ಗ್ರಾಂ. ಪಂ. ಸದಸ್ಯರ ಹಿತರಕ್ಷಣೆಯೇ ಸದಾ ಸಿದ್ಧನಿದ್ದೇನೆ- ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಪಾಡಲು ಸದಾ ಸಿದ್ಧನಿರುತ್ತೇನೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ಇಂದು ಗುರುವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ 2023-24ನೇ ವರ್ಷದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳಕ್ಕೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ ಪರಿಣಾಮ ಸರಕಾರ ಸ್ಪಂದಿಸಿದೆ. ಈಗ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಹೊಸದಾಗಿ ತಲಾ 100 ಮನೆಗಳನ್ನು ಮಂಜೂರು ಮಾಡುವಂತೆ ಸದನದ ಒಳಗೆ ವಸತಿ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಮನೆಗಳು ಮಂಜೂರಾಗಲಿವೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯ ಕೃಷ್ಣಾನಗರದಲ್ಲಿ ಗ್ರಾ. ಪಂ. ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಸುನೀಲಗೌಡ ಪಾಟೀಲ ಮಾತನಾಡಿದರು

ಶಾಸಕರ ಮಾದರಿಯಲ್ಲಿ ಗ್ರಾ. ಪಂ. ತಾ. ಪಂ., ಜಿ. ಪಂ. ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳಿಗೆ ಬಸ್ ಪಾಸ್ ಸೌಲಭ್ಯ, ಅವರ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಈಗಾಗಲೇ ಹೋರಾಟ ನಡೆಸಿದ್ದೇನೆ. ಅಷ್ಟೇ ಅಲ್ಲ, ಗ್ರಾ. ಪಂ. ಗಳಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚುವರಿ ಅನುದಾನ ನೀಡುವಂತೆಯೂ ಸರಕಾರದ ಗಮನ ಸೆಳೆಯುತ್ತಿರುವುದಾಗಿ ಸುನೀಲಗೌಡ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಬಸನಗೌಡ ಡಿ. ಪಾಟೀಲ, ಶ್ರೀನಿವಾಸ ನಿಡೋಣಿ, ಸಂಜೀವಗೌಡ ಪಾಟೀಲ, ಗ್ರಾ. ಪಂ. ಅಧ್ಯಕ್ಷ ಅನೀಲ ಕನಮಡಿ, ಉಪಾಧ್ಯಕ್ಷೆ ಶಾರದಾ ಮುತ್ತಪ್ಪ ಹರಿಜನ, ಸದಸ್ಯರಾದ ಭೀಮಶಿ ಮಾಸರೆಡ್ಡಿ, ಸುಶೀಲ ಯರಗಟ್ಟಿ, ಆಶಾ ಕಟ್ಟಿಮನಿ, ಮುಖಂಡರಾದ ಲಕ್ಷ್ಮಣ ಚಿಕ್ಕದಾನಿ, ರಮೇಶ ಯರಗಟ್ಟಿ, ಲಕ್ಷ್ಮಣ ಕಜ್ಜಿಡೋಣಿ, ಗೋವಿಂದರೆಡ್ಡಿ, ಸಿದ್ದು ಬಿರಾದಾರ, ಸಂಗಣ್ಣ ಶಿರಬೂರ, ಅಶೋಕ ಕರೇಣಿ, ಕೆ. ಪಿ. ಶಿರಬೂರ, ರಮೇಶ ಯರಗಟ್ಟಿ, ತಿರುಪತಿ ಬಿರಾದಾರ, ಪಿಡಿಓ ಮಹಾಂತಮ್ಮ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌