ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು: ಪ್ರಕಾಶ ಆರ್. ಕೆ

ವಿಜಯಪುರ: ಜಾತಿಗೊಬ್ಬ ಸ್ವಾಮಿಗಳು ಆಗುವ ಬದಲು ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು.  ಯಾವುದೇ ಫಲಾಪೇಕ್ಷೆ, ಆಸೆ ಆಮೀಷಗಳಿಗೆ ಒಳಗಾಗದೇ ಎಲ್ಲಾ ಸಮಾಜಕ್ಕಾಗಿ ಒಳಿತನ್ನು ಬಯಸಿದ್ದವರೆಂದರೆ ನಡೆದಾಡುವ ದೇವರಾದ ನಮ್ಮ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಎಂದು ಗಾನಯೋಗಿ ಸಂಘದ ಮುಖಂಡ ಪ್ರಕಾಶ ಆರ್. ಕೆ ಹೇಳಿದರು.

ನಗರದ ಹೊರ ವಲಯದ ಸಿಂದಗಿ ರಸ್ತೆಗೆ ಅಂಟಿಕೊಂಡಿರುವ ಬೈಪಾಸ್ ಅಂಡರ್‌ಗ್ರೌಂಡ ಗೋಡೆಗೆ ನಡೆದಾಡುವ ಶ್ರೀಗಳಾದ ಸಿದ್ಧೇಶ್ವರ ಶ್ರೀಗಳ ಛಾಯಾಚಿತ್ರವನ್ನು ಬಿಡಿಸಿ ಅವರು ಮಾತನಾಡಿದರು.

ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಫ್ಪೈಓವರ್ ಗೋಡೆಯ ಮೇಲೆ ಗಾನಯೋಗಿ ಸಂಘದ ಯುವಕರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ

ಇಡೀ ಜಗತ್ತಿನಲ್ಲಿ ಪ್ರವಚನ ಸಾರುವ ಮೂಲಕ ಭಕ್ತರ ಮನದಲ್ಲಿ ಜ್ಞಾನದ ಬೆಳಕನ್ನು ಶ್ರೀಗಳು ಚೆಲ್ಲಿದ್ದಾರೆ.  ಇಂಥ ಶ್ರೇಷ್ಠ ಜ್ಞಾನದ ಬಿಂದುಗಳಾದ ಸಂತ ಸಿದ್ಧೇಶ್ವರ ಶ್ರೀಗಳು ಹೇಳಿಕೊಟ್ಟ ಮಾರ್ಗದಂತೆ ನಾವೆಲ್ಲರೂ ಬದಕು ಸಾಗಿಸಬೇಕು.  ಯಾವುದೇ ಹಾನಿಕಾರಕ ಮೋಹಕ್ಕೆ ಅಂಟಿಕೊಳ್ಳದೇ ನಿತ್ಯ ಹೂವಿನ ಪರಿಮಳದಂತೆ ಸುಗಂಧ ಬೀರುವ ಸಮಾಜದಲ್ಲಿ ಬದುಕಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣವರ, ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಸಚೀನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷÀ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಸಚೀನ ಚವ್ಹಾಣ, ಬಾಬು, ರೇವಣಸಿದ್ದಯ್ಯ, ತನುಜ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌