ವಿಜಯಪುರ: ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.
ವಿಜಯಪುರ ಗ್ರಾಮದೇವತೆ ಶ್ರೀ ಸಿದ್ದೇಶ್ವರ ಗುಡಿಯ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ನೇತೃತ್ವದಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನ್ನಿಸಿ ಬಿಜೆಪಿ ಪರ ಘೋಷಣೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್. ಎಸ್. ಪಾಟೀಲ ಕೂಚಬಾಳ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಘಢ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವು ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. ಜನಪರ ಮತ್ತು ಶುದ್ದ ಆಡಳಿತಕ್ಕೆ ಇಡೀ ಭಾರತವೇ ಮೆಚ್ಚಿದೆ. ಯುಕ್ರೆನ್ ಯುದ್ದ ಸಂದರ್ಭದಲ್ಲಿ ತೊಂದರೆಯಲ್ಲಿ ಸಿಲುಕಿದ ಭಾರತೀಯರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುದ್ದ ನಿಲ್ಲಿಸಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದರು. ಇದರಿಂದ ಅನೇಕ ರಾಷ್ಟ್ರಗಳು ಸಹ ತಮ್ಮ ನಿವಾಸಿಗಳನ್ನು ಸುರಕ್ಷಿತವಾಗಿ ಕರೆಯಿಸಿಕೊಳ್ಳಲು ಸಾಧ್ಯವಾಯಿತು. ಈ ರೀತಿ ಸದಾ ದೇಶದ ಬಗ್ಗೆ ಚಿಂತಿಸುವ ಮೋದಿ ಅವರ ಜನಪರ ನಾಯಕತ್ವಕ್ಕೆ ಇಡೀ ವಿಶ್ವವೇ ಮೆಚ್ಚಿದೆ. ಇದಕ್ಕೆ ನಾಲ್ಕು ರಾಜ್ಯಗಳ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು.
ಬಿಜೆಪಿ ನಗರ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ ಮಾತನಾಡಿ, ನಾಲ್ಕು ರಾಜ್ಯದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿರುವುದು ಸಂತೋಷ ತರಿಸಿದೆ. ಇದು ಅಭಿವೃದ್ಧಿಯ ಗೆಲುವು. ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ಮತ್ತೊಮ್ಮೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ಬಿರಾದಾರ, ವಿವೇಕಾನಂದ ಡಬ್ಬಿ ಪ್ರೇಮಾನಂದ ಬಿರಾದಾರ, ರಾಜು ತಾಳಿಕೋಟಿ, ಛಾಯಾ ಮಸಿಯನವರ, ಬಸವರಾಜ ಬೈಚಬಾಳ, ರಾಹುಲ್ ಜಾಧವ, ಮಹೇಶ ಒಡೆಯರ, , ಕಿರಣ್ ಪಾಟೀಲ್ ಎಂ ಎಸ್ ಕರಡಿ ಭೀಮಾಶಂಕರ ಹದನೂರ, ಪಾಪುಸಿಂಗ ರಜಪೂತ, ಹಣಮಂತ ಬಿರಾದಾರ, ಚಿದಾನಂದ ಚಲವಾದಿ ರಾಜಕುಮಾರ ಸಗಾಯಿ,ಮಲ್ಲಮ್ಮ ಜೋಗೂರ, ವಿಠ್ಠಲ ನಡುವಿನಕೇರಿ, ಲಕ್ಷ್ಮಿ ಕನ್ನೊಳ್ಳಿ ಜಗದೀಶ ಮುಚ್ಚಂಡಿ ಸಂಗಮೇಶ ಹೌದೆ, ಸಂತೋಷ ತಳಕೇರಿ, ಕೃಷ್ಣಾ ಗುನ್ನಾಳಕರ, ವಿಜಯ ಜೋಶಿ, ಭೀಮಸಿಂಗ ರಾಠೋಡ, ಸಂದೀಪ ಪಾಟೀಲ, , ಕಾಂತು ಶಿಂಧೆ, ವಿನಾಯಕ ಗೌಳಿ ಸಂತೋಷ ನಿಂಬರಗಿ,ಅನಿಲ್ ಉಪ್ಪಾರ್ ಗೋಪಾಲ್ ಘಟಕಂಬ್ಳೆ ಸಂಗಮೇಶ್ ಹೌದೇ, ಚಿದಾನಂದ ಔರಂಗಾಬಾದ್ ದತ್ತ ಗುಲಾಂಡೆ ಆನಂದ್ ಮುಚ್ಚಂಡಿ ರಾಮಚಂದ್ರ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.