ವಿಜಯಪುರ: ಗುಮ್ಮಟ ನಗರಿಯಲ್ಲಿ ಡಿಸೆಂಬರ್ 24 ರಂದು ರವಿವಾರ ನಡೆಯಲಿರುವ ವೃಕ್ಷೊಥಾನ್ ಹೆರಿಟೇಜ್ ರನ್-2023ಕ್ಕೆ ಎರಡೇ ದಿನ ಬಾಕಿ ಉಳಿದಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಪ್ರಶಸ್ತಿ ಮೊತ್ತ, ಮಾರ್ಗ, ಪದಕಗಳನ್ನು ಅಂತಿಮಗೊಳಿಸಲಾಗಿದ್ದು, ಶನಿವಾರ ಬಿಬ್ ಮತ್ತು ಟಿ-ಶರ್ಟ್ ವಿತರಿಸಲಾಗುವುದು.
ಈ ಬಾರಿ ಒಟ್ಟು ರೂ. 10 ಲಕ್ಷ ಬಹುಮಾನ ನಿಗದಿ ಪಡಿಸಲಾಗಿದ್ದು, ನಾಲ್ಕು ಕೆಟೆಗರಿಯಲ್ಲಿ ಒಟ್ಟು ತಲಾ 38 ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್- 2023 ಕೋರ್ ಕಮಿಟಿ ಪದಕ, ರೂಟ್, ನೋಂದಣಿ ಸಮಿತಿಯ ರಘು ಸಾಲೋಟಗಿ, ಸಂಕೇತ ಬಗಲಿ, ಸೋಮಶೇಖರ ಸ್ವಾಮಿ, ವೀರೇಂದ್ರ ಗುಚ್ಚೆಟ್ಟಿ, ಡಾ. ರಾಜು ಯಲಗೊಂಡ ಹಾಗೂ ಸಂತೋಷ ಔರಸಂಗ ತಿಳಿಸಿದ್ದಾರೆ
ನಾನಾ ವಿಭಾಗಗಳಲ್ಲಿ ಪುರುಷ ಮತ್ತು ಮಹಿಳಾ ಓಟಗಾರರಿಗೆ ನಿಗದಿ ಪಡಿಸಲಾಗಿರುವ ಕೆಟಗರಿ, ವಿಭಾಗಗಳು ಮತ್ತು ನಿಗದಿ ಪಡಿಸಲಾಗಿರುವ ಬಹುಮಾದ ಮೊತ್ತ ಇಲ್ಲಿದೆ.
21 ಕಿ. ಮೀ. ಪುರುಷರು ಮತ್ತು ಮಹಿಳೆಯರ ವಯೋಮಾನ ವಿಭಾಗ ಮತ್ತು ಪ್ರಶಸ್ತಿ ಮೊತ್ತ
18 ರಿಂದ 34 ವರ್ಷ: ಪ್ರಥಮ ಬಹುಮಾನ ರೂ. 30 ಸಾವಿರ, ದ್ವಿತೀಯ ಬಹುಮಾನ ರೂ. 25 ಸಾವಿರ, ತೃತೀಯ ಬಹುಮಾನ ರೂ. 20 ಸಾವಿರ.
35 ರಿಂದ 44 ವರ್ಷ: ಪ್ರಥಮ ಬಹುಮಾನ ರೂ. 20 ಸಾವಿರ, ದ್ವಿತೀಯ ಬಹುಮಾನ ರೂ. 15 ಸಾವಿರ, ತೃತೀಯ ಬಹುಮಾನ ರೂ. 12 ಸಾವಿರ.
45 ರಿಂದ 59 ವರ್ಷ: ಪ್ರಥಮ ಬಹುಮಾನ ರೂ. 15 ಸಾವಿರ, ದ್ವಿತೀಯ ಬಹುಮಾನ ರೂ. 12 ಸಾವಿರ, ತೃತೀಯ ಬಹುಮಾನ ರೂ. 10 ಸಾವಿರ.
60 ವರ್ಷ ಮೇಲ್ಪಟ್ಟು: ಪ್ರಥಮ ಬಹುಮಾನ ರೂ. 10 ಸಾವಿರ, ದ್ವಿತೀಯ ಬಹುಮಾನ ರೂ. 8 ಸಾವಿರ ತೃತೀಯ ಬಹುಮಾನ ರೂ. 6 ಸಾವಿರ.
10 ಕಿ. ಮೀ. ಪುರುಷರು ಮತ್ತು ಮಹಿಳೆಯರ ವಯೋಮಾನ ವಿಭಾಗ ಮತ್ತು ಪ್ರಶಸ್ತಿ ಮೊತ್ತ
18 ರಿಂದ 34 ವರ್ಷ: ಪ್ರಥಮ ಬಹುಮಾನ ರೂ. 20 ಸಾವಿರ, ದ್ವಿತೀಯ ಬಹುಮಾನ ರೂ. 15 ಸಾವಿರ, ತೃತೀಯ ಬಹುಮಾನ ರೂ. 12 ಸಾವಿರ.
35 ರಿಂದ 44 ವರ್ಷ: ಪ್ರಥಮ ಬಹುಮಾನ ರೂ. 18 ಸಾವಿರ, ದ್ವಿತೀಯ ಬಹುಮಾನ ರೂ. 13 ಸಾವಿರ, ತೃತೀಯ ಬಹುಮಾನ ರೂ. 10 ಸಾವಿರ.
45 ರಿಂದ 59 ವರ್ಷ: ಪ್ರಥಮ ಬಹುಮಾನ ರೂ. 15 ಸಾವಿರ, ದ್ವಿತೀಯ ಬಹುಮಾನ ರೂ. 12 ಸಾವಿರ, ತೃತೀಯ ಬಹುಮಾನ ರೂ. 8 ಸಾವಿರ.
60 ವರ್ಷ ಮೇಲ್ಪಟ್ಟು: ಪ್ರಥಮ ಬಹುಮಾನ ರೂ. 10 ಸಾವಿರ, ದ್ವಿತೀಯ ಬಹುಮಾನ ರೂ. 8 ಸಾವಿರ ತೃತೀಯ ಬಹುಮಾನ ರೂ. 5 ಸಾವಿರ.
5 ಕಿ. ಮೀ. ಪುರುಷರು ಮತ್ತು ಮಹಿಳೆಯರ ವಯೋಮಾನ ವಿಭಾಗ ಮತ್ತು ಪ್ರಶಸ್ತಿ ಮೊತ್ತ
12 ರಿಂದ 17 ವರ್ಷ: ಪ್ರಥಮ ಬಹುಮಾನ ರೂ. 10 ಸಾವಿರ, ದ್ವಿತೀಯ ಬಹುಮಾನ ರೂ. 8 ಸಾವಿರ, ತೃತೀಯ ಬಹುಮಾನ ರೂ. 5 ಸಾವಿರ.
18 ರಿಂದ 34 ವರ್ಷ: ಪ್ರಥಮ ಬಹುಮಾನ ರೂ. 8 ಸಾವಿರ, ದ್ವಿತೀಯ ಬಹುಮಾನ ರೂ. 5 ಸಾವಿರ, ತೃತೀಯ ಬಹುಮಾನ ರೂ. 3 ಸಾವಿರ.
35 ರಿಂದ 44 ವರ್ಷ: ಪ್ರಥಮ ಬಹುಮಾನ ರೂ. 8 ಸಾವಿರ, ದ್ವಿತೀಯ ಬಹುಮಾನ ರೂ. 5 ಸಾವಿರ, ತೃತೀಯ ಬಹುಮಾನ ರೂ. 3 ಸಾವಿರ.
45 ರಿಂದ 59 ವರ್ಷ: ಪ್ರಥಮ ಬಹುಮಾನ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ. 3500, ತೃತೀಯ ಬಹುಮಾನ ರೂ. 2500.
60 ವರ್ಷ ಮೇಲ್ಪಟ್ಟು: ಪ್ರಥಮ ಬಹುಮಾನ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ. 3500 ತೃತೀಯ ಬಹುಮಾನ ರೂ. 2500.
3.5 ಕಿ. ಮೀ. ಪುರುಷರು ಮತ್ತು ಮಹಿಳೆಯರ ವಯೋಮಾನ ವಿಭಾಗ ಮತ್ತು ಪ್ರಶಸ್ತಿ ಮೊತ್ತ
12 ರಿಂದ 16 ವರ್ಷ: ಪ್ರಥಮ ಬಹುಮಾನ ರೂ. 8 ಸಾವಿರ, ದ್ವಿತೀಯ ಬಹುಮಾನ ರೂ. 6 ಸಾವಿರ, ತೃತೀಯ ಬಹುಮಾನ ರೂ. 4 ಸಾವಿರ.
17 ರಿಂದ 25 ವರ್ಷ: ಪ್ರಥಮ ಬಹುಮಾನ ರೂ. 6 ಸಾವಿರ, ದ್ವಿತೀಯ ಬಹುಮಾನ ರೂ. 4 ಸಾವಿರ, ತೃತೀಯ ಬಹುಮಾನ ರೂ. 3 ಸಾವಿರ.
26 ರಿಂದ 35 ವರ್ಷ: ಪ್ರಥಮ ಬಹುಮಾನ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ. 3 ಸಾವಿರ, ತೃತೀಯ ಬಹುಮಾನ ರೂ. 2 ಸಾವಿರ.
36 ರಿಂದ 45 ವರ್ಷ: ಪ್ರಥಮ ಬಹುಮಾನ ರೂ. 3 ಸಾವಿರ, ದ್ವಿತೀಯ ಬಹುಮಾನ ರೂ. 2000, ತೃತೀಯ ಬಹುಮಾನ ರೂ. 1000.
46 ವರ್ಷ ಮೇಲ್ಪಟ್ಟು: ಪ್ರಥಮ ಬಹುಮಾನ ರೂ. 3 ಸಾವಿರ, ದ್ವಿತೀಯ ಬಹುಮಾನ ರೂ. 2 ಸಾವಿರ, ತೃತೀಯ ಬಹುಮಾನ ರೂ. 1 ಸಾವಿರ.
800 ಮೀ. ಹ್ಯಾಪಿ ರನ್(12 ವರ್ಷದೊಳಗಿನ ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ).
ಟಿ-ಶರ್ಟ್ ಮತ್ತು ಬಿಬ್ ವಿತರಣೆ ಮಾಹಿತಿ
ವಿಜಯಪುರ ಹೆರಿಟೇಜ್ ಮ್ಯಾರಾಥಾನ್ ರನ್- 2023ರಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿರುವ ಸುಮಾರು 8200ಕ್ಕೂ ಹೆಚ್ಚು ಒಟಗಾರರಿಗೆ ಬಿಬ್ಸ್ ಅಂದರೆ ಓಟಗಾರರ ನೋಂದಣಿ ಸಂಖ್ಯೆ ಹೊಂದಿರುವ ನಂಬರ್ ಪಟ್ಟಿಯನ್ನು ನೀಡಲಾಗುವುದು. ಡಿಸೆಂಬರ್ 23 ರಂದು ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಬ್ಸ್ ಮತ್ತು ಟಿ- ಶರ್ಟ್ಸ್ ನೀಡಲಾಗುವುದು. ನಂತರ ಬಂದವರಿಗೆ ಅವಕಾಶ ಇರುವುದಿಲ್ಲ ಎಂದು ಬಿಬ್ಸ್ ಸಮಿತಿಯ ಅಪ್ಪು ಭೈರಗೊಂಡ ತಿಳಿಸಿದ್ದಾರೆ.
ಒಟ್ಟಾರೆ ಈ ಬಾರಿಯೂ ಕೂಡ ವೃಕ್ಷೊಥಾನ್ ಹೆರಿಟೇಜ್ ರನ್- 2023 ಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಒಡು ವಿಜಯಪುರ ಓಡು(ರನ್ ವಿಜಯಪುರ ರನ್) ಬ್ರ್ಯಾಂಡ್ ಕ್ರಿಯೇಟ್ ಮಾಡುವ ಗುರಿಯನ್ನು ವಕ್ಷೊಥಾನ್ ಹೆರಿಟೇಜ್ ರನ್-2023 ಕೋರ್ ಕಮಿಟಿ ಮತ್ತು ಇತರ ಉಪಸಮಿತಿಗಳ ಸರ್ವ ಸದಸ್ಯರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಅಲ್ಲದೇ, ಈ ಮೂಲಕ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗೌರವಾರ್ಥ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಅದರದೇ ಆದ ಮೆರಗು ನೀಡಲಾಗುತ್ತಿದೆ.