Year End Poem: 2023 ವರ್ಷಾಂತ್ಯದ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ ರಚಿಸಿರುವ ಕವನ

ವಿಜಯಪುರ: ಸಾಕಷ್ಟು ನಲಿವು ಮತ್ತು ನೋವಗಳನ್ನು ನೀಡಿದ ವರ್ಷ 2023.  ಈ ವರ್ಷದಲ್ಲಿ ಹಲವರಿಗೆ ಒಳ್ಳೆಯದಾಗಿದ್ದರೆ, ಮತ್ತೆ ಕೆಲವರಿಗೆ ಸಂಕಷ್ಟ ತಂದಿದೆ.  ಈ ಸಂದರ್ಭದಲ್ಲಿ ಚರ್ಮರೋಗ ಖ್ಯಾತ ತಜ್ಞ ಮತ್ತು ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು  ನೆನಪು ಹೆಸರಿನಲ್ಲಿ ಕವಿತೆಯೊಂದನ್ನು ರಚಿಸಿದ್ದಾರೆ. ಮುಪ್ಪಾವಸ್ಥೆಯಲ್ಲಿರುವ ದಂಪತಿ ತಮ್ಮ ಯೌವ್ವನಾವಸ್ಥೆಯ ನೆನಪುಗಳನ್ನು ಸ್ಮರಿಸುವ ಪದ್ಯ ಇದಾಗಿದೆ.  ಅಲ್ಲದೇ, ಮುಂಬರುವ ಹೊಸ ವರ್ಷವನ್ನು ಸ್ವಾಗತಿಸುವ ಸಂದೇಶವೂ ಇದರಲ್ಲಿದೆ.

ಡಾ. ಅರುಣ ಚಂ. ಇನಾಮದಾರ ಅವರು ತಮ್ಮ ವೈದ್ಯಕೀಯ ವೃತ್ತಿ, ಸಂಶೋಧನೆಯ ಜೊತೆಗೆ ಕನ್ನಡ ಪಂಡಿತರಿಗೂ ಅರ್ಥೈಸಲು ಕಷ್ಟವಾಗಿರುವ ಅಲ್ಲಮಪ್ರಭುಗಳ ವಚನಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.  ಚರ್ಮರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಅರುಣ ಚಂ. ಇನಾಮದಾರ ರಚಿಸಿರುವ ಕವನ ಇಲ್ಲಿದೆ.

ಗೆಳತಿ

ಗೆಳತೀ…

ನೆನಪಿನಂಗಳದಲಿ ನೋಡು…

ಜೀವನದ ತಿರುಳ…

ಕಳೆದಾಯ್ತು ವರುಷ

ಹರುಷ ತುಂಬಿದ ಬಿಂಬದಲಿ…

ನಂಬು… ನನ್ನ

ನಿನಗಿಂತ ಬೇರಿಲ್ಲ ಯಾರೂ..

ಬೇಕಿಲ್ಲ ಯಾರೂ…

ನಿನ್ನೆಯ ನಗು ನಾಳೆಗೂ ಇರಲಿ…

ಹೊಸ ವರ್ಷ ಬರಲಿ..

ಹರ್ಷ ತರಲಿ…

ನಾನು- ನೀನು ಜೋಡಿ…

ಜೀವನವೆಂಬ ಎತ್ತಿನ ಗಾಡಿ

ನಿನ್ನೆಯ ಕನಸುಗಳನ್ನು ಮೆಲುಕು ಹಾಕೋಣ..

ನಾಳೆಗಳನ್ನು ಮಾಡೋಣ…

ಬಿಂಬ- ಪ್ರತಿಬಿಂಬದ ಆಟ ಆಡೋಣ ಬಾ ಗೆಳತಿ…

ಜೀವನವೆಂಬ ಗೆಲುವಿನ ದಡ ಸೇರೋಣ…

-ಅರುಣ ಚಂ. ಇನಾಮದಾರ.

Leave a Reply

ಹೊಸ ಪೋಸ್ಟ್‌