ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ ಮಾಧ್ಯಮವಾಗಿದೆ- ಎಸ್. ಆರ್. ಮೂಗನೂರಮಠ

ಬಾಗಲಕೋಟೆ:  ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ  ಮಾಧ್ಯಮವಾಗಿದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಹೇಳಿದ್ದಾರೆ.

ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಬಾಗಲಕೋಟೆಯ ಬಿಈಸಿ ಧ್ವನಿ 90.4 ಎಫ್.ಎಮ್.ನಲ್ಲಿ ಪ್ರತಿ ಸೋಮವಾರ ಪ್ರಸಾರವಾಗುವ ಸಂಪೂಣ೯ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಕಾಯ೯ಕ್ರಮದ ಭಿತ್ತಿಚಿತ್ರಪಟ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೇಡಿಯೋ ಅತ್ಯಂತ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪುವ ಕಡಿಮೆ ವೆಚ್ಚದ ಪ್ರಬಲ ಸಂವಹನ ಮಾಧ್ಯಮವಾಗಿದೆ.  ರೇಡಿಯೋ ಸಮಾಜದ ವೈವಿಧ್ಯತೆಯ ಅನುಭವವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು, ಜನರಿಗೆ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನರಂಜನೆ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಹಿತಿ  ಮಾಧ್ಯಮವಾಗಿದೆ ಮಾತ್ರವಲ್ಲದೆ, ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಸಹ ಆಗಿದೆ ಎಂದು ಅವರು ಹೇಳಿದರು.

ಬಾಗಲಕೋಟೆ ಬಿಈಸಿ ಧ್ವನಿ 90.4 ಎಫ್.ಎಂ ಸ್ಟೇಷನ್ ಮ್ಯಾನೇಜರ ಭರತ ಬಡಿಗೇರ ಮಾತನಾಡಿ, ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ವೈದ್ಯರು ರೇಡಿಯೋ ಸಂವಾದದ ಮೂಲಕ ಜನಸಾಮಾನ್ಯರಲ್ಲಿ ಹೋಮಿಯೋಪಥಿ ಅರಿವು- ಜ್ಞಾನ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಅಭಿನಂದನಾಹ೯ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಅರುಣ ಹೂಲಿ ಮಾತನಾಡಿ, ನಮ್ಮ ಕಾಲೇಜಿನ ವೈದ್ಯ ಉಪನ್ಯಾಸಕರಿಗೆ ಮತ್ತು ವೈದ್ಯ ವಿದ್ಯಾಥಿ೯ಗಳಿಗೆ ಪ್ರತಿಭೆಯನ್ನು ಹೊರಹಾಕಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ರೇಡಿಯೋ ಸಂವಾದದ ಸಂಯೋಜಕರಾದ ಡಾ.ರವಿ.ಎಸ್.ಕೋಟೆಣ್ಣವರ ಡಾ.ವಿಜಯಲಕ್ಷ್ಮಿ ಪಾಟೀಲ ಉಪಸ್ಥಿತರಿದ್ದರು.

ವಿದ್ಯಾಥಿ೯ನಿ ವಿಜಯಲಕ್ಷ್ಮಿ ಹವಾಲ್ದಾರ ಸ್ವಾಗತಿಸಿದರು.  ಆನಂದ ಒಡೆಯರ ವಂದಿಸಿದರು.   ಹಾಗೂ ಶ್ರೇಯಾ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌