ಕಾಲೇಜು, ವಿವಿ ಶುಲ್ಕ ಶೇ. 10ರಷ್ಟು ಹೆಚ್ಚಳಕ್ಕೆ ಎಬಿವಿಪಿ ಖಂಡನೆ- ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿರನ್ನಾಗಿ ಮಾಡುವ ಹುನ್ನಾರ ಆರೋಪ

ವಿಜಯಪುರ: ರಾಜ್ಯ ಸರಕಾರ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶುಲ್ಕವನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿರುವುದನ್ನು ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಖಂಡಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಣವು ಎಲ್ಲರಿಗೂ ಸಿಗುವಂತಾಗಬೇಕು.  ಅದು ಕೇವಲ ಉಳ್ಳವರ ಸ್ವತ್ತು ಆಗಬಾರದು.  ಬಡ ಪ್ರತಿಭಾವಂತ, ಕೂಲಿ ಕಾರ್ಮಿಕರು, ರೈತಾಪಿ ವರ್ಗದ,  ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಸುಲಭವಾಗಿ ಮತ್ತು ಕನಿಷ್ಠ ಶುಲ್ಕ ರಾಜ್ಯ ಸರಕಾರ ಶೇ.10ರಷ್ಟು ಶುಲ್ಕವನ್ನು  ಹೆಚ್ಚಿಸಲು ಒಪ್ಪಿಗೆ ನೀಡಿರುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಸರಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಈ ರಾಜ್ಯದ ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿವೆ.  ಅವುಗಳನ್ನು ಆರ್ಥಿಕ ಲಾಭದ ದೃಷ್ಟಿಯಲ್ಲಿ ಲೆಕ್ಕ ಹಾಕಬಾರದು.  ಸಾಧ್ಯವಾದರೆ ಉಚಿತವಾಗಿಯೇ ನೀಡುವಂತಾಗಬೇಕು.  ಆದರೆ, ವಿವಿ ಗಳಿಗೆ ಅನುದಾನ ನೀಡಲg ವಿಫಲವಾಗಿರುವ ರಾಜ್ಯ ಸರಕಾರ ವಿದ್ಯಾರ್ಥಿಗಳಿಂದ ಈ ರೀತಿಯಾಗಿ ಶುಲ್ಕದ ಮೂಲಕ ಹಣ ನೀಡಲು ಹೊರಟಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಹಲವಾರು ಭಾಗ್ಯಗಳನ್ನ ನೀಡುತ್ತೇವೆ ಎಂದು ಹೊರಟಿರುವ ಸರಕಾರ ವಿದ್ಯಾರ್ಥಿಗಳ ಮೇಲೆ ಈ ರೀತಿಯ ಹೊರೆಯನ್ನ ಹೇರಿ ಹಣವನ್ನು ಕ್ರೂಡೀಕರರಿಸಲು ಮುಂದಾಗಿರುವುದು ಶೋಚನೀಯ ಸಂಗತಿಯಾಗಿದೆ.  ಇದು ಬಡ ಪ್ರತಿಭಾವಂತ ಮಕ್ಕಳನ್ನು ಶಿಕ್ಷಣದಿಂದಲೇ ವಂಚಿಸುವ ಹುನ್ನಾರವಾಗಿದೆ. ಸರಕಾರಿ ಸಂಸ್ಥೆಗಳೇ ಶುಲ್ಕ ಏರಿಕೆಯ ದಾರಿ ಹಿಡಿದರೆ ಖಾಸಗಿ ಸಂಸ್ಥೆಗಳು ಕೂಡ ಇದನ್ನು ಹಿಂಬಾಲಿಸುತ್ತವೆ.  ವಿದ್ಯಾರ್ಥಿಗಳ ವಿರೋಧಿ ನಿರ್ಧಾರವನ್ನು ಸರಕಾರ ತಕ್ಷಣವೇ ಕೈಬಿಡಬೇಕು.  ಇಲ್ಲದಿದ್ದರೆ ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಸಚಿನ ಕುಳಗೇರಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುದ್ದಾರೆ.

Leave a Reply

ಹೊಸ ಪೋಸ್ಟ್‌