ವಿಜಯಪುರ ವೃಕ್ಷಥಾನ್ ಹೆರಿಟೇಜ್ ರನ್ ಗೆ ಭಾರಿ ಬೆಂಬಲ- ಸೈನಿಕ ಶಾಲೆಯ 450 ವಿದ್ಯಾರ್ಥಿಗಳು ಭಾಗಿ

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿಗಾಗಿ ನಗರದಲ್ಲಿ ಡಿಸೆಂಬರ್ 24 ರಂದು ಆಯೋಜಿಸಲಾಗಿರುವ ವೃಕ್ಷಥಾನ್ ಹೆರಿಟೇಜ್ ರನ್- 2023 ಗೆ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಓಟದಲ್ಲಿ ಪ್ರತಿಷ್ಠಿತ ಸೈನಿಕ ಶಾಲೆಯ 450 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೋಳ್ಳಲಿದ್ದಾರೆ.

ಮ್ಯಾರಾಥಾನ್ ಕೋರ್ ಕಮಿಟಿಯ ಸಂಚಾಲಕ ಮುರಗೇಶ ಪಟ್ಟಣಶೆಟ್ಟಿ ನೇತೃತ್ವದಲ್ಲಿ ವಿರೇಂದ್ರ ಗುಚ್ಚಟ್ಟಿ, ಡಾ. ದೀಪಕ ಚವ್ಹಾಣ ಹಾಗೂ ಡಾ. ರಾಜು ಯಲಗೊಂಡ ಸೋಮವಾರ ಸೈನಿಕ ಶಾಲೆಯ ಪ್ರಾಚರ‍್ಯೆ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಸ್ಟ್ ಅವರನ್ನು ಬೇಟಿ ಮಾಡಿ ಹೆರಿಟೇಜ್ ರನ್ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಪ್ರಾಂಶುಪಾಲರು ಸಂಪರ‍್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಶಾಲೆಯ 450 ವಿದ್ಯರ‍್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಕೋರ್ ಕಮಿಟಿ ಸದಸ್ಯರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬೇಟಿ ಮಾಡಿ ವೃಕ್ಷಥಾನ್‌ನಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು. ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ. ಸಿಪಿಐ, ಪಿಎಸ್‌ಐ ಮತ್ತಿತರ ಅಧಿಕಾರಿಗಳು ಕೂಡ ಈ ಓಟದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ವೇಳೆ, ಕೋರ್ ಕಮಿಟಿ ಸದಸ್ಯರು  ನಾನಾ ಶಿಕ್ಷಣ ಸಂಸ್ಥೆಗಳಿಗೂ ಭೇಟಿ ನೀಡಿ ವೃಕ್ಷಥಾನ್‌ನಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು.

ಮಲೆನಾಡು ಅಲ್ಟ್ರಾ ಮ್ಯಾರಾಥಾನ್ 50 ಕಿ.ಮೀ ನಲ್ಲಿ ಪಾಲ್ಗೊಂಡು ಸಂಕೇಚ ಬಗಲಿ, ಸಂದೀಪ ಮಡಗೊಂಡ ಅವರನ್ನು ಸನ್ಮಾನಿಸಲಾಯಿತು

ಮಲೆನಾಡು ಅಲ್ಟ್ರಾ ಮ್ಯಾರಾಥಾನ್ 50 ಕಿ.ಮೀ ನಲ್ಲಿ ಪಾಲ್ಗೊಂಡು ಗಮನ ಸೆಳೆದ ಕಮಿಟಿ ಸದಸ್ಯರು

ಈ ಮದ್ಯ ಚಿಕ್ಕಮಗಳೂರು ಜಿಲ್ಲೆಯ ಮಳಂದೂರಿನಲ್ಲಿ ಶನಿವಾರ ನಡೆದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್‌ನಲ್ಲಿ ಕೋರ್ ಕಮಿಟಿಯ ಸಂಕೇತ ಬಗಲಿ, ರಘು ಸಾಲೋಟಗಿ ಹಾಗೂ ಸಂದೀಪ ಮಡಗೊಂಡ ಗುಡ್ಡಗಾಡಿನಿಂದ ಕೂಡಿರುವ ರಸ್ತೆಯಲ್ಲಿ ಓಡಿ ಪರ‍್ಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಂಕೇತ ಬಗಲಿ ಮತ್ತು ರಘು ಸಾಲೋಟಗಿ ಅವರು 50 ಕಿ.ಮೀ ಹಾಗೂ ಸಂದೀಪ ಮಡಗೊಂಡ ಅವರು 30 ಕಿ.ಮೀ ಓಟದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕೇತ ಬಗಲಿ ಮತ್ತು ಸಂದೀಪ ಮಡಗೊಂಡ ಅವರನ್ನು ಇಂದು ಮಂಗಳವಾರ ವಿಜಯಪುರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಕೋರ್ ಕಮಿಟಿ ವತಿಯಿಂದ ಸನ್ಮಾಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮಲೆನಾಡು ಅಲ್ಟ್ರಾ ಮ್ಯಾರಾಥಾನ್‌ನಲ್ಲಿ ಸಂಕೇತ ಬಗಲಿ, ರಘು ಸಾಲೋಟಗಿ ಹಾಗೂ ಸಂದೀಪ ಮಡಗೊಂಡ ಪಾಲ್ಗೊಳ್ಳುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಕಷ್ಟು ಸವಾಲುಗಳನ್ನು ಹೊಂದಿರುವ ಮತ್ತು ದರ‍್ಗಮ ಹಾದಿ ಹಾಗೂ ಕಾಡಿನಲ್ಲಿ ನಡೆಯುವ ಈ ಓಟದಲ್ಲಿ ಪಾಲ್ಗೊಂಡು ಸಂಪರ‍್ಣವಾಗಿ ಓಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ವೃಕ್ಷಥಾನ್ ಹೆರಿಟೇಜ್ ರನ್- 2023ಕ್ಕೆ ಮತ್ತಷ್ಟು ಜನ ಹೆಸರು ನೋಂದಾಯಿಸಿಕೊಳ್ಳಲು ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು. ಈ ಸಂರ‍್ಭದಲ್ಲಿ ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಸೋಮಶೇಖರ ಸ್ವಾಮಿ, ರಾಜು ಯಲಗೊಂಡ, ವಿರೇಂದ್ರ ಗುಚ್ಚಟ್ಟಿ, ಅಪ್ಪು ಭೈರಗೊಂಡ, ಅಬಕಾರಿ ಇಲಾಖೆಯ ಉಪಆಯುಕ್ತ ಡಾ. ಸಂಗನಗೌಡ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌