ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾವಿತ್ರಿಬಾಯಿ ಫುಲೆ ಅವರ 193ನೇ ಜನ್ಮದಿನದ ಅಂಗವಾಗಿ 2024ನೇ ವರ್ಷದ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ನಾಟಕ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮವನ್ನು ಪ್ರಜಾ ಪರಿವರ್ತನ ವೇದಿಕೆ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಅವರು ಅಂದಿನ ದಿನಗಳಲ್ಲಿ ಮೆಲ್ಜಾತಿಯವರ ತುಳಿತ, ಹೆಣ್ಣುಮಕ್ಕಳು, ಶೊಷಿತ ಸಮುದಾಯ ಶಿಕ್ಷಣ ಪಡ ಪಡೆಯುವುದು ಅಪರಾದ ಎನ್ನುವ ಕಾಲದಲ್ಲಿ ತಾವು ಶಿಕ್ಷಣ ಪಡೆದು ಎಲ್ಲಾ ಜಾತಿ ಜನಾಂಗದ ಮಹಿಳೆಯರೂ ಶಿಕ್ಷಣ ಪಡೆಯಲು ಹೋರಾ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅನೇಕ ನೋವುಗಳನ್ನು ಅನುಭವಿಸಿದರೂ ಛಲಬಿಡದೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಇಂಥ ಮಾತೆಯ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ದಲಿತ ವಿದ್ಯಾರ್ಥಿ ಪರಿಷತ್ ಮಾಡುತ್ತಿರುವುದು ಹಮ್ಮೆಯ ವಿಷಯ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಸಾವಿತ್ರಿಬಾಯಿ ಫುಲೆ ಚಿತ್ರರಂಗದ ನಾಯಕ ನಾಯಕಿಯರಿಗಿಂತ ಅತ್ಯಂತ ಪ್ರಭಾವಿ ಮಹಿಳೆ. ಶಿಕ್ಷಣ ಕೇವಲ ಮೇಲ್ಜಾತಿಯರಿಗೆ ಸಿಮಿತ ಎನ್ನುವ ಕಾಲದಲ್ಲಿ ತನ್ನ ಪತಿ ಜ್ಯೋತಿಬಾ ಫುಲೆ ಅವರ ಸಂಪೂರ್ಣ ಬೆಂಬಲದಿಂದ ಶಿಕ್ಷಣ ಪಡೆದು ಎಲ್ಲರೂ ಶಿಕ್ಷಣ ಪಡೆಯುವಂತಾಗಲಿ ಎಂದು ಹೋರಾಟ ಮಾಡಿದ ಮಹಾನ ಮಹಿಳೆಯಾಗಿದ್ದಾರೆ. ಸಾವಿತ್ರಿಬಾಯಿ ಫುಲೆ ಅವರ ಜೀವನದ ಸಾಧನೆ ಕುರಿತು ಎಲ್ಲರೂ ಅರಿತು ನಮ್ಮ ಮುಂದಿನ ಪಿಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಪರಿಷತ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಪರಿಷತ್ತಿನ ಮುಂದಿನ ನಡೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಾವು ಸಮಾಜವನ್ನು ಕಟ್ಟುವಂಥ ಕೆಲಸ ಮಾಡಬೇಕೇ ಹೊರತು, ಸಮಾಜವನ್ನು ವಿಭಜಿಸುವ ಕೆಲಸ ಮಾಡಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬ ಆಶಯದಿಂದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿದ್ದಾರೆ. ಮಹಿಳೆಯರೂ ತಲೆ ಎತ್ತಿ ಬದುಕುಬೇಕು ಎಂಬ ಕಾರಣಕ್ಕೆ ಸಾವಿತ್ರಿಬಾಯಿ ಫುಲೆ ಸಾಕಷ್ಟು ಅವಮಾನಗಳ ಎದುರಿಸಿದರೂ ಹಿಂಜರಿಯದೆ ರಾಷ್ಟ್ರಕ್ಕೆ ಅಕ್ಷರದವ್ವ ಆಗಿದ್ದಾರೆ ಎಂದು ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪಾ. ಟಿಯೋಲಾ ಮೇಚೊಡಾ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಹಿರಿಯ ಹೋರಾಟಗಾರ ಬಲರಾಮ ನಾಯಕ ಮಾತನಾಡಿ, ದಲಿತ್ ವಿದ್ಯಾರ್ಥಿ ಪರಿಷತ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಪರಿಷತ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ಸಾಧಕಿಯರಿಗೆ 2024 ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಬಿಹಾರದ ದಲಿತ ವಿದ್ಯಾರ್ಥಿ ಪರಿಷತ್‌ನ ಹಬ್ಸಾನಾ, ರಾಜ್ಯ ಸಂಚಾಲಕ ಬಾಲಾಜಿ ಎಂ. ಕಾಂಬಳೆ, ಡಿವಿಪಿ ರಾಜ್ಯದ ಎಲ್ಲಾ ಜಿಲ್ಲೆಯ ಪಧಾಧಿಕಾರಿಗಳು, ನಾನಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.