ನಳಂದ ಕಾಲೇಜಿನ ವಿದ್ಯಾರ್ಥಿ ಜುಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿಜಯಪರ:  ನಗರದ ನಳಂದಾ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಜುಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ನವೆಂಬರ್ 24 ಮತ್ತು 25 ರಂದು ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಳಂದಾ ಕಾಲೇಜಿನ ಭರಮಪ್ಪ ಸಿದ್ದಲಿಂಗಪ್ಪ ದಳವಾಯಿ 66 ಕೆಜಿ ವಿಭಾಗದಲ್ಲಿ ಪ್ರಥಮ ಸ್ತಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದೇ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿ ರಾಕೇಶ ಮಾರುತಿ ದೇವಮನೆ 55 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಕಾರ್ಯದರ್ಶಿ ಮಿಲಿಂದ ಚಂಚಲಕರ, ಪ್ರಾಚಾರ್ಯೆ ಹೇಮಲತಾ ಪಾಟೀಲ, ಸಿಬ್ಬಂದಿ ವರ್ಗ ಸಹಪಾಠಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌