ಭೀಮಾ ತೀರದ ಚಡಚಣ ಪ. ಪಂ. ಚುನಾವಣೆ- ಶೇ. 73.93 ಮತದಾನ- ಡಿ. 30 ರಂದು ಶನಿವಾರ ಬೆಳಿಗ್ಗೆ 8.30ರೊಳಗೆ ಎಲ್ಲ ಫಲಿತಾಂಶ ಪ್ರಕಟ ನಿರೀಕ್ಷೆ

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಶೇ. 73.93 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದು, ಶಾಂತಿಯುತ ಮತದಾನ ನಡೆದಿದೆ.

ಚಡಚಣ ಪಟ್ಟಣ ಪಂಚಾಯಿಯ 16 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದು, 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ಚಡಚಣ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡರು

ಒಟ್ಟು 16080 ಮತದಾರಲ್ಲಿ 11888 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಇವರಲ್ಲಿ ಒಟ್ಟು 8062 ಪುರುಷರಲ್ಲಿ 6020 ಮತ್ತು 8018 ಮಹಿಳೆಯರಲ್ಲಿ 5868 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

 

ವಾರ್ಡ್ ವಾರು ಮತದಾನದ ಮಾಹಿತಿ

ವಾ. ಸಂ.  ಮತದಾನ ಪ್ರಮಾಣ

  1. ಶೇ. 79.92
  2. ಶೇ. 67.16
  3. ಶೇ. 8320
  4. ಶೇ. 73.90
  5. ಶೇ. 71.58
  6. ಶೇ. 69.59
  7. ಶೇ. 66.25
  8. ಶೇ. 70.79
  9. ಶೇ. 81.47
  10. ಶೇ. 74.94
  11. ಶೇ. 75.80
  12. ಶೇ. 67.65
  13. ಶೇ. 65.87
  14. 78.96
  15. 75.10
  16. 89.59

ಚುನಾವಣೆ ಬಳಿಕ ಮತದಾನಕ್ಕೆ ನಿಯೋಜಿತ ಅಧಿಕಾರಿಗಳು ವಿದ್ಯುನ್ಮಾಮ ಮತಯಂತ್ರಗಳನ್ನು ಸಂಗ್ರಹಿಸಿ ಪಟ್ಟಣದ ಹೊರ ಭಾಗದಲ್ಲಿರುವ ಎಂ. ವಿ. ಎಸ್.  ಶಿಕ್ಷಣ ಸಂಸ್ಥೆಯ ಭದ್ರತಾ ಕೊಠಡಿಗಳಿಗೆ ಸಾಗಿಸಿ ಸುರಕ್ಷಿತವಾಗಿ ಇರಿಸಿದರು.

ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ

ಡಿಸೆಂಬರ್ 30 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದ, ಬೆಳಿಗ್ಗೆ 8.30ರ ವೇಳೆಗೆ ಎಲ್ಲ ವಾರ್ಡುಗಳ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

Leave a Reply

ಹೊಸ ಪೋಸ್ಟ್‌