ವೈದ್ಯ ವಿದ್ಯಾಥಿ೯ಗಳು ಸೈನಿಕರಂತೆ ಸಮಯ ಪ್ರಜ್ಞೆ, ಚುರುಕುತನ, ಶ್ರದ್ದೆ, ಸರಳತೆ ಅಳವಡಿಸಿಕೊಳ್ಳಬೇಕು- ಡಾ. ಶ್ರೀಪಾದ ಹೆಗಡೆ

ಬಾಗಲಕೋಟೆ: ಇಂದಿನ ವೈದ್ಯ ವಿದ್ಯಾಥಿ೯ಗಳು ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸೈನಿಕರಂತೆ ಸಮಯ ಪ್ರಜ್ಞೆ, ಚುರುಕುತನ, ಶ್ರದ್ದೆ ಮತ್ತು ಸರಳತೆ ಗುಣಗಳನ್ನು ಳವಡಿಸಿಕೊಳ್ಳಬೇಕು ಎಂದು ದೆಹಲಿಯ ಎನ್. ಸಿ. ಎಚ್. ಪದಾಧಿಕಾರಿ ಡಾ. ಶ್ರೀಪಾದ ಹೆಗಡೆ ಹೇಳಿದ್ದಾರೆ.

ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ 2023- 24 ನೇ ವರ್,ದ ಬಿಎಚ್ಎಂಎಸ್ ಪದವಿ ಕೋಸ೯ನ ಶೈಕ್ಷಣಿಕ ವರ್ಷಾರಂಭ ಕಾಯ೯ಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

ಹೋಮಿಯೋಪಥಿ ಕಾಲೇಜಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಿದ ಸಂಸ್ಥೆಯ ಚೇರಮನ್ ಡಾ.ವೀರಣ್ಣ ಚರಂತಿಮಠರ ಕಾಯ೯ ವೈಖರಿಯನ್ನು ಅವರು ಶ್ಲಾಘಸಿದರು.

ಕಾಲೇಜಿನ ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಸಾಸನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ.ಬಿರಾದಾರ ಮಾತನಾಡಿದರು.

ಈ ಸಂದಭ೯ದಲ್ಲಿ ನೂತನ ಎನ್ಎಸ್ಎಸ್ ಅಧಿಕಾರಿ ಡಾ. ಸುನೀಲ ಭೋಸಲೆ ಅವರಿಗೆ ಪದಕ ನೀಡಿ ಪದಗ್ರಹಣ ಮಾಡಲಾಯಿತು.  ಹಿರಿಯ ಪ್ರಾದ್ಯಾಪಕ ಡಾ. ರವಿ ಎಸ್. ಕೋಟೆಣ್ಣವರ, ಡಾ. ಮಿಲಿಂದ ಬೆಳಗಾಂವಕರ, ಡಾ. ವಿಜಯಲಕ್ಷ್ಮಿ ಪಾಟೀಲ, ಡಾ. ಸುಧೀರ ಬೆಟಗೇರಿ ಉಪಸ್ಥಿತರಿದ್ದರು.

ವಿದ್ಯಾಥಿ೯ಗಳಾದ ಅಪೂವ೯, ಸೌಮ್ಯ, ದೀಪಾ, ಸಂಸ್ಕೃತಿ, ತನುಶ್ರೀ, ವಿದ್ಯಾ ಪ್ರಾಥಿ೯ಸಿದರು.  ಪ್ರಾಚಾಯ೯ ಡಾ. ಅರುಣ ಹೂಲಿ ಸ್ವಾಗತಿಸಿದರು.  ದಕ್ಷತಾ ಹೊರಟ್ಟಿ ಮತ್ತು ಪ್ರಜ್ಞಾ ನಾಯಕ ಪರಿಚಯಿಸಿದರು.  ಪ್ರಿಯಾಂಕಾ ಹವಾಲ್ದಾರ ವಂದಿಸಿದರು.  ಶ್ವೇತಾ ಸಜ್ಜನ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌