ವಿಜಯಪುರದಿಂದ ಕ್ಷೇತ್ರ ಮುರುಗೋಡಕ್ಕೆ ಪಾದಯಾತ್ರೆ ಹೊರಟ ಭಕ್ತರು

ವಿಜಯಪುರ: ಶ್ರೀ ಕ್ಷೇತ್ರ ಕೆಂಗೇರಿ ಮುರಗೋಡದಲ್ಲಿ ಡಿಸೆಂಬರ್ 18 ರಂದು ಶ್ರೀ ಚಿದಂಬರೇಶ್ವರ ಮಹಾಸ್ವಾಮಿಗಳ 264 ನೇ ಅವತಾರ ಜಯಂತೋತ್ಸವ ಅಂಗವಾಗಿ ಶ್ರೀ ಚಿದಂಬರೇಶ್ವರ ಕಲ್ಯಾಣ ರಥೋತ್ಸವ ವೈಭವದಿಂದ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸುಕ್ಷೇತ್ರ ಮುರಗೋಡಕ್ಕೆ ವಿಜಯಪುರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಚಿದಂಬರೇಶ್ವರ ಪಾದಯಾತ್ರೆ ಮಂಡಳಿಯಿಂದ ವಿಜಯಪುರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಜೋಶಿ ಸಂಕನಾಳ, ಸೇವೆಯಲ್ಲಿ ಪಾದಯಾತ್ರೆ ಸೇವೆ ದೊಡ್ಡದು.  ಪಾದಯಾತ್ರೆಯಿಂದ ದೇಹ ದಂಡನೆಯಾಗುತತ್ದೆ.  ಇದು ಭಗವಂತನಿಗೆ ಪ್ರಿಯವಾಗಿದೆ.  ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

264 ನೇ ಅವತಾರ ಜಯಂತೋತ್ಸವ ಡಿಸೆಂಬರ್ 18 ರಂದು ಶ್ರೀ ಚಿದಂಬರೇಶ್ವರ ಕಲ್ಯಾಣ ರಥೋತ್ಸವ ವೈಭವದಿಂದ ಬೈಲಹೊಂಗಲ ತಾಲೂಕಿನ ಮುರುಗೋಡ (ಕೆಂಗೇರಿ)ಯಲ್ಲಿ ನಡೆಯುವುದರ ಪ್ರಯುಕ್ತ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚೀನ ಭಟಜೋಶಿ, ಸಹ ಸಂಚಲಕ ಸುದೀಂದ್ರ ಕುಲಕರ್ಣಿ, ವಿಜಯ ಜೋಶಿ, ನಾಗರಾಜ ಜೋಶಿ, ವಿಜಯ ಹುಕ್ಕೇರಿ, ಸಂದೀಪ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಕೃಷ್ಣಾಜಿ ಜೋಶಿ, ರಾಧಾ ಕುಲಕರ್ಣಿ, ಜೋತಿ ಕುಲಕರ್ಣಿ, ಕಲ್ಪನಾ ಜೋಶಿ, ಲಕ್ಷ್ಮಿ ಜೋಶಿ, ಸಂಕೇತ ಜೋಶಿ, ಲಕ್ಷ್ಮಿಕಾಂತ ಕುಲಕರ್ಣಿ, ಮಾಣಿಕ ಕುಲಕರ್ಣಿ, ಪುರಷೋತ್ತಮ ಕುಲಕರ್ಣಿ, ಚಿದಂಬರ ಜೋಶಿ(ರೋಳ್ಳಿ), ಗಿರಿಜಾ ಕುಲಕರ್ಣಿ, ಸವಿತಾ ಕುಲಕರ್ಣಿ ಮುಂತಾದವರು ಪಾಲ್ಗೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌