ಬಹುಹಳ್ಳಿ ಯೋಜನೆಗಾಗಿ ಕಾಲುವೆಗಳ ಮೂಲಕ ಕುಡಿಯಲು ನೀರು ಬಿಡುಗಡೆ: ನಿಷೇಧಾಜ್ಞೆ ಜಾರಿ ಮಾಡಿ ಡಿಸಿ ಟಿ. ಭೂಬಾಲನ ಆದೇಶ

ವಿಜಯಪುರ: ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಬಿಜೆಎನ್‍ಎಲ್ ವತಿಯಿಂದ ಕಾಲುವೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಜನವಸತಿಗಳಿಗೆ ಕಾಲುವೆಗಳ ಮೂಲಕ ನೀರು ಪೂರೈಸಲಾಗುತ್ತಿದೆ.  ಜಲಸಂಗ್ರಹಾಗಾರ- ಕೆರೆಗಳಲ್ಲಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಿಸುಲು ಅನುಕೂಲವಾಗಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಜಲಸಂಗ್ರಹಗಾರಗಳು ಮತ್ತು ಕೆರೆಗಳ ವ್ಯಾಪ್ತಿಯ 100 ಅಡಿ ಪ್ರದೇಶದಲ್ಲಿ ಡಿ. 7 ರಿಂದ ನೇವರಿ ಜನವರಿ 1ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ  ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಲ ಸಂಗ್ರಹಗಾರ-ಕೆರೆಗಳ ವ್ಯಾಪ್ತಿಯ 100 ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು-ಗುಂಪಾಗಿ ಓಡಾಡುವುದು, ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿದಲಾಗಿದೆ. ಜಲಸಂಗ್ರಹಗಾರ-ಕೆರೆಗಳಿಂದ ಅಕ್ರಮ ಪಂಪಸೆಟ್, ಸೈಫನ್, ಜಲಚರದಿಂದ ಸೈಫನ್ ಮೂಲಕ ನೀರನ್ನು ಉಪಯೋಗಿಸಕೂಡದು. ಅಕ್ರಮ ಪಂಪಸೆಟ್ ಮೂಲಕ ನೀರನ್ನು ಬಳಸುತ್ತಿದ್ದಲ್ಲಿ ಅಂತಹ ಪಂಪಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿಗೊಳಿಸಲಾಗುವುದು. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

ಹೊಸ ಪೋಸ್ಟ್‌