ವಿಜಯಪುರ: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ ದೇವರ ಚಟ್ಟಿ ಕಾತಿ೯ಕೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಾತಿ೯ಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ನಾನಾ ಬಣ್ಣದ ವಿದ್ಶುತ್ ದೀಪಾಲಂಕಾರ ಮಾಡಲಾಗಿತ್ತು. ತಳಿರು, ತೋರಣಗಳ ಶೃಂಗಾರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ನಡೆದ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು.
ರಾತ್ರಿ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ಖಾನಾಪೂರ, ಹಿರೇ ಅಲ್ಲಾಪೂರ, ಹೊವಿನಹಳ್ಳಿ, ಮಾಗಣಗೇರಾ, ಕಣಮೇಶ್ವರ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು. ಅಚ೯ಕರಾದ ನಿಂಗಣ್ಣಾಚಾಯ೯ ಜೋಶಿ, ಸಿದ್ದಯ್ಶ ಮಠ, ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ, ಕಮೀಟಿ ಅಧ್ಶಕ್ಷ ರೇವಣಸಿದ್ದಸಾಹು ಕೋರವಾರ, ಮಲ್ಲಿಕಾಜು೯ನ ಮನಗೂಳಿ, ದೇವಿಂದ್ರ ತೊನಶ್ಶಾಳ, ಚಂದ್ರಶೇಖರ ಮನಗೂಳಿ, ಎಚ್. ಕೆ. ಸೀತನೂರ, ಬಾಲಚಂದ್ರ ಕರಿಕಲ್ಲ, ಎಸ್. ವೈ. ಅಮರಗೋಳ, ನಡಗೇರಪ್ಪ ತಳವಾರ, ಮಲ್ಲಿಕಾಜು೯ನ ಕೊಟಾರಗಸ್ತಿ, ನಾನಾಗೌಡ ಪಾಟೀಲ, ಮಲ್ಲಪ್ಪ ಪೂಜಾರಿ, ನಾಗಣ್ಣ ಪಡೆಕನೂರ, ಕರೇಪ್ಪ ಅಮರಗೋಳ, ಶಿವಪ್ಪ ಕರಿಕಲ್ಲ, ಡಿ. ಬಿ. ಸೀತನೂರ, ವೀರಭದ್ರ ಬಡಿಗೇರ, ಪತ್ರಕತ೯ ಮಲ್ಲು ಕೆಂಭಾವಿ, ಲಾಲಸಾ ರಾಜಾಕೋಳ, ಚಂದ್ರಶೇಖರ ಕೆಂಭಾವಿ, ಮನೋಹರ ಗುಡಿಮನಿ, ಅಮೃ ದೊಡ್ಡಮನಿ ಸೇರಿ ಬಲಭೀಮೇಶ್ವರ ದೇವರ ಭಕ್ತರು ಉಪಸ್ಥಿತರಿದ್ದರು.