ಸಕ್ಕರೆ ಕರ್ಖಾನೆ ಮಾಲೀಕರೊಂದಿಗೆ ಡಿಸಿ ಟಿ. ಭೂಬಾಲನ್ ಸಭೆ- ಸಕಾಲದಲ್ಲಿ ಕಬ್ಬಿನ ಬಿಲ್ ಪಾವತಿಸಲು ಸೂಚನೆ

ವಿಜಯಪುರ: ಕಬ್ಬು ನುರಿಸಿದ 14 ದಿನಗಳಲ್ಲಿ ಸಕ್ಕರೆ ಕರ‍್ಖಾನೆಗಳು ನೇರವಾಗಿ  ರೈತರ ಖಾತೆಗಳಿಗೆ ಎಫ್‍ಆರ್‍ಪಿ ದರದಂತೆ ಕಬ್ಬಿನ ಬಿಲ್ಲನ್ನು ಜಮೆ ಮಾಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಸಕ್ಕರೆ ಕರ‍್ಖಾನೆಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಕಾನೆಗಳ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಬ್ಬಿನ ಬಿಲ್ ಪಾವತಿಸುವಲ್ಲಿ ಯಾವುದೇ ವಿಳಂಬ ಧೋರಣೆ ಅನುಸರಿಸದೇ ಸಕಾಲದಲ್ಲಿ ಮತ್ತು ನಿಗದಿತ ದರದನ್ವಯ ಬಿಲ್ ಪಾವತಿ ಮಾಡಬೇಕು. ಸಕ್ಕರೆ ಕರ‍್ಖಾನೆ ಮಾಲಿಕರು ಯಾವುದೇ ಸಂರ‍್ಭದಲ್ಲಿ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ರ‍್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೊರೆತ ಅನುಮತಿಯನುಸಾರವಾಗಿ ಸಾರ‍್ಥ್ಯಕ್ಕನುಗುಣವಾಗಿ ಕಬ್ಬು ನುರಿಸುವಂತೆ ಸೂಚಿಸಿದ ಅವರು ನಿಯಮಗಳನ್ನು ಉಲ್ಲಂಘಿಸಿದ ಕಾರ್ಖಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಜಂಟಿ ನಿರ್ದೇಶಕರು ಕೈಗಾರಿಕೆ ಇಲಾಖೆ, ಸಹಾಯಕ ನಿಯಂತ್ರಕರು ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಂಟಿ ಕೃಷಿ ನರ‍್ದೇಶಕರನ್ನೊಳಗೊಂಡ ತಂಡ ಕಾಲಕಾಲಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ತೂಕ ಯಂತ್ರದ ಸತ್ಯಾಪಣೆ ಮಾಡಬೇಕು. ಎಲ್ಲ ಕರ‍್ಖಾನೆಗಳು ಡಿಜಿಟಲ್ ವೇಯಿಂಗ್ ಯಂತ್ರ ಅಳವಡಿಸಿಕೊಳ್ಳಬೇಕು. ಡಿಜಿಟಲ್ ವೇಯಿಂಗ್ ಯಂತ್ರದ ಮೂಲಕವೇ ಕಬ್ಬು ತೂಕ ಮಾಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಈ ಸಭೆಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನರ‍್ದೇಶಕ ವಿನಯಕುಮಾರ, ಸಹಕಾರ ಇಲಾಖೆ ಉಪನಿಬಂಧಕಿ ಎಸ್. ಕೆ. ಭಾಗ್ಯಶ್ರೀ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಶ್ರೀಕಾಂತ ಬುರಣಾಪುರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿಗಳು ಸೇರಿದಂತೆ ಒಂಬತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌