ವಿಜಯಪುರ: ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ನಗರದ ಶಿವಾಜಿ ಚೌಕಿನಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ವತಿಯಿಂದ ಪ್ರತಿ ಸೋಮವಾರ ಅನ್ನದಾಸೋಹ ಸೇವೆ ಪ್ರಾರಂಭಿಸಿದ್ದಾರೆ.
ಈ ಕಾರ್ಯಕ್ಕೆ ಜ್ಞಾನಯೋಗ್ರಾಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅನ್ನ ದಾಸೋಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಜಯಪುರದ ಶಿವಾಜಿ ಚೌಕಿನಲ್ಲಿ ಇನ್ನು ಮುಂದೆ ಪ್ರತಿ ಸೋಮವಾರ ಅನ್ನದಾಸೋಹ ವ್ಯವಸ್ಥೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಜ್ಞಾನಯೋಗಾಶ್ರಮದಲ್ಲಿ ನಿರಂತರ ಅನ್ನಪ್ರಸಾದ ಇರುತ್ತದೆ. ಅದೇ ರೀತಿ ಈಗ ಶಿವಾಜಿ ಚೌಕಿನಲ್ಲಿಯೂ ಅನ್ನದಾಸೋಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಬಸವನಾಡು ದಾಸೋಹಕ್ಕೆ ಹೆಸರುವಾಸಿಯಾಗಿದೆ. ಇಂಥ ಜಿಲ್ಲೆಯಲ್ಲಿ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾಮಂಡಳಿಯವರು ಪ್ರತಿ ಸೋಮವಾರ ದಾಸೋಹ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಕ್ತಾದಿಗಳು ಅನ್ನ ಪ್ರಸಾದದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀಗಳು ಕರ ನೀಡಿದರು.
ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸುಮಾರು 25 ವರ್ಷಗಳಿಂದ ಮಹಾಮಂಡಳ ವತಿಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ದೇವರ ಆರಾಧನೆಯಲ್ಲಿ ಪಾಲ್ಗಗೋಳ್ಳಲು ಪ್ರೇರೆಪಣೆ ನೀಡಿದೆ. ಅದೇ ರೀತಿ ಅನ್ನ ದಾಸೋಹ ಕಾರ್ಯಕ್ರಮವೂ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಹಲವು ದಿನಗಳಿಂದ ಈ ಕಾರ್ಯ ಮಾಡಬೇಕು ಎಂದು ಚಿಂತನೆ ಮಾಡಲಾಗಿತ್ತು. ಮಹಾಮಂಡಳದ ಸಂಸ್ಥಾಪಕ ಅಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಇನ್ನು ಮುಂದೆ ಪ್ರತಿ ಸೋಮವಾದ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಗೋಪಾಲ್ ಘಟಕಾಂಬಳೆ. ಮಾಜಿ ಬಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರು, ಮಾಜಿ ಪಾಲಿಕೆ ಸದಸ್ಯ ಅಪ್ಪು ಸಜ್ಜನ, ರಮೇಶ ರೇಶ್ಮಿ, ಸಂತೋಷ ಜಾಧವ, ವಿನಾಯಕ ದೈಹಿಂಡೆ, ಕಾಂತು ಸಿಂಧೆ, ಜಗದೀಶ ಮುಚ್ಚಂಡು, ಅನೀಲ್ ಉಪ್ಪಾರ. ನಿಖೀಲ ಮ್ಯಾಗೇರಿ, ಆನಂದ ಮುಚ್ಚಂಡಿ, ಮಂಜು ಘಾಟಗೆ, ಪ್ರಫುಲ್ ಪವಾರ, ಮಾರುತಿ ಮೋರೆ, ಸನ್ನಿ ಗವಿಮಠ ಸೇರಿದಂತೆ ಮಹಾಮಂಡಳದ ಕಾರ್ಯಕರ್ತರು ಉಪಸ್ಥಿತರಿದ್ದರು.