ಪಶು ಸಖಿಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಣೆ ಮಾಡಬೇಕು- ಜಿ. ಪಂ. ಸಿಇಓ ರಾಹುಲ ಶಿಂಧೆ
ವಿಜಯಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಡೇ-ಎನ್‌ಆರ್‌ಎಲ್‌ಎಂ) ಹಾಗೂ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಜಯಪುರ ಇವರುಗಳ ಸಹಯೋಗದೊಂದಿಗೆ ರುಡಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಆರು ದಿನಗಳ ಮೊದಲನೇ ಮಾಡ್ಯೂಲ್ ಪಶು ಸಖಿಯರ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆರು ದಿನಗಳ ಈ ಪಶು ಸಖಿಯರ ತರಬೇತಿ ಕಾರ್ಯಾಗಾರವು ಬಹಳ ಉಪಯುಕ್ತವಾದ ತರಬೇತಿಯಾಗಿದೆ. ಈಗಾಗಲೇ ಕಳೆದ ಒಂದು ವರ್ಷದಿಂದ ನಮ್ಮ ಜಿಲ್ಲೆಯ ಎಲ್ಲಾ […]
ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು: ಪ್ರಕಾಶ ಆರ್. ಕೆ
ವಿಜಯಪುರ: ಜಾತಿಗೊಬ್ಬ ಸ್ವಾಮಿಗಳು ಆಗುವ ಬದಲು ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು. ಯಾವುದೇ ಫಲಾಪೇಕ್ಷೆ, ಆಸೆ ಆಮೀಷಗಳಿಗೆ ಒಳಗಾಗದೇ ಎಲ್ಲಾ ಸಮಾಜಕ್ಕಾಗಿ ಒಳಿತನ್ನು ಬಯಸಿದ್ದವರೆಂದರೆ ನಡೆದಾಡುವ ದೇವರಾದ ನಮ್ಮ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಎಂದು ಗಾನಯೋಗಿ ಸಂಘದ ಮುಖಂಡ ಪ್ರಕಾಶ ಆರ್. ಕೆ ಹೇಳಿದರು. ನಗರದ ಹೊರ ವಲಯದ ಸಿಂದಗಿ ರಸ್ತೆಗೆ ಅಂಟಿಕೊಂಡಿರುವ ಬೈಪಾಸ್ ಅಂಡರ್‌ಗ್ರೌಂಡ ಗೋಡೆಗೆ ನಡೆದಾಡುವ ಶ್ರೀಗಳಾದ ಸಿದ್ಧೇಶ್ವರ ಶ್ರೀಗಳ ಛಾಯಾಚಿತ್ರವನ್ನು ಬಿಡಿಸಿ ಅವರು ಮಾತನಾಡಿದರು. ಇಡೀ ಜಗತ್ತಿನಲ್ಲಿ ಪ್ರವಚನ ಸಾರುವ […]
ಗುಮ್ಮಟ ನಗರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಗೌರವ ಸಮರ್ಪಣೆ
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ,ಸಮಾಜ ಕಲ್ಯಾಣ ಇಲಾಖೆಯ […]
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ಕರ್ನಾಟಕ ಸಂಭ್ರಮ ಅಂಗವಾಗಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ
ವಿಜಯಪುರ: ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಅವಶ್ಯಕತೆ ಇದೆ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ವಿವೇಕನಗರದ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಆಯೋಜಿಸಿದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಹಾಗೂ ಕ್ರೀಡೆಯ ಜೊತೆಗೆ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಅವರಲ್ಲಿ ಅಡಗಿರುವ ಕಲಾ […]