ಬಸವ ನಾಡಿನ ಯುವಕ ದೂರದ ಅಮೇರಿಕದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ. ಯುವಕ ನವೀನ ಹಾವಣ್ಣನವರ ದೂರದ ಅಮೇರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.

ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಪೋರ್ಡ್ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಅವರು ಕೌನ್ಸಲಿಲರ್ ಆಗಿ ಚುನಾಯಿತರಾಗಿದ್ದಾರೆ.  ಈ ಕೌನ್ಸಿಲರ್ ಚುನಾವಣೆಯಲ್ಲಿ  ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ದೆ ಮಾಡಿದ್ದ ನವೀನ ಹಾವಣ್ಣವರ, ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ವಿರುದ್ಧ 33 ಮತಗಳ ಅಂತರಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.  ಅಷ್ಟೇ ಅಲ್ಲ, ಶುಕ್ರವಾರ ಪೀಟ್ಸ್ ಪೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಳೆದ 14 ವರ್ಷಗಳಿಂದ ಅಮೇರಿಕಾದಲ್ಲಿರುವ ವಿಜಯಪುರ ಮೂಲದ ನವೀನ ಹಾವಣ್ಣವರ ಪತ್ನಿ ಕ್ಯಾಥರಿನ್ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.  ವಿಜಯಪುರದಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಪೂರ್ಣಗೊಳಿಸಿರುವ ಅವರು, ಹಾನಸದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಶಿಕ್ಷಣ ಮುಗಿಸಿದ್ದಾರೆ.

ಅಮೇರಿಕದಲ್ಲಿ ಕೌನ್ಸಿಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನವೀನ ಹಾವಣ್ಣವರ

ನಂತರ ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಅವರು, ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ್ದಾರೆ.  2009-10 ರಲ್ಲಿ ಅಮೇರಿಕಾಕ್ಕೆ ತೆರಳಿದ ನವೀನ ಹಾವಣ್ಣನವರ, ಅಮೇರಿಕಾದಲ್ಲಿ ಸಾಪ್ಟವೇರ್ ಎಂಜೀನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮಗನ ಸಾಧನೆಗೆ ವಿಜಯಪುರದಲ್ಲಿರುವ ನವೀನ ಹಾವಣ್ಣವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.  ಅವರ ತಂದೆ ಪರಪ್ಪ ಮತ್ತು ತಾಯಿ ರೇಣುಕಾ ಹಾಗೂ ಕುಟುಂಬದವರಲ್ಲಿ ಈ ವಿಷಯ ಸಂತಸ ತಂದಿದೆ.

ಬಸವ ನಾಡು ವೆಬ್ ಕೂಡ ನವೀನ ಹಾವಣ್ಣವರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

Leave a Reply

ಹೊಸ ಪೋಸ್ಟ್‌