ನ. 24, 25 ರಂದು ಭಾವಸಾರ ಕ್ಷತ್ರೀಯ ಭವನ ಉದ್ಘಾಟನೆ- ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾಗಿ

ವಿಜಯಪುರ: ನಗರದ ಭಾವಸಾರ ಕ್ಷತ್ರೀಯ ಸಮಾಜದ ನೂತನ ಸಾಂಸ್ಕೃತಿಕ ಭವನ ಉದ್ಘಾಟನೆ ಸಮಾರಂಭ ನ. 24 ಮತ್ತು 25 ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಭಾವಸಾರ ಕ್ಷತ್ರೀಯ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ದೇವಗಿರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದ ಬಿಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜ್ ಎದುರಿನ ಆನಂದ ನಗರದಲ್ಲಿ ರೂ. 2.65 ಕೋ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಭಾವಸಾರ ಕ್ಷತ್ರೀಯ ಸಮಾಜದ ಸಾಂಸ್ಕೃತಿಕ ಭವನವನ್ನು ನ.24 ರಂದು  ವಾಸ್ತುಶಾಂತಿ ಮತ್ತು ಸಾಮಾಜದ ಪ್ರಭಾಕರ ಬೂವಾ ಭೋಧಲೆ ಮಹಾರಾಜರ ಶೋಭಾಯಾತ್ರೆ ಕಾರ್ಯಕ್ರಮ ಹಾಗೂ ನ. 25 ರಂದು ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಭಾವಸಾರ ಕ್ಷತ್ರೀಯ ಸಮಾಜದ ನೂತನ ಸಾಂಸ್ಕೃತಿಕ ಭವನ

ನ.24 ರಂದು ಬೆಳಿಗ್ಗೆ 6.30ಕ್ಕೆ ಕಟ್ಟಡ ವಾಸ್ತುಶಾಂತಿ, 7.30ಕ್ಕೆ ಭಾವಸಾರ ಕ್ಷತ್ರೀಯ ಸಮಾಜ ಸರಾಫ್ ಬಜಾರದಿಂದ ಶೋಭಾಯಾತ್ರೆ ಹಾಗೂ ಕುಂಭಮೇಳ ನಡೆಲಿದ್ದು, ನಗರದ ಗಾಂದಿಚೌಕ್, ಸಿದ್ದೇಶ್ವರ ದೇವಸ್ಥಾನದ ಮೂಲಕ ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನಕ್ಕೆ ತಲುಪಲಿದೆ.  ಸಂ. 4ಕ್ಕೆ ಸಮಾಜದ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಸಮಾಜದ ಪ್ರಭಾಕರ ಭೂವಾ ಭೊಧಲೆ ಮಹಾರಾಜರು ಹಾಗೂ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಜಿಗಳು ವಹಿಸಲಿದ್ದಾರೆ.  ಭಾವಸಾರ ಕ್ಷತ್ರೀಯ ಸಮಾಜದ ಜಿಲ್ಲಾ ಅಧ್ಯಕ್ಷ ರಾಜೇಶ ದೇವಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ.  ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿ.ಪ ಮಾಜಿ ಸದಸ್ಯ ನಾರಾಯಣ ಭಾಂಡಗೆ, ಜಯಪ್ರಕಾಶ್ ಅಂಬರಕರ, ಸುರೇಶ ಬುಲಬುಲೆ ಪಾಲ್ಗೋಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ನ.25 ರಂದು ಬೆಳಿಗ್ಗೆ 10 ಕ್ಕೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.  ಕನೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಜಯಂತ ಬೋಧಲೆ ಮಾಹಾರಾಜರು ಹಾಗೂ ಹರ್ಷಾನಂದ ಸ್ವಾಮಿಜಿಗಳು ಸಾನಿಧ್ಯ ವಹಿಸಲಿದ್ದಾರೆ.  ಸಂಸದ ರಮೇಶ ಜಿಗಜಿಣಗಿ, ಸಚಿವ ಶಿವಾನಂದ ಎಸ್. ಪಾಟೀಲ, ಮಾಜಿ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜು ಜವಳಕರ, ಕಿಶನರಾವ್ ಗುಡ್ಡಾಳೆ, ಶ್ರೀನಿವಾಸ ಪಿಸೆ, ಕೆ. ಜಿ. ಟಿಕಾರೆ, ರಮೇಶ ತಾಪಸೆ, ಸುದರ್ಶನ ಸುಲಾಖೆ, ಅಶೋಕ ಮನಗೂಳಿ, ನಾನಾಗೌಡ ಬಿರಾದಾರ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ರಾಜೇಶ ದೇವಗಿರಿ ತಿಳಿಸಿದರು.

ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಿಲನ ಮಿರಜಕರ, ಕಾರ್ಯದರ್ಶಿ ದೀಪಕ ಶಿಂತ್ರೆ, ವಿಶಾಲ ಪುಕಾಳೆ, ಪದ್ಮಾತಾಯಿ ಇಜಂತಕರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌