ವಿಜಯಪುರದಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ- ಪೇಜಾವರ ಶ್ರೀ, ಬಸವಲಿಂಗ ಸ್ವಾಮೀಜಿ ಚಾಲನೆ

ವಿಜಯಪುರ: ನಗರದ ಕಂದಗಲ ಹಣಮಂತರಾಯ ರಂಗ ಮಂದಿರದಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಸಂಸ್ಕೃತ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ.  ಇಂದು ಅದು ಕೇವಲ ಕೆಲವೇ ಜನ ಬಳಿಕೆ ಮಾಡುವ ಭಾಷೆಯಾಗಿದೆ.  ದೇಶದ ಪ್ರತಿಯೊಂದು ಭಾಷೆಯಲ್ಲೂ ನಾವು ಶೇ. 60ರಷ್ಟು ಸಂಸ್ಕೃತ ಭಾಷೆಯ ಶಬ್ದಗಳನ್ನು ಬಳಿಕೆ ಕಾಣುತ್ತೇವೆ.  ನಿಸರ್ಗದ ಪ್ರಾಣಿ ಪಕ್ಷಿಗಳ ಕೂಗುವ ಧ್ವನಿಯಲ್ಲಿಯೂ ನಾವು ಸಂಸ್ಕೃತವನ್ನು ಕಾಣಬಹುದು.  ಎಲ್ಲ ಜನರು ಸಂಸ್ಕೃತ ಭಾಷೆಯನ್ನು ಕಲಿತರೆ ಸಂಸ್ಕೃತಿಯೊಂದಿಗೆ ಸಂಸ್ಕೃತದಲ್ಲಿ ಸರಳವಾಗಿ ವ್ಯವಹರಿಸಬಹುದು ಎಂದು ಹೇಳಿದರು.

ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳು ಯಾವತ್ತೂ ದೇಶದ ಆಸ್ತಿ.  ಅವರು ಸಂಸ್ಕೃತ ಭಾಷೆಯನ್ನು ಬೆಳೆಸಿ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮಾತನಾಡಿ, ಎಲ್ಲ ಭಾಷೆಗಳಿಗೆ ಅದರದೇ ಆದ ಮಹತ್ವವಿದೆ.  ಆದರೆ, ಸಂಸ್ಕೃತ ದೇವಭಾಷೆ ಎಂದು ಅನೇಕರು ಅದನ್ನು ದೂರವಿಡುವ ಪ್ರಸಂಗ ಈಗ ಕಂಡು ಬರುತ್ತದೆ.  ಅತ್ಯಂತ ಕಡಿಮೆ ಜನ ಸಂಸ್ಕೃತ ವಿಷಯವನ್ನು ತಮ್ಮ ಪಠ್ಯಕ್ರಮವಾಗಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಇತರ ಭಾಷೆಯ ಅಧ್ಯಯನದೊಂದಿಗೆ ಸಂಸ್ಕೃತ ಭಾಷೆಯನ್ನು ಕೂಡ ಅಭ್ಯಸಿಸಬೇಕು.  ಆಯೋಜಕರು ಈ ವಿಷಯದ ಕುರಿತು ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಪ್ರೋತ್ಸಾಹಿಸುತ್ತಿರುವದು ಒಳ್ಳೆಯ ಕಾರ್ಯವಾಗಿದ ಎಂದು ಶ್ಲಾಘಿಸಿದರು.

ವಿಜಯಪುರ ನಗರದಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿದರು

ಪದವಿ ಪೂರ್ವ ಶಿಕ್ಷಣಾಧಿಕಾರಿ ಸಿ. ಕೆ. ಹೊಸಮನಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ. ಎಸ್. ಪಾಟೀಲ, ಮಧ್ವಾಚಾರ್ಯ ಮೊಖಾಶಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಕೃತ ಭಾರತಿ ಸಂಸ್ಥೆಯವರಿಂದ ಸಂಸ್ಕೃತ ಭಾಷಾ ಹಾಗೂ ವಿಜ್ಞಾನದ ಕುರಿತು ಪ್ರದರ್ಶನ ನಡೆಯಿತು.  ಅನೇಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನಾಟಕ ನೃತ್ಯ, ಗೀತೆ ಪ್ರಗರ್ಶಿಸಿದರು.  ಹಾಗೂ 3ಆರ್ ಗಾರ್ಮೆಂಟ್ಸ ಎನ್ನುವ ಸಂಸ್ಥೆಯ ನೌಕರರು ವ್ಯವಹಾರದಲ್ಲಿ ಸಂಸ್ಕೃತ ಎನ್ನುವ ರೂಪಕವನ್ನು ಸಾದರ ಪಡಿಸಿದರು.

ಡಿಡಿಪಿಐ ಎನ್. ಎಚ್. ನಾಗೂರ, ಡಿಡಿಪಿಐ ಕಚೇರಿಯ ಶಾಖಾಧಿಕಾರಿ ಬಿ. ಟಿ. ಗೋಂಗಡಿ, ಜಿಲ್ಲಾ ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾಲಯದ ಕಾರ್ಯಾಧ್ಯಕ್ಷ ಆನಂದ ಜೋಶಿ, ಪ್ರಾಂತ ಮಂತ್ರಿ ಸಂಸ್ಕೃತ ಭಾರತಿ ಉತ್ತರ ಕರ್ನಾಟಕದ ರಾಮಸಿಂಗ ರಜಪೂತ, ಸಂಸ್ಕೃತ ಮಂಚo ಅಧ್ಯಕ್ಷರು ಎಂ. ಆರ್. ಜೋಶಿ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್. ಬಿ. ಕೊಟ್ನಾಳ, ವಿವಿ ಸಂಘo ರಾಜೇಶ ದರಬಾರ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ ಎಸ್ ಪಾಟೀಲ, ಬೆನಕಟ್ಟಿ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ. ಡಿ. ಆರ್. ನಿಡೋಣಿ, ಆನಂದ ಬಿರಾದಾರ, ಜಯತೀರ್ಥ ಕುಲಕರ್ಣಿ, ಡಾ. ವಿ. ಬಿ. ಗ್ರಾಮಪುರೋಹಿತ ಮುಂತಾದವರು ಉಪಸ್ಥಿತರಿದ್ದರು.

ಡಾ. ಗಿರೀಶ ಅಕಮಂಚಿ ಸ್ವಾಗತಿಸಿದರು. ವೇದನಿಧಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದ್ಯುಮ್ನಾಚಾರ ಪೂಜಾರ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌