ವಿಜ್ಞಾನ ವಿಷಯದ ಫೋನ್ ಇನ್ ಕಾರ್ಯಕ್ರಮ ಯಶಸ್ವಿ- ವಿಷಯ ತಜ್ಞರಿಂದ ಪರಿಹಾರ ಕಂಡುಕೊಂಡ ವಿದ್ಯಾರ್ಥಿಗಳು

ವಿಜಯಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಜ್ಞಾನ ವಿಷಯದ ಪೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.  ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕುರಿತ ಕಲಿಕಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎನ್. ಎಚ್. ನಾಗೂರ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ವಿಜಯಪುರದ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕಲಿಕಾ ಸಮಸ್ಯೆಗಳು, ಪರೀಕ್ಷಾ ವಿಷಯದ ಗೊಂದಲಗಳಿಗೆ ವಿಷಯ ತಜ್ಞ ಶಿಕ್ಷಕರಿಂದ ಪ್ರಶ್ನೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು. 293 ವಿದ್ಯಾರ್ಥಿಗಳಿಂದ ಕೇಳಲಾದ 483 ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

 

ಬಗಲೂರು ವಿ.ಎಸ್.ಎಂ.ಪ್ರೌಢ ಶಾಲೆಯ ರಕ್ಷಿತಾ ತೇಲಿ ಬೆಳಕಿನÀ ವಕ್ರೀಭವನ ಕ್ರಿಯೆ ಹೇಗೆ ನಡೆಯುತ್ತದೆ, ಕೊಂಡಗುಳಿಯ ಕೇಶಿರಾಜ ಪ್ರೌಢ ಶಾಲೆಯ ಪಲ್ಲವಿ ಹಿರೇಮಠ ಆಹಾರ ಸರಪಳಿ ಪ್ರಕ್ರಿಯೆ ಕುರಿತು, ಮನಗೂಳಿಯ ಬಿ.ಎಸ್.ಪಿ. ಪ್ರೌಢ ಶಾಲೆ  ವರ್ಷಾ ವಿದ್ಯುತ್ಕಾಂತೀಯ ಪ್ರೇರಣೆ ಹೇಗಾಗುತ್ತದೆ, ಐರಸಂಗ ಸರಕಾರಿ ಪ್ರೌಢ ಶಾಲೆಯ ರಕ್ಷಿತಾ ನಾವಿ ವಿದ್ಯುತ್ ಶಕ್ತಿ ಉತ್ಪಾದನೆ ಹೇಗಾಗುತ್ತದೆ, ಜಾಲವಾದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಭಾಗ್ಯಶ್ರೀ ಇಂಗಳಗಿ ಕಾರ್ಬನ್ ಸಂಯುಕ್ತದ ಬಗ್ಗೆ, ಜೈವಿಕ ವಿಘಟನೆ ಕ್ರಿಯೆ ಎಂದರೇನು, ಪಿ.ಎಚ್.ಮೌಲ್ಯ ಸೇರಿದಂತೆ ಹಲವು ಪ್ರಶ್ನೆಗಳಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಿಕಾ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಂಡರು.

ವಿಜಯಪುರದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ವಿಜ್ಞಾನ ವಿಷಯದ ಪೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕರಾಗಿ ಸತೀಶ ಕಾಳೆ, ಎಸ್.ಎಂ ಮಲಗೊಂಡ. ಎಸ್. ಎನ್. ರಜಪೂರ, ಆರ್. ಬಿ. ಹಡಪದ, ಗೀತಾ ಅಥಣಿ, ಕುಮಾರಿ ಪ್ರೀಯದರ್ಶಿನಿ ಜಾಧವ, ಸೂರ್ಯಕಾಂತ, ಬಸನಗೌಡ ಬಿ. ಪಾಟೀಲ. ಎಚ್. ಜಿ. ಬಿರಾದಾರ, ಪಿ. ಎಸ್. ಹಿರೇಮಠ, ಪಿ. ಎಂ. ಗೋಲಗೊಂಡ, ಪಿ. ಎಸ್. ಅಗ್ನಿ, ಸಂದೀಪ ದೇಶಪಾಂಡೆ ಒಳಗೊಂಡಂತೆ 11 ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪುರ, ವಿಜ್ಞಾನ ವಿಷಯ ಪರಿವೀಕ್ಷಕ ಎಸ್. ಎಸ್. ತಳ್ಳೊಳ್ಳಿ, ಇಂಗ್ಲೀಷ್ ವಿಷಯ ಪರಿವೀಕಕ್ಷ ಪಿ. ಕೆ. ಬಿರಾದಾರ, ಗಣಿತ ವಿಷಯ ಪರಿವೀಕ್ಷಕ ಸಿ. ಎಚ್. ಬಿರಾದಾರ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಶೈಲಾ ಹಳೆಮನಿ, ಉರ್ದು ಶಿಕ್ಷಣ ಸಂಯೋಜಕ ಝಡ್. ಎ. ಸಾತಾರೇಕರ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು ಎಂದು ಎನ್. ಎಚ್. ನಾಗೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌