ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ 106ನೇ ಜನ್ಮದಿನ ಆಚರಣೆ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತರತ್ನ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 106ನೇ ಜನ್ಮದಿನ ಆಚರಿಸಲಾಯಿತು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ನಾನಾ ಮುಖಂಡರು ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ರಾಜು ಆಲಗೂರ, ಇಂದಿರಾ ಗಾಂಧಿ ದೇಶದ ಅವರು ಮೊದಲ ಮಹಿಳಾ ಪ್ರಧಾನಿಯಾಗಿ ಬಾಳಿನುದ್ದಕ್ಕೂ ಹೋರಾಡಿ ಭಾರತದ ಸರ್ವತೋಮುಖ ಅಬಿವೃದ್ಧಿ ಮತ್ತು ಐಕ್ಯತೆಗೆ ಶ್ರಮಿಸಿದ ದಿಟ್ಟ, ಉಕ್ಕಿನ ಮಹಿಳೆಯಾಗಿದ್ದಾರೆ.  ಸ್ತ್ರೀ ಅಬಲೆಯಲ್ಲ.  ಸಬಲೆ ಎನ್ನುವದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ನಾಯಕಿಯಾಗಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮದಿನ ಆಚರಿಸಲಾಯಿತು

ಇಂದಿರಾ ಗಾಂಧಿ ಅವರು ರೂಪಿಸಿದ ಗರೀಬಿ ಹಟಾವೋ, ರೋಟಿ, ಕಪಡಾ ಔರ್ ಮಕಾನ ಮುಂತಾದ ಜನಪರ ಯೋಜನೆಗಳು ಇಂದಿಗೂ ಪ್ರಚಲಿತವಾಗಿವೆ.  ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಮಹತ್ಮದ ಕೊಡುಗೆ ನೀಡಿರುವ ಅವರು ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ,, ಬಾಂಗ್ಲಾ ಉದಾರಿಕರಣ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ, ಅವರ ದೂರದೃಷ್ಟಿ ಆಲೋಚನೆ, ವಿದೇಶಿ ನೀತಿಗಳು ಅವರ ಚಾಣಕ್ಷ ರಾಜಕಾರಣಕ್ಕೆ ಉದಾಹರಣೆಯಾಗಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರಿಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಅಫ್ಜಲ್ ಜಾನವೆಕರ, ಜಕ್ಕಪ್ಪ ಯಡವೆ, ಕೆ. ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಪೀರಪ್ಪ ನಡುವಿನಮನಿ, ಡಿ. ಎಲ್. ಚವ್ಹಾಣ, ಅಪ್ಪಾಸಾಹೇಬ ಯರನಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರಾಗಳಾದ ಅಮಿತ ಚವ್ಹಾಣ, ಸಣ್ಣಪ್ಪ ತಳವಾರ, ನಿಂಗಪ್ಪಾ ಸಂಗಾಪೂರ, ಲಾಲಸಾಬ ಕೊರಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಸುರೇಶ ಗೊಣಸಗಿ, ಶರಣಪ್ಪ ಯಕ್ಕುಂಡಿ, ಗೌಸ ಮುಜಾವರ, ಇಲಿಯಾಸಅಹ್ಮದ ಸಿದ್ದಿಕಿ, ಅಬೂಬಕರ ಕಂಬಾಗಿ, ಅಬ್ದುಲ್‌ಪೀರಾ ಜಮಖಂಡಿ, ದೇವಾನಂದ ಲಚ್ಯಾಣ, ಫಿರೋಜ ಶೇಖ, ಎಂ. ಎ. ಬಕ್ಷಿ, ತಾಜೋದ್ದಿನ ಖಲಿಫಾ, ಭಾರತಿ ನಾವಿ, ಜಯಶ್ರೀ ಭಾರತೆ, ಮಂಜುಳಾ ಜಾಧವ, ಮಂಜುಳಾ ಗಾಯಕವಾಡ, ಭಾರತಿ ಹೊಸಮನಿ, ಶಮಿಮಾ ಅಕ್ಕಲಕೋಟ, ಎ. ಪಿ. ನಿಂಬರಗಿ, ಹಮಿದಾ ಪಟೇಲ, ಸರಿತಾ ನಾಯಕ, ರುಕ್ಮಿಣಿ ಚವ್ಹಾಣ, ಬಿ. ಎಸ್. ಗಸ್ತಿ, ಬಂದೆನವಾಜ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌