ಕೇವಲ 18 ವರ್ಷಗಳಲ್ಲಿ ರೂ. 3000 ಕೋ. ಠೇವಣಿ ಸಂಗ್ರಹಿಸಿದ ಸಿದ್ಧಸಿರಿ- ರಾಜ್ಯಾದ್ಯಂತ ಸಾವಿರಾರು ಯುವಜನರಿಗೆ ಉದ್ಯೋಗ- ರಾಘವ ಅಣ್ಣಿಗೇರಿ

ವಿಜಯಪುರ: ಸಿದ್ಧಸಿರಿ ಸೌಹಾರ್ದ ಕೇವಲ 18 ವರ್ಷಗಳಲ್ಲಿ ರೂ. 3000 ಕೋ. ಠೇವಣಿ ಪೂರೈಸಿ ದಾಖಲೆ ನಿರ್ಮಿಸಿದ್ದು, ರಾಜ್ಯಾದ್ಯಂತ ನೂರಾರು ಯುವಕ- ಯುವತಿಯರಿಗೆ ಉದ್ಯೋಗ ಕಲ್ಪಿಸಿದೆ ಎಂದು ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಹೇಳಿದ್ದಾರೆ. 

ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ಸಭೆಯಲ್ಲಿ ಮಾತನಾಡಿದ ಅವರು, ಸೌಹಾರ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆ ದಕ್ಷ ಆಡಳಿತ ಮಂಡಳಿಯನ್ನು ಹೊಂದಿದೆ.  ರಾಜ್ಯಾದ್ಯಂತ 158 ಶಾಖೆಗಳು, ರೂ. 1800 ಕೋ. ಸಾಲ, ರೂ. 43 ಕೋ. ಶೇರು ಹಾಗೂ ರೂ. 3100 ಕೋ. ದುಡಿಯುವ ಬಂಡವಾಳ ಹೊಂದಿದೆ.  ರಾಜ್ಯಾದ್ಯಂತ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುವುದರೊಂದಿಗೆ ಅನೇಕ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಚಿಂಚೋಳಿಯಲ್ಲಿ ಇಥೆನಾಲ್ ಮತ್ತು ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲಾಗಿದ್ದು, ವಿಜಯಪುರ ನಗರದಲ್ಲಿ ಜೆಎಸ್ಎಸ್ ಆಸ್ಪತ್ರೆ, ಕಗ್ಗೋಡ ಗ್ರಾಮದಲ್ಲಿ ಗೋ ಶಾಲೆ ಪ್ರಾರಂಭಿಸಿ ಕಸಾಯಿಖಾನೆಗೆ ಹೋಗುವ ಸಾವಿರಾರು ಗೋವುಗಳನ್ನು ರಕ್ಷಿಸಿ ಪೋಷಿಸಲಾಗುತ್ತಿದೆ.  ಸಿದ್ಧಸಿರಿ ಇಂಧನ ಕೇಂದ್ರ, ರೈತರ ಗೋದಾಮು, ಭಾರತೀಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ಸಿದ್ಧಸಿರಿ ಚಿಟ್‌ ಫಂಡ್, ಸಿದ್ಧಸಿರಿ ಕೋಲ್ಡ್ ಸ್ಟೋರೇಜ್, ಸಿದ್ಧಸಿರಿ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಮಾದರಿಯಾಗಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ನಡೆಯಿತು

ಸಿದ್ಧಸಿರಿಯ ಷೇರುದಾರರಿಗೆ ಶೇ. 25 ಲಾಭಾಂಶ ನೀಡಿ, ಠೇವಣಿದಾರರಿಗೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿದೆ.  ಜೊತೆಗೆ ವಯೋವೃದ್ದರು, ಸೈನಿಕರು, ಮಾಜಿ ಸೈನಿಕರು, ದಿವ್ಯಾಂಗರು, ವಿಧವೆಯರಿಗೆ ಶೇ. 0.5 ರಷ್ಟು ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ.  ತಂಗಡಗಿ ಗ್ರಾಮದಲ್ಲಿ ಶಾಖೆಯು ಉತ್ತಮ ಸೇವೆ ನೀಡುವುದರೊಂದಿಗೆ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ.  ಮುದ್ದೇಬಿಹಾಳ ತಾಲೂಕಿನಲ್ಲಿ ಆರೂ ಶಾಖೆಗಳನ್ನು ಹೊಂದಿ ಮನೆ ಮನೆಗೆ ಸಿದ್ಧಸಿರಿಯ ಸೇವೆಯನ್ನು ಸಿಬ್ಬಂದಿಗಳು ತಲುಪಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ರಾಮಪ್ಪ ಡೊಂಗರಗಾಂವಿ, ಬಸವರಾಜ ಡೊಂಗರಗಾಂವಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಅಶೋಕ ತಂಗಡಗಿ, ಮಲಕಾಜಪ್ಪ ಹೊಳಿ, ಬಸವರಾಜ ಸಜ್ಜನ, ಗುರುಸಂಗಪ್ಪ ಮೋಟಗಿ, ಎಂ. ಯು. ಹುಂಡೇಕಾರ, ಶ್ರೀಶೈಲ ಅಳ್ಳಗಿ, ಜಗದೇವಿ ಹೊಕ್ರಾಣಿ, ಪಾರ್ವತವ್ವ ಅಳ್ಳಗಿ. ಸಿಬ್ಬಂದಿಯಾದ ಚಾಮರಾಜ ಬೇಲಾಳ, ಯೋಗೇಶ ಹಳ್ಳಿ, ಸಂದೀಪ ಗುಡೂರ, ಶೃತಿ ಬಿರಾದಾರ, ರೇಖಾ ಬೇವೂರ, ಅಡವೇಶ ಪೌಡದ, ಸಂಗಮೇಶ ಕೋಲಕಾರ, ಶರಣಬಸಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌