ಚುನಾವಣೆಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ- ಡಾ. ಪ್ರಕಾಶ ಸಿದ್ದಾಪುರ

ವಿಜಯಪುರ: ಚುನಾವಣೆಗಳು ಪ್ರಜಾಪ್ರಭುತ್ವನ್ನು ಗಟ್ಟಿಗೊಳಿಸುತ್ತವೆ.  ಈ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೋಂಡು ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಕೋಟಾ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ ಹೇಳಿದ್ದಾರೆ.

ತಿಕೋಟಾ ಪಟ್ಟಣದಲ್ಲಿರುವ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನಲ್ಲಿ  ಶನಿವಾರ ಚುನಾವಣೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅವರು, ಮತದಾನ ಪ್ರತಿಯೊಬ್ಬರ ಹಕ್ಕು.  ಎಲ್ಲರೂ ನರ್ಸಿಂಗ್ ವಿದ್ಯಾರ್ಥಿಗಳೂ ಕೂಡ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಗೆ ಮಾಡಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ತಿಕೋಟಾ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಚುನಾವಣೆ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಸಿದ್ದಾಪುರ ಮಾತನಾಡಿದರು

 

ಈ ಸಂದರ್ಭದಲ್ಲಿ ನರ್ಸಿಂಗ್ ತರಗತಿಯ ಮೊದಲನೇ ಸೆಮಿಸ್ಟರ್ ಸಂಯೋಜಕಿ ಗೀತಾಂಜಲಿ ಕೊಣ್ಣೂರ, ರಾಣುಬಾಯಿ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.

ತಿಕೋಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಈ ನಡೆದ ಈ ಕಾರ್ಯಕ್ರಮವನ್ನು ರಸಪ್ರಶ್ನೆ ಸ್ಪರ್ಧೆಯ ಸಂಚಾಲಕ ಎಂ. ಬಿ. ತಡಲಗಿ ನಡೆಸಿಕೊ್ಟ್ಟರು.

ಈ ಕಾರ್ಯಕ್ರಮದಲ್ಲಿ ತಲಾ ಇಬ್ಬರಂತೆ ಒಟ್ಟು 10 ತಂಡಗಳಲ್ಲಿ 20 ಪಾಲ್ಗೊಂಡರು.  ಒಟ್ಟು ಆರು ಸುತ್ತುಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಪ್ರಚಲಿತ ವಿದ್ಯಮಾನಗಳು, ಭೂಗೋಳ, ಭಾರತೀಯ ಸಂವಿಧಾನದಂಥ ನಾನಾ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು.

ಈ ರಸಪ್ರಶ್ನೆಯಲ್ಲಿ ಬೋರವ್ವ ಗಾಣಿಗೇರ್ ಮತ್ತು ಉಷಾ ಕುಂಬಾರ ಜೋಡಿ ಪ್ರಥಮ, ಶ್ರೇಯಾ ವಾಲಿಕಾರ ಮತ್ತು ಅಶ್ವಿನಿ ಮಾದೇಗಾರ ಜೋಡಿ ದ್ವಿತೀಯ ಸ್ಥಾನ ಪಡೆದರು.

Leave a Reply

ಹೊಸ ಪೋಸ್ಟ್‌