ವಿಜಯಪುರ: ಡಿಸೆಂಬರ್ 24 ರಂದು ನಡೆಯಲಿರುವ ವೃಕ್ಷತ್ಥಾನ್ ಹೆರಿಟೇಜ್ ರನ್-2023ಕ್ಕೆ ಮಹಿಳೆಯರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಸೀರೆಯುಟ್ಟು ಬರಿಗಾಲಿನಲ್ಲಿ ಓಡುವ ಓಟಗರ‍್ತಿ ಎಂದೇ ಹೆಸರಾಗಿರುವ ಪ್ರೀತಿ ಮನೀಶ್ 21 ಕಿ. ಮೀ. ಸ್ಪರ್ಧೆಯಲ್ಲಿ ಪಾಲ್ಗೋಳ್ಳುತ್ತಿರುವುದು ಇತರರಿಗೆ ಸ್ಪೂರ್ತಿ ನೀಡುತ್ತಿದೆ.
ಹುಬ್ಬಳ್ಳಿ ಮೂಲದ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಬ್ಯೂಸಿನೆಸ್ ಮ್ಯಾನೆಜಮೆಂಟ್ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕಳೆದ 10 ರ‍್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಜಾಗೃತಿ ಕುರಿತು ಎನ್ಜಿಓವೊಂದರಲ್ಲಿ ಕರ‍್ಯ ನರ‍್ವಹಿಸುತ್ತಿದ್ದಾರೆ. ನಾನಾ ಶಾಲೆ ಮತ್ತು ಕಾಲೇಜುಗಳು ಹಾಗೂ ಮಹಿಳಾ ಗುಂಪುಗಳಲ್ಲಿ ಪ್ರೌಢಾವಸ್ಥೆ, ಸುಸ್ಥಿರ ಮುಟ್ಟಿನ ಕುರಿತು ಹಾಗೂ ಋತುಚಕ್ರದ ಬಗ್ಗೆ ಯವತಿಯರು ಹಾಗೂ ಮಹಿಳೆಯಲ್ಲಿ ಅರಿವು ಮೂಡಿಸುವ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರತೀಯರು ಸೀರೆ ಉಡುವುದನ್ನು ಪ್ರೋತ್ಸಾಹಿಸಲು ಮತ್ತು ಬರಿಗಾಲಿನಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಲು ಅವರು ಅಪ್ಪಟ ಭಾರತೀಯ ಮಹಿಳೆಯಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಅಲ್ಲದೇ, ಈಗಾಗಲೇ ಹಲವಾರು ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ಬರಿಗಾಲ ಓಟಗರ‍್ತಿ ಎಂದೇ ಹೆಸರು ಮಾಡಿದ್ದಾರೆ.
ದೂರದ ಓಟಗಳಲ್ಲಿ ಏಕಾಂಗಿಯಾಗಿ ಓಡುವುದನ್ನು ಹೆಚ್ಚಾಗಿ ಇಷ್ಟಪಡುವ ಅವರು, ಓಟ ಮತ್ತು ವ್ಯಾಯಾಮದ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವ ಸಂಕಲ್ಪ ಮಾಡಿದ್ದಾರೆ. ಶಿಸ್ತುಬದ್ಧ ಜೀವನಕ್ಕೆ ಇತತರಿಗೆ ಮಾದರಿಯಾಗಿರುವ ಅವರು, ಪ್ರತಿದಿನ ನಸುಕಿನ ಜಾವ 3.30 ಗಂಟೆಗೆ ಏಳುತ್ತಾರೆ. ವಾರದಲ್ಲಿ ಐದು ದಿನಗಳನ್ನು ಓಟ ಮತ್ತು ವ್ಯಾಯಾಮಗಳಿಗಾಗಿ ಮೀಸಲಿಟ್ಟಿದ್ದಾರೆ. 10 ರ‍್ಷದ ಮಗುವಿನ ತಾಯಿಯಾಗಿರುವ ಪ್ರೀತಿ ಮನೀಶ ಅವರು ತಾಯಿ, ಹೆಂಡತಿ, ಸೊಸೆ ಮತ್ತು ಮಗಳ ರೂಪದಲ್ಲಿ ಎಲ್ಲ ಸಂಬಂಧಗಳನ್ನು ವೃತ್ತಿಪರವಾಗಿ ನಿಭಾಯಿಸುವ ದಿಟ್ಟ ಮಹಿಳೆಯಾಗಿದ್ದಾರೆ.
ಈಜು ಇಷ್ಟಪಡುವ ಅವರು, ಆಗಾಗ ಬೈಕ್ ನ್ನು ಓಡಿಸುವ ಹವ್ಯಾಸ ಹೊಂದಿದ್ದಾರೆ. ಮಾನ್ಯತೆ ಪಡೆದ ಯೋಗ ತರಬೇತಿತುದಾರರಾಗಿಯೂ ಅವರು ಕೆಲಸ ಮಾಡುತ್ತಿದ್ದು, ಕಳೆದ ಮೂರು ರ‍್ಷಗಳಿಂದ ವಿಪಾಸನಾ ಧ್ಯಾನವನ್ನು ಮಾಡುತ್ತಿದ್ದಾರೆ. ಈ ವಿವಾಸನಾ ಧ್ಯಾನ ಮತ್ತು ಸಂಗೀತ ಮನುಷ್ಯ ಯಾವುದೇ ಅಡೆತಡೆ ಇಲ್ಲದೇ ಜೀವನ ಸಾಗಿಸಲು ಇರುವ ಮೂರು ಅದ್ಭುತ ಅಂಶಗಳಾಗಿವೆ ಎಂಬುದು ಅವರ ಬಲವಾದ ನಂಬಿಕೆಯಾಗಿದೆ.
ಕರ‍್ಪೋರೇಟ್ ಶೈಲಿಯಿಂದ ಹೊರ ಬಂದಿರುವ ಅವರು, ಸ್ವಸ್ಥ ಆರೋಗ್ಯ ಹೊಂದಲು ಅಲಂಕಾರಿಕ ತಾಲೀಮು, ವಿದೇಶಿ ಶೈಲಿಯ ಬಟ್ಟೆಗಳನ್ನು ಹಾಕಿಕೊಳ್ಳುವ ಅಗತ್ಯವಿಲ್ಲ. ತಾಯಿಯಾಗಿದ್ದರೂ ಅಪ್ಪಟ ಭಾರತೀಯ ಶೈಲಿಯಲ್ಲಿ ಸೀರೆಯುಟ್ಟು, ಬರಿಗಾಲಿನಲ್ಲಿ ಓಡಬಹುದು. ಈ ಮೂಲಕ ಕುಟುಂಬ ನರ‍್ವಹಣೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬಹುದು ಎಂಬುದನ್ನು ತಮ್ಮ ದಿನನಿತ್ಯದ ಚಟುವಟಿಕೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರೀತಿ ಮನೀಶ ಅವರು ವಿಜಯಪುರ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಳಲು ಈಗಾಗಲೇ ಹೆಸರು ನೋಂದಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.