ವಿಜಯಪುರ: ವಿಜಯಪುರ ನಗರದಲ್ಲಿರುವ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿ ಒಂದು ವಾರ ವಾರ್ಷಿಕ ಎನ್ಎಸ್ಎಸ್ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮ ಪಂಚಾಯಿತಿ, ಮಹಲ್, ಐನಾಪೂರ ಗ್ರಾಮದ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚತೆಗೆ ಶ್ರಮದಾನ ಮಾಡಿದರು. ಈ ಶಿಬಿರದಲ್ಲಿ ಪರಿಸರ ರಕ್ಷಣೆ, ಆರೋಗ್ಯ ಕಾರ್ಯಕ್ರಮ, ನಾನಾ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಯಿತ್ತು.
ಈ ಶಿಬಿರದ ಸಮಾರೋಪ ಸಮಾರಂಭವನ್ನು ಪಿಯು ಉಪನಿದೇರ್ಶಕ ಡಾ. ಸಿ. ಕೆ. ಹೊಸಮನಿ ಉದ್ಘಾಟಿದರು. ಕಾಲೇಜಿನ ಪ್ರಾಚಾರ್ಯ ಬಿ. ಬಿ. ಗಂಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬುರುಣಾಪುರ ಮಠದ ಶ್ರೀ ಯೋಗೇಶ್ವರಿ ಮಾತಾಜಿ ಸಾನಿಧ್ಯ ವಹಿಸಿದ್ದರು.
ಈ ಶಿಬಿರದ ಘಟಕಾಧಿಕಾರಿ ಜೆ. ಎಂ. ಸಾಲೋಟಗಿ, ಉಪನ್ಯಾಸಕರಾದ ಎಸ್. ಜಿ. ಕುಂಬಾರ, ಬಿ. ಕೆ. ಉಂಬರಜೆ, ಎಸ್. ಆರ್. ಮೇತ್ರಿ, ಎಲ್. ಜಿ. ಕುಂಬಾರ, ಎಚ್. ಎಲ್. ದೊಡಮನಿ, ಎಂ. ಸಿ. ನಾರಾಯಣಕರ, ಶಿವಾನಂದ ಧನ್ಯಾಳ, ನಿವೃತ್ತ ಉಪನ್ಯಾಸಕ ಎಸ್. ಎಸ್. ಸಿದರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.