ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಪಂ. ಜವಾಹರಲಾಲ ೆಹರು ಅವರ 135ನೇ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಷ್ರಿಫ್, ಪಂ. ಜವಾಹರಲಾಲ ನೆಹರೂ ಅವರು ಈ ದೇಶವನ್ನು ಎತ್ತರಕ್ಕೆ ಕರೆದೊಯ್ದ ಮಹಾನ್ ನಾಯಕರಾಗಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಶಿಕ್ಷಣಕ್ಕೆ ಮತ್ತು ಆರ್ಥಿಕತೆಯ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಭದ್ರ ಬುನಾದಿ ಹಾಕಿದ್ದಾರೆ ಎಂದು ಹೇಳಿದರು.
ಲೋಕತಂತ್ರ, ಜಾತ್ಯತೀತತೆ, ವಿಜ್ಞಾನ ಕ್ಷೇತ್ರ ಮತ್ತು ಔದ್ಯೋಗಿಕ ಕ್ಷೇತ್ರಗಳನ್ನು ಅವರು ಗಟ್ಟಿಗೊಳಿಸಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯವಾಗಿ ಮತ್ತು ಪ್ರಾಂತೀಯವಾಗಿ ಬೆಳೆಯಲು ಸಹಕಾರಿಯಾಯಿತು. ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದ ಜವಾಹರಲಾಲ ನೆಹರೂ ದೇಶದ ಬಹುತ್ವವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಸಂಘರ್ಷಗಳಿಲ್ಲದ ಸೌಹಾರ್ದತೆಯು ದೇಶದ ಪ್ರಗತಿಗೆ ಅನಿವಾರ್ಯ ಎಂದು ಅವರು ನಂಬಿದ್ದರು. ಮಕ್ಕಳ ಮೇಲಿನ ಅವರ ಪ್ರೀತಿ ಮತ್ತು ಕಾಳಜಿ ಪ್ರಶ್ನಾತೀತವಾಗಿದೆ. ಮಕ್ಕಳ ಭವಿಷ್ಯ ಬೆಳಗುವುದಕ್ಕಾಗಿ ಪ್ರಧಾನಿಯಾಗಿದ್ದಾಗ ಎಐಎಂಎಸ್, ಐಐಟಿ, ಐಎಎಂ ಗಳು ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದುಡಿದಿದ್ದಾರೆ. ಮಕ್ಕಳ ಮೇಲಿರುವ ಅವರ ಪ್ರೀತಿಗಾಗಿ ಇಂದು ಮಕ್ಕಳ ದಿನಾಚರಣೆಯನ್ನೂ ನಾವೆಲ್ಲ ಆಚರಿಸುತ್ತೇವೆ. ಇಂದು ನಾವೆಲ್ಲ ಅವರ ಆದರ್ಶಗಳನ್ನು ಮಕ್ಕಳಲ್ಲಿ ಮತ್ತು ಈ ಸಮಾಜದಲ್ಲಿ ಬಿತ್ತರಿಸಿ ಸಾಮರಸ್ಯವನ್ನು ಇನ್ನೂ ಗಟ್ಟಿ ಮಾಡುವ ಕೆಲಸ ಮಾಡೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಶಬ್ಬೀರ ಜಾಗಿರದಾರ, ಜಕ್ಕಪ್ಪ ಯಡವೆ, ಸಾಹೇಬಗೌಡ ಬಿರಾದಾರ, ಸಣ್ಣಪ್ಪ ತಳವಾರ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಅಫ್ಜಲ್ ಜಾನವೆಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಅಶ್ಪಾಕ ಮನಗೂಳಿ, ಅಮಿತ ಚವ್ಹಾಣ, ಡಿ. ಎಸ್. ಮುಲ್ಲಾ, ಶರಣಪ್ಪ ಯಕ್ಕುಂಡಿ, ಫೀರೊಜ್ ಶೇಖ, ಗೌಸ್ ಮುಜಾವರ, ಡಾ. ರವಿ ಬಿರಾದಾರ, ಲಾಲಸಾಬ ಕೊರಬು, ಅಕ್ರಮ ಮಾಶ್ಯಾಳಕರ, ಫಯಾಜ ಕಲಾದಗಿ, ಎಂ. ಬಿ. ಮೆಂಡೆಗಾರ, ತಾಜೋದ್ದೀನ ಖಲಿಫಾ, ಬಾಬು ಯಾಳವಾರ, ಎ. ಪಿ. ನಿಂಬರಗಿ, ಅಂಬಣ್ಣ ಕಲಮನಿ, ಭಾರತಿ ಹೊಸಮನಿ, ರುಕ್ಮೀಣಿ ಲಮಾಣಿ, ಸಮೀಮಾ ಅಕ್ಕಲಕೋಟ, ಅಬ್ದುಲ್‌ಪೀರಾ ಜಮಖಂಡಿ, ಅಶೋಕ ನಾಯ್ಕೋಡಿ, ಸಿದ್ದು ಹಡಪದ ಮುಂತಾದವರು ಉಪಸ್ಥಿತರಿದ್ದರು.