ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಫೊನ್ ಇನ್ ಕಾರ್ಯಕ್ರಮ: ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡ ವಿದ್ಯಾರ್ಥಿಗಳು

ವಿಜಯಪುರ: ಇಂಗ್ಲೀಷ್ ವಿಷಯದ ವ್ಯಾಕರಣ ಮತ್ತು ಪತ್ರಲೇಖನ ಪ್ಯಾರಾಗ್ರಾಫ್, ಪ್ರಬಂಧ ಬರವಣಿಗೆ ಹಾಗೂ ವಿಷಯ ಕರಗತ ಮಾಡಿಕೊಳ್ಳುವುದೂ ಸೇರಿದಂತೆ  ತಮ್ಮ ಶೈಕ್ಷಣಿಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಪಡೆದುಕೊಂಡರು. ಶಿಕ್ಷಕರು ವಿಷಯ ಸಮಸ್ಯೆ ಸೂಚಿಸುವುದರ ಜೊತೆಗೆ ಆತ್ಮವಿಶ್ವಾಸದ ಪಾಠ ಮಾಡಲಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್. ಎಚ್. ನಾಗೂರ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಸಂಜೆ 6 ರಿಂದ ರಾತ್ರಿ 8.30ರವರೆಗೆ ಇಂಗ್ಲೀಷ್ ವಿಷಯದ ಕುರಿತಾಗಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 2 ಗಂಟೆಗಳ ಅವಧಿಯಲ್ಲಿ 325 ವಿದ್ಯಾರ್ಥಿಗಳು ಕೇಳಿದ 458 ಪ್ರಶ್ನೆಗಳಿಗೆ ವಿಷಯ ಶಿಕ್ಷಕರು ಪರಿಹಾರ ಸೂಚಿಸಿದರು.

ವಿಜಯಪುರದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಫೋನ್ ಇನ್ ಕಾರ್ಯಕ್ರಮ ನಡೆಯಿತು

ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲ ಹೆಚ್ಚಾಗುತ್ತಿದೆ. ಕೆಲ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಬೋಧನೆಯಿಂದ ಮತ್ತಷ್ಟು ವಿಷಯ ಕರಗತವಾಗಿ ಅವರ ಕಲಿಕಾ ಮಟ್ಟ ಹೆಚ್ಚಾಗುತ್ತದೆ. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯಶಸ್ವಿ ಕಾರ್ಯಕ್ರಮವೆನಿಸಿದೆ. ಈಗಾಗಲೇ ವಿಜ್ಞಾನ ವಿಷಯದಲ್ಲಿ 438, ಗಣಿತದಲ್ಲಿ 425 ವಿದ್ಯಾರ್ಥಿಗಳು ಫೋನ್ ಇನ್ ಕಾರ್ಯಕ್ರಮದ ಮೂಲಕ ತಮ್ಮ ಸಮಸ್ಯಗೆಳಿಗೆ ಪರಿಹಾರ ಕಂಡುಕೊAಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಿ. ಕುಂಬಾರ್, ಆರ್. ವಿ. ಕುಲಕರ್ಣಿ ಶ್ರೀಮತಿ ಆರ್.ಎಸ್.ಕೊರೆಗೊಳ್, ಎಸ್.ಎ ಕಮತಗಿ, ಪಿ. ಬಿ. ಕುಲಕರ್ಣಿ, ವಿ. ಎಸ್. ಬಶೆಟ್ಟಿ, ಪಿ. ಎಮ್ ಪಾಟೀಲ್ ಹಾಗೂ ಎಸ್.ವೈ ನಾಯಕ ಅವರೂ ಸೇರಿದಂತೆ 9 ಜನ ಶಿಕ್ಷಕರು ಇಂಗ್ಲೀಷ್ ವಿಷಯದ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಇಂಗ್ಲೀಷ್ ವಿಷಯದ ಫೋನ್ ಇನ್ ಕಾರ್ಯಕ್ರಮದ ಸಂಯೋಜಕರೂ ಆದ ಬಸವನ ಬಾಗೇವಾಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ,ಇಂಗ್ಲೀಷ್ ವಿಷಯ ಪರಿವೀಕಕ್ಷರಾದ ಪಿ.ಕೆ.ರಾದಾರ, ವಿಜ್ಞಾನ ವಿಷಯ ಪರಿವೀಕ್ಷಕರಾದ ಎಸ್.ಎಸ್. ತಳ್ಳಳ್ಳಿ, ಉರ್ದು ಶಿಕ್ಷಣ ಸಂಯೋಜಕರಾದ ಝಡ್. ಎ. ಸತಾರೇಕರ, ಬಸವರಾಜ ನಾಗೂರ ಸೇರಿದಂತೆ ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌