ಜಿಲ್ಲಾ ಪ್ರವಾಸಿ ತಾಣಗಳಲ್ಲಿ ಬುದ್ಧವಿಹಾರ ಸೇರ್ಪಡೆ- ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ- ಸಚಿವ ಎಚ್. ಕೆ. ಪಾಟೀಲ ವಾಗ್ದಾನ

ವಿಜಯಪುರ: ಜಿಲ್ಲಾ ಪ್ರವಾಸದಲ್ಲಿರುವ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಸಚಿವ ಎಚ್. ಕೆ.  ಪಾಟೀಲ ಅವರು ನಗರದ ಸಾರಿಪುತ್ರ- ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು.

ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲ ಅವರು, ಭಂತೆ ಬೋಧಿಧಮ್ಮ ಅವರಿಂದಆಶೀರ್ವಾದ ಪಡೆದು ಮಾತನಾಡಿದರು.

ಬಳಿಕ ಮಾತನಾಡಿದ ಅವರು ಹೃದಯ ಭಾಗದಲ್ಲಿರುವ ಬುದ್ಧ ವಿಹಾರವನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವುದಲ್ಲದೆ ವಿಹಾರದ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿದರು.  ಅಲ್ಲದೇ, ಯಾತ್ರಿ ನಿವಾಸದ ನೀಲನಕ್ಷೆ ತಯಾರಿಸುವಂತೆ ಮತ್ತು ಅಂದಾಜುವೆಚ್ಚವನ್ನು ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯಪುರದಲ್ಲಿರುವ ಬುದ್ಧ ವಿಹಾರಕ್ಕೆ ಸಚಿವ ಎಚ್. ಕೆ. ಪಾಟೀಲ ಭೇಟಿ ನೀಡಿದರು

ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ರಮೇಶ ಸೂಳಿಭಾವಿ, ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕ ಮಂಡಳಿ ಸದಸ್ಯರಾದ ರಾಜು ತೊರವಿ, ಅನಿಲ ಹೊಸಮನಿ, ಎಸ್. ಆರ್. ಶಿವಶರಣ, ಸುರೇಶ ಘೊಣಸಗಿ, ಸಮಾಜದ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಸುಭಾಸ ಗುಡಿಮನಿ, ಸಂಗಪ್ಪ ಚಲವಾದಿ, ಬಸವರಾಜ ಬ್ಯಾಳಿ, ಕೆ. ಎಂ. ಶಿವಶರಣ, ಚಿದಾನಂದ ನಿಂಬಾಳ, ಮಹೇಶ ಕ್ಯಾತನ್, ಚಿದಾನಂದ ಹೊನವಾಡಕರ, ರಮೇಶ ಯಡಹಳ್ಳಿ, ಭೀಮಶಿ ಹಿಪ್ಪರಗಿ, ಎಂ. ಬಿ. ಹಳ್ಳದಮನಿ, ಸುನೀಲ ಉಕ್ಕಲಿ, ಅಭಿಷೇಕ ಚಕ್ರವರ್ತಿ, ರೋಹಿತ ಮಲಕನವರ, ರಾಹುಲ ಕುಬಕಡ್ಡಿ, ಭಾರತಿ ಹೊಸಮನಿ, ಸಂತೋಷ ಶಹಾಪುರ, ವೆಂಕಟೇಶ ವಗ್ಗೇನವರ, ಕೆ. ಎಂ. ಕೂಡಲಗಿ ಸೇರಿದಂತೆ ನೂರಾರು ಬೌದ್ಧ ಉಪಾಸಕ- ಉಪಾಸಕಿಯರು ಉಪಸ್ಥಿತರಿದ್ದರು.

ಬುದ್ಧ ವಿಹಾರ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಅವರು ಸ್ವಾಗತಿಸಿದರು.  ತಮ್ಮ ವಿಶ್ವಾಸಿ,

Leave a Reply

ಹೊಸ ಪೋಸ್ಟ್‌