ಸಾಧನೆ ನಿರಂತರವಾಗಿರಬೇಕು – ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ಸಾಧನೆ ನಿರಂತರವಾಗಿರಬೇಕು.  ಸಾಧಕರಿಗೆ ಶಕ್ತಿ ತುಂಬವ ಕೆಲಸ ಮಾಡಬೇಕು ಎಂದು ಮಧುವನ ಗೆಳೆಯರ ಬಳಗದ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಹೇಳಿದ್ದಾರೆ.

ನಗರದ ಹೊಟೇಲ್ ಮಧುವನ ಇಂಟರನ್ಯಾಷನಲ್ ನಲ್ಲಿ ಮಧುವನ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮಹನೀಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ತುಂಬ ಸಂತಸವನ್ನುಂಟು ಮಾಡಿದೆ.  ಇವರ ಸಾಧನೆ ಇನ್ನೂ ಎತ್ತರಕೆ ಬೆಳೆಯಲಿ.  ಇವರೆಲ್ಲರೂ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಹೊರಹೊಮ್ಮಲಿ.  ಸಾಧನೆ ಎಂಬುದು ನಿರಂತರವಾಗಿರಬೇಕು.  ಅದು ನಿಂತ ನೀರಾಗಬಾರದು.  ಹರಿಯುವ ನೀರಿಗೆ ಬೆಲೆ ಹೇಗೆ ಇರುತ್ತದೆಯೋ ಅದೇ ರೀತಿ ನಿರಂತರವಾಗಿ ಸಮಾಜ ಕಾರ್ಯ ಮಾಡುವ ಮನೋಭಾವದಿಂದ ಮುಂದುವರೆಯಬೇಕು.  ಇಂಥ ವ್ಯಕ್ತಿಗಳಿಗೆ ಭಗವಂತ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ. ಎಸ್.ಎಲ್. ಪಾಟೀಲ, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಯಂಡಿಗೇರಿ, ಕರವೇ ಜಿಲ್ಲಾಧ್ಯಕ್ಷರಾದ ಎಂ. ಸಿ. ಮುಲ್ಲಾ, ಡಾ. ಸಲೀಂ ದುಂಡಸಿ, ಚಂದ್ರಶೇಖರ ಲೆಂಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಫೀ ಭಂಡಾರಿ, ಮಕ್ಕಳ ಸಾಹಿತಿ ಪ. ಗು. ಸಿದ್ಧಾಪೂರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್. ಬಿ. ಮಿರಜಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಪ್ಪಸಾಬ ಯರನಾಳ, ಫಯಾಜ ಕಲಾದಗಿ, ಎಚ್.ಎಂ. ಬಿಸನಾಳ, ಆರ್. ಎಸ್. ಪಾಟೀಲ, ಪ್ರಕಾಶ ಪಾಟೀಲ, ಎ. ಎಂ. ಗುಡ್ಡೊಡ್ಡಗಿ, ನಾಗರಾಜ ಲಂಬು, ವಿ. ಎಂ. ಬಾಗಾಯತ, ಪ್ರೊ. ಅಲಿಮುಲ್ಲಾ ಹುಸೇನಿ, ಪ್ರೊ. ಸಮಿ, ಎಸ್. ಎಸ್. ಜಾಹಗೀರದಾರ, ಅಕ್ರಮ ಮಾಶಾಳಕರ, ಭಕ್ಷಿ, ಹೋಮಿಯೋಪತಿ ವೈಧ್ಯರಾದ ಡಾ. ಅನುರಾಧ ಮಿರಜಕರ, ಚಂದಾವಾಲೆ, ಎ. ಎx. ಹುಲ್ಲೂರ, ಮೊಹ್ಮದ ಮುಲ್ಲಾ, ಅಲ್ಲಾಭಕ್ಷ ನಾಗರಬಾವಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌