ವೃಕ್ಷತ್ಥಾನ ಹೆರಿಟೇಜ್ ರನ್-2023: ನಾನಾ ವಿಭಾಗಗಳಲ್ಲಿ 60ಕ್ಕೂ ಹೆಚ್ಚು ವಿಜೇತರಿಗೆ ಪ್ರಶಸ್ತಿ ಪ್ರಧಾನ

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ಹೆರಿಟೇಜ್ ರನ್-2023 ಅಂಗವಾಗಿ ನಡೆದ ನಾನಾ ವಿಭಾಗಗಳ ಓಟಗಳಲ್ಲಿ ಖ್ಯಾತನಾಮರು ಪಾಲ್ಗೊಂಡು ಗಮನ ಸೆಳೆದರು.  ಈ ಸಂದರ್ಭದಲ್ಲಿ ನಾನಾ ವಿಭಾಗಗಳಲ್ಲಿ ಗೆಲುವು ಸಾಧಿಸಿದ ಸುಮಾರು 60ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. 

ಈ ಸಂದರ್ಭದಲ್ಲಿ   ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆÉ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ, ಎನ್ ಟಿಪಿಸಿಯ ಮುಖ್ಯಸ್ಥರಾದ ವಿ.ಕೆ ಪಾಂಡೆ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೆಳಗಾವಿ ವೃತ್ತ, ಮಂಜುನಾಥ  ಆರ್.ಚವ್ಹಾಣ, ಕೆಎಸ್‍ಡಿಎಲ್ ಎಂ.ಡಿ. ಪ್ರಶಾಂತ,   ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಕೆ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯಪುರದಲ್ಲಿ ನಡೆದ ವೃಕ್ಷೊಥಾನ್ ಹೆರಿಟೇಜ್ ರನ್- 2023ರಲ್ಲಿ ಸಚಿವ ಎಂ. ಬಿ. ಪಾಟೀಲ 5 ಕಿ. ಮೀ. ಓಟದಲ್ಲಿ ಪಾಲ್ಗೊಂಡರು

ವೃಕ್ಷಥಾನ ಹೆರಿಟೇಜ್ ರನ್ -2023ಹಾಫ್ ಮ್ಯಾರಾಥಾನ ಓಟದಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರ ವಿವರ ಇಂತಿದೆ. 

21 ಕಿ.ಮೀ ಓಟ

18 ರಿಂದ 34 ವಯಸ್ಸಿನ ಪುರುಷರ ವಿಭಾಗದಲ್ಲಿ  ವಿವೇಕ ನಾರಾಯಣ ಮೋರೆ (ಪ್ರಥಮ), ಬಬನ ಸಿಂಧೆ (ದ್ವೀತಿಯ) ಹಾಗೂ ವಿಶಾಲ (ತೃತೀಯ) ಸ್ಥಾನದಲ್ಲಿ ಪಡೆದಿದ್ದಾರೆ. 18 ರಿಂದ 34 ವಯಸ್ಸಿನ ಮಹಿಳೆಯರ ವಿಭಾಗದಲ್ಲಿ  ಸಾಕ್ಷಿ ಜಡ್ಯಾಳ (ಪ್ರಥಮ),  ಆರಾಧನಾ ಕುಮಾರಿ (ದ್ವೀತಿಯ) ಹಾಗೂ ರೋಹಿಣಿ ಲಕ್ಷ್ಮಣ ಪಾಟೀಲ (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಪುರುಷರ ವಿಭಾಗದಲ್ಲಿ  ನಂದರಾಜ್ ಸಿಂಗ್ (ಪ್ರಥಮ), ಈರಪ್ಪ ಹಲಗನ್ಣವರ (ದ್ವೀತಿಯ) ಹಾಗೂ ಕಿಶನಲಾಲ್ ಕೋಶಾರಿಯಾ (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಮಹಿಳೆಯರ  ವಿಭಾಗದಲ್ಲಿ  ಟಿಂಟಿಂ ಶರ್ಮಾ (ಪ್ರಥಮ), ಬಿಜಾಯ್ ಬರಮನ್ (ದ್ವೀತಿಯ) ಹಾಗೂ ದೀಪಿಕಾ ಪಿ. (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಪುರುಷರ ವಿಭಾಗದಲ್ಲಿ  ವೆಂಕಟೇಶ ಅಡಿಗ (ಪ್ರಥಮ), ಜೋಶೆಫ್ ಇ.ಜೆ.(ದ್ವೀತಿಯ) ಹಾಗೂ ಮುಕೇಶ ಮಿಶ್ರಾ (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಮಹಿಳೆಯರ ವಿಭಾಗದಲ್ಲಿ  ಪಲ್ಲವಿ ಮೂಗ (ಪ್ರಥಮ), ಅನಿತಾ ಪಾಟೀಲ(ದ್ವೀತಿಯ) ಹಾಗೂ ಬೀನಾ ಫರ್ನಾಂಡೀಸ್ (ತೃತೀಯ) ಸ್ಥಾನ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ  ಕೇಶವ ಮೋಟೆ (ಪ್ರಥಮ), ರಾಮಸಾಮಿ (ದ್ವೀತಿಯ) ಹಾಗೂ ಶೆಲ್ವರಾಜ್ ಚಿಕ್ಕಯ್ಯ (ತೃತೀಯ) ಸ್ಥಾನದಲ್ಲಿ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ  ಸುಲತಾ ಕಾಮತ್ (ಪ್ರಥಮ), ಸ್ಥಾನದಲ್ಲಿ ಪಡೆದಿದ್ದಾರೆ.

 

10 ಕಿ.ಮೀ ಓಟ

18 ರಿಂದ 34 ವಯಸ್ಸಿನ ಪುರುಷರ ವಿಭಾಗದಲ್ಲಿ  ಪ್ರಧಾನ ಕಿರೋಳಕರ (ಪ್ರಥಮ), ಯುವರಾಜ್ ಮಾರುತಿ ವಾಕ್ಸೆ (ದ್ವೀತಿಯ) ಹಾಗೂ ಅಜಿತ ಲಾಬಟೆ (ತೃತೀಯ) ಸ್ಥಾನ ಪಡೆದಿದ್ದಾರೆ. 18 ರಿಂದ 34 ವಯಸ್ಸಿನ ಮಹಿಳೆ ವಿಭಾಗದಲ್ಲಿ  ಪ್ರೀಣು ಯಾದವ (ಪ್ರಥಮ), ಆಕಾಂಕ್ಷಾ ಸೇಲರ್ (ದ್ವೀತಿಯ) ಹಾಗೂ ನಿಕಿತಾ ನಾಗಪೂರೆ (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಪುರುಷರ ವಿಭಾಗದಲ್ಲಿ  ನಂಜುಂಡಪ್ಪ ಎಂ. (ಪ್ರಥಮ), ಮಲ್ಲಿಕಾರ್ಜುನ ಪರಡೆ (ದ್ವೀತಿಯ) ಹಾಗೂ ರಾಜು ಹಿರಗಣ್ಣವರ (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಮಹಿಳೆಯರ  ವಿಭಾಗದಲ್ಲಿ  ಮರಿಯಾ ಲಾಬಿನಾ ರೋಡ್ರಿಗ್ಸ್ (ಪ್ರಥಮ), ನೇತ್ರ ಸುತಾರ (ದ್ವೀತಿಯ) ಹಾಗೂ ಶುಭಾಂಗಿ ಪಾಟೀಲ (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಪುರುಷರ ವಿಭಾಗದಲ್ಲಿ  ರಂಜೀತ ಕಣಬರಕರ (ಪ್ರಥಮ),ಶಿವಲಿಂಗಪ್ಪ ಗುತ್ತಗಿ (ದ್ವೀತಿಯ) ಹಾಗೂ ಅರವಿಂದ ನಾಲವಡೆ (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಮಹಿಳೆಯರ ವಿಭಾಗದಲ್ಲಿ ನೀರಾ ಕಟ್ವಾಲ್  (ಪ್ರಥಮ), ವಿದ್ಯಾ ಬಿ.ಎಚ್. (ದ್ವೀತಿಯ) ಹಾಗೂ  ಜ್ಯೋತಿ ಪೂರ್ವಾ ಕಾಣಿಕರ (ತೃತೀಯ) ಸ್ಥಾನ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ  ಪಾಂಡುರಂಗ ಚೌಗಲೆ (ಪ್ರಥಮ), ನಾರಾಯಣ (ದ್ವೀತಿಯ) ಹಾಗೂ ಅಶೋಕ ಅಮಾನೆ (ತೃತೀಯ) ಸ್ಥಾನದಲ್ಲಿ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ  ಪಾರ್ವತಿ ಬಿ.ಸಿ. (ಪ್ರಥಮ), ಸ್ಥಾನದಲ್ಲಿ ಪಡೆದಿದ್ದಾರೆ.

5 ಕಿ.ಮೀ ಓಟ

12ರಿಂದ 17 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ  ಶಿವಾನಂದ ಚಿಗರಿ (ಪ್ರಥಮ), ಅಭಿನಂದ ಸೂರ್ವವಂಶಿ (ದ್ವೀತಿಯ) ಹಾಗೂ ಪ್ರಥಮಗೌಡ (ತೃತೀಯ) ಸ್ಥಾನ ಪಡೆದಿದ್ದಾರೆ. 5 ಕಿ.ಮೀ ಓಟದ  12ರಿಂದ 17 ವರ್ಷ ವಯಸ್ಸಿನ ಬಾಲಕಿಯರ  ವಿಭಾಗದಲ್ಲಿ  ಕ್ರಾಂತಿ ವೇತಾಳ (ಪ್ರಥಮ), ಆಕಾಶ ಹಂಜಿ (ದ್ವೀತಿಯ) ಹಾಗೂ ಪ್ರೇರಣಾ ಶ್ರವಣ (ತೃತೀಯ) ಸ್ಥಾನ ಪಡೆದಿದ್ದಾರೆ. 18 ರಿಂದ 34 ವಯಸ್ಸಿನ ಪುರುಷರ ವಿಭಾಗದಲ್ಲಿ  ಚನ್ನಕೇಶವ ಜಿ.ಎಲ್. (ಪ್ರಥಮ), ದಿನಕರ ಹಕೆ (ದ್ವೀತಿಯ) ಹಾಗೂ ಸಂಕೇತ ಸುರೇಶ ಪಾಟೀಲ (ತೃತೀಯ) ಸ್ಥಾನ ಪಡೆದಿದ್ದಾರೆ. 18 ರಿಂದ 34 ವಯಸ್ಸಿನ ಮಹಿಳೆ ವಿಭಾಗದಲ್ಲಿ  ಡಾ.ಸ್ಮಿತಾ (ಪ್ರಥಮ), ಸುಷ್ಮಿತಾ ಗೊಲಗೇರಿ (ದ್ವೀತಿಯ) ಹಾಗೂ ಡಾ.ಲಿಖಿತಾ ಎಂ.ಜೆ. (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಪುರುಷರ ವಿಭಾಗದಲ್ಲಿ  ಪರಶುರಾಮ ಕುಣಬಿ (ಪ್ರಥಮ), ರಾಜೇಶ ಗುಂಜಾಳ್ (ದ್ವೀತಿಯ) ಹಾಗೂ ಪ್ರಶಾಂತ ಅಲ್ದಾರ (ತೃತೀಯ) ಸ್ಥಾನ ಪಡೆದಿದ್ದಾರೆ. 35 ರಿಂದ 44 ವಯಸ್ಸಿನ ಮಹಿಳೆಯರ  ವಿಭಾಗದಲ್ಲಿ  ಅನಿತಾ ಹಿಪ್ಪರಗಿ (ಪ್ರಥಮ),  ಡಾ.ಸಾಯಿ ಚುಳಕಿ (ದ್ವೀತಿಯ) ಹಾಗೂ ಸುಷ್ಮಾ (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಪುರುಷರ ವಿಭಾಗದಲ್ಲಿ  ರಾಜನ್ ಎಸ್. (ಪ್ರಥಮ) ಮೇಧಪ್ಪ ಅಮಾಯಿ (ದ್ವೀತಿಯ) ಹಾಗೂ ರಮೇಶ ಕೆ.ಆರ್. (ತೃತೀಯ) ಸ್ಥಾನ ಪಡೆದಿದ್ದಾರೆ. 45 ರಿಂದ 59 ವಯಸ್ಸಿನ ಮಹಿಳೆಯರ ವಿಭಾಗದಲ್ಲಿ ಸವಿತಾ ಶಾಸ್ತ್ರೀ  (ಪ್ರಥಮ), ಶೈಲಜಾ ಪಾಟೀಲ (ದ್ವೀತಿಯ) ಹಾಗೂ  ಜಯಲಕ್ಷ್ಮೀ ಸಲಗರೆ (ತೃತೀಯ) ಸ್ಥಾನ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ  ರಂಗನ್ ಕೆ. (ಪ್ರಥಮ), ಎಸ್.ಬಿ.ಬೆಲ್ಲದ (ದ್ವೀತಿಯ) ಹಾಗೂ ರವೀಂದ್ರ ಬಿಜ್ಜರಗಿ (ತೃತೀಯ) ಸ್ಥಾನದಲ್ಲಿ ಪಡೆದಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ  ಗಂಗವ್ವ ಬೆಳಗಾವಿ (ಪ್ರಥಮ), ಸ್ಥಾನದಲ್ಲಿ ಪಡೆದಿದ್ದಾರೆ.

Leave a Reply

ಹೊಸ ಪೋಸ್ಟ್‌