ಜೆಜೆಎಂ ಯೋಜನೆಗೆ ಗ್ರಾ. ಪಂ. ಸಮುದಾಯ ವಂತಿಗೆ ಪಡೆಯದಂತೆ ಮಾಡಿದ ಹೋರಾಟ ಫಲ ನೀಡಿದೆ- ವಿಪ ಶಾಸಕ ಸುನೀಲಗೌಡ ಪಾಟೀಲ
ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ. ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ. 1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ […]
ಶ್ರೀ ಸಿದ್ದೇಶ್ವರ ದನಗಳ ಜಾತ್ರೆಯನ್ನು ವ್ಯವಸ್ಥಿತವಾಗಿ ಆಯೋಜಿಸಿ- ಸಚಿವ ಶಿವಾನಂದ ಎಸ್. ಪಾಟೀಲ ಸೂಚನೆ
ವಿಜಯಪುರ: ಪ್ರತಿ ವರ್ಷದಂತೆ ವಿಜಯಪುರ ತಾಲೂಕಿನ ತೊರವಿಯಲ್ಲಿ ಜ.10ರಿಂದ 18ರವರೆಗೆ ಜರುಗುವ ಸಂಕ್ರಮಣ ಸಿದ್ದೇಶ್ವರ ಜಾನುವಾರು ಜಾತ್ರೆಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವಂತೆ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿದ್ದೇಶ್ವರ ಜಾನುವಾರು ಜಾತ್ರೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನುವಾರು ಜಾತ್ರೆಯಲ್ಲಿ ಗಡಿ ಭಾಗವಾಗಿರುವುದರಿಂದ ಮಹಾರಾಷ್ಟç ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ರೈತರು, ಜಾನುವಾರುಗಳು […]
ಹೈಕಮಾಂಡಿಗೆ ಎಲ್ಲ ವಿವರಿಸಿದ್ದೇನೆ- ನನ್ನನ್ನು ಯಡಿಯೂರಪ್ಪ ಬಿಜೆಪಿಗೆ ಕರೆತಂದಿಲ್ಲ- ರಾಮಲಿಂಗಾರೆಡ್ಡಿ ನಿರ್ಧಾರ ಸ್ವಾಗತಾರ್ಹ- ಯತ್ನಾಳ
ವಿಜಯಪುರ: ರಾಜ್ಯದ ವಿದ್ಯಮಾನಗಳ ಕುರಿತು ಹೈಕಮಾಂಡಿಗೆ ಎಲ್ಲ ವಿವರಿಸಿದ್ದೇನೆ. ಯಡಿಯೂರಪ್ಪ ನನ್ನನ್ನು ಬಿಜೆಪಿಗೆ ಕರೆತಂದಿಲ್ಲ. ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ತಾವು ಮಾಡಿರುವ ಆರೋಪಗಳ ಕುರಿತು ಹೈಕಮಾಂಡಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ದೆಹಲಿಯ ಭೇಟಿ ಫಲಪ್ರದವಾಗಿದೆ. ದೆಹಲಿಗೆ ಬರಲು ರಾಷ್ಟ್ರೀಯ […]
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ, ರಾಯಭಾರಿಯಾಗಿ ಘೋಷಿಸಲು ಸ್ವಾಮೀಜಿ, ಚಿಂತಕರ ಮನವಿ- ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ- ಸಿದ್ದರಾಮಯ್ಯ
ಬೆಂಗಳೂರು: ಅಣ್ಣ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿ ಘೋಷಿಸಬೇಕು ಎನ್ನುವ ಒಕ್ಕೋರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಈ ಕುರಿತು ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಚನ ಚಳವಳಿಯ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಒತ್ತಾಯಿಸಿ ತರಳಬಾಳು ಜಗದ್ಗುರುಗಳು ಮತ್ತು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಸ್ವಾಮೀಜಿಗಳು, […]
ವೃಕ್ಷೊಥಾನ್ ಹೆರಿಟೇಜ್ ರನ್- 2023: ಅತ್ಯಧಿಕ ಓಟಗಾರರು ಪಾಲ್ಗೊಂಡ 3.50 ಕಿ. ಮೀ. ಫಲಿತಾಂಶ ಪ್ರಕಟ
ವಿಜಯಪುರ: ಡಿಸೆಂಬರ್ 24 ರಂದು ಆಯೋಜಿಸಲಾಗಿದ್ದ ವೃಕ್ಷೊಥಾನ್ ಹೆರಿಟೇಜ್ ರನ್-2023ರ 3.50 ಕಿ. ಮೀ. ಓಟದ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ. ಸುಮಾರು 6000 ಕ್ರೀಡಾಪಟುಗಳು 3.50 ಕಿ. ಮೀ. ಓಟದಲ್ಲಿ ಪಾಲ್ಗೊಂಡಿದ್ದರು. ಈ ಓಟಕ್ಕೆ ಯಾವುದೇ ಸಮಯ ನಿಗದಿ ಪಡಿಸಿರಲಿಲ್ಲ. ಅಲ್ಲದೇ, ಸಾವಿರಾರು ಜನ ಇದರಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಧಾನಗಳಲ್ಲಿ ಪರಿಶೀಲನೆ ನಡೆಸಿ, ದತ್ತಾಂಶಗಳನ್ನು ಸಂಗ್ರಹಿಸಿ ಈಗ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್ ರೂಟ್ ಸಮಿತಿ ಉಸ್ತುವಾರಿ ಸಂಕೇತ ಬಗಲಿ ತಿಳಿಸಿದ್ದಾರೆ. 3.50 […]
ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿಗಾಗಿ ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ವಾಕ್ ಆ್ಯಂಡ್ ರನ್
ವಿಜಯಪುರ: ಡ್ರಗ್ಸ್ ಮತ್ತು ಮಾದಕ ದ್ರವ್ಯ ಸೇವೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ನಗರದಲ್ಲಿ ವಾಕ್ ಆ್ಯಂಡ್ ರನ್ ನಡೆಸಿದರು. ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ವಾಟರ್ ಟ್ಯಾಂಕ್, ಗೋದಾವರಿ ಹೋಟೆಲ್ ವರೆಗೆ ನಡೆಯಿತು. ನಂತರ ಅಲ್ಲಿಂದ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿತು. ಈ ಸಂದರ್ಭದಲ್ಲಿ ಕೈಯ್ಯಲ್ಲಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದಾಗುವ […]