ಭೀಮಾ ತೀರದ ಚಡಚಣ ಪ. ಪಂ. ಚುನಾವಣೆ- ಶೇ. 73.93 ಮತದಾನ- ಡಿ. 30 ರಂದು ಶನಿವಾರ ಬೆಳಿಗ್ಗೆ 8.30ರೊಳಗೆ ಎಲ್ಲ ಫಲಿತಾಂಶ ಪ್ರಕಟ ನಿರೀಕ್ಷೆ
ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಶೇ. 73.93 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದು, ಶಾಂತಿಯುತ ಮತದಾನ ನಡೆದಿದೆ. ಚಡಚಣ ಪಟ್ಟಣ ಪಂಚಾಯಿಯ 16 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದು, 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 16080 ಮತದಾರಲ್ಲಿ 11888 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ ಒಟ್ಟು 8062 ಪುರುಷರಲ್ಲಿ 6020 ಮತ್ತು 8018 ಮಹಿಳೆಯರಲ್ಲಿ 5868 ಮತದಾರರು ತಮ್ಮ ಹಕ್ಕು […]
ಇಂಡಿ ನೂತನ ಜಿಲ್ಲೆಯಾಗಲು ಕಾಲ ಇನ್ನೂ ಪಕ್ವವಾಗಿಲ್ಲ- ಡಿ. 29ರ ಸಭೆ ರದ್ದು ಪಡಿಸಬೇಕು- ಮಾಜಿ ಎಂಎಲ್ಸಿ ಅರುಣ ಶಹಾಪುರ
ವಿಜಯಪುರ: ಇಂಡಿ ನೂತನ ಜಿಲ್ಲೆಯಾಗಲು ಕಾಲ ಇನ್ನೂ ಪಕ್ವವಾಗಿಲ್ಲ. ಹೀಗಾಗಿ ಡಿಸೆಂಬರ್ 29 ರಂದು ಈ ಕುರಿತು ಕರೆಯಲಾದ ಸಭೆಯನ್ನು ರದ್ದು ಪಡಿಸಬೇಕು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ನೂತನ ಜಿಲ್ಲೆ ಮಾಡುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸಿಂದಗಿ ತಹಸೀಲ್ದಾರರು ಡಿಸೆಂಬರ್ 29 ರಂದು ಸಭೆ ಕರೆದಿದ್ದಾರೆ. ಇದು ಸರಿಯಲ್ಲ. ಸರಕಾರ ವಿಜಯಪುರ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಹೊಂದಿದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು […]
ಭ್ರಷ್ಚಾಚಾರ ಆರೋಪ- ಶಾಸಕರ ವಿಚಾರಣೆ ನಡೆಸಬೇಕು- ಬಿಜೆಪಿ ನಾಯಕರ ಮೌನ, ಸಮ್ಮತಿ ಲಕ್ಷಣಂ ಎಂಬಂತಿದೆ- ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಬಿಜೆಪಿ ಸರಕಾರದ ಅವಧಿಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ರೂ. 40 ಸಾವಿರ ಕೋ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಿಚಾರಣೆ ನಡೆಸಿ ಮತ್ತಷ್ಟು ಸತ್ಯಾಂಶ ಹೊರಬರಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರ ಹೇಳಿಕೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಯತ್ನಾಳ ಅವರನ್ನು ವಿಚಾರಣೆ ನಡೆಸಿದರೆ ಮತ್ತಷ್ಟು ಸತ್ಯಾಂಶ ಹೊರಬರಲಿದೆ. ಹೀಗಾಗಿ […]