Vrukshothon: ವೃಕ್ಷಥಾನ್ ಹೆರಿಟೇಜ್ ರನ್- 2023: ರೂ. 10 ಲಕ್ಷ ಪ್ರಾಯೋಜಕತ್ವ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಕೋಟಿವೃಕ್ಷ ಅಭಿಯಾನ(Crore Tree Planting) ಅಂಗವಾಗಿ ಡಿಸೆಂಬರ್ 24(December 24) ರವಿವಾರ(Sunday) ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2023(Vrukshoton Heritage Run-2023) ಪ್ರೊತ್ಸಾಹಿಸಲು ವಿಜಯಪುರ ನಗರ ಶಾಸಕ(Vijayapura City MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal)ರವರು ರೂ. 10 ಲಕ್ಷ ಪ್ರಾಯೋಜಕತ್ವ(Rs. 10 Lakh Sponsorship) ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು, ಮರಗಳನ್ನಾಗಿ ಬೆಳೆಸಿ, ಅರಣ್ಯ ಪ್ರಮಾಣ ಹೆಚ್ಚಿಸುವುದು. ವಿಜಯಪುರ ನಗರದಲ್ಲಿನ ವಿವಿಧ ಐತಿಹಾಸಿಕ ಸ್ಮಾರಕಗಳ ಕುರಿತು ಜಾಗೃತಿ ಮೂಡಿಸಿ, ಹೆಚ್ಚಿನ ಪ್ರವಾಸಿಗರನ್ನು ಆರ‍್ಷಿಸಿ, ತನ್ಮೂಲಕ ನಗರದಲ್ಲಿ ರ‍್ಥಿಕ ಚಟುವಟಿಕೆಗಳು ಹೆಚ್ಚಿಸುವಂತೆ ಜಾಗೃತಿ ಮೂಡಿಸುವ ಹೆರಿಟೇಜ್ ರನ್ ಪ್ರೊತ್ಸಾಹಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತ ದಿಂದ ರೂ. 10 ಲಕ್ಷ ಚೆಕ್ ನ್ನು ಸಿದ್ಧಸಿರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಕೋಟಿವೃಕ್ಷ ಅಭಿಯಾನ ಸಂಚಾಲಕ ಪ್ರೊ. ಮುರುಗೇಶ ಪಟ್ಟಣಶೆಟ್ಟಿ ಅವರಿಗೆ ನೀಡಿದರು.

ವೃಕ್ಷತ್ಥಾನ್ ಹೆರಿಟೇಜ್ ರನ್- 2023ಗೆ ಸಿದ್ಧಸಿರಿ ಸೌಹಾರ್ಧದಿಂದ ರೂ. 10 ಲಕ್ಷ ಚೆಕ್ ನ್ನು ರಾಮನಗೌಡ ಪಾಟೀಲ ಯತ್ನಾಳ ಅವರು ಮುರುಗೇಶ ಪಟ್ಟಶೆಟ್ಟಿ ಅವರಿಗೆ ನೀಡಿದರು

 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ನುಡಿ ನಮನ, ಸ್ಮಾರಕಗಳ ರಕ್ಷಣೆ, ಮ್ಯಾರಥಾನ್ ಗಾಗಿ ನಡೆಯುವ  ವೃಕ್ಷೋತ್ಥಾನ ಅಭಿಯಾನ ಯಶಸ್ಸಿಗೆ ನಾವೆಲ್ಲ ಕೈಜೋಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಟಿವೃಕ್ಷ ಅಭಿಯಾನದ ಡಾ. ಮಹಾಂತೇಶ ಬಿರಾದಾರ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಅಮೀತ ಬಿರಾದಾರ, ಸೋಮು ಮಠ, ಸಿದ್ಧಸಿರಿ ನಿರ್ದೇಶಕರಾದ ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌